ಮುಂಬಯಿ : ಕುಲಾಲ ಸಂಘ ಮುಂಬಯಿಯ ಚರ್ಚ್‌ಗೇಟ್ – ದಹಿಸರ್ ವತಿಯಿಂದ 9ನೇ ವಾರ್ಷಿಕ ಸ್ನೇಹ ಸಮ್ಮಿಲನವು ನ, 29, ಭಾನುವಾರ ಬೆಳಿಗ್ಗೆ 9 ರಿಂದ ನಂದದೀಪ್ ವಿದ್ಯಾಲಯ, ಭಾನುಬೆನ್ ನಾನಾವಟಿ ಕಲಾಗರ್, ಜಯಪ್ರಕಾಶ್ ನಗರ, ರೋಡ್ ನಂ. 4, ಗೋರೆಗಾಂವ್ (ಪೂರ್ವ), ಮುಂಬಯಿ ಇಲ್ಲಿ ಕುಲಾಲ ಸಂಘ ಮುಂಬಯಿಯ ಅಧ್ಯಕ್ಷರಾದ ರಘು ಎ. ಮೂಲ್ಯ ಅವರ ಅಧ್ಯಕ್ಷತೆಯಲ್ಲಿ, ಚರ್ಚ್‌ಗೇಟ್ – ದಹಿಸರ್ ಸಮಿತಿಯ ಕಾರ್ಯಾಧ್ಯಕ್ಷರಾದ ಆನಂದ್ ಕೆ. ಕುಲಾಲ್ ಅವರು ಸಾರರ್ಥ್ಯದಲ್ಲಿ ನಡೆಯಲಿದೆ.

ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಜ್ಯೋತಿ ಕೋ. ಆಪ್, ಕ್ರೆಡಿಟ್ ಸೊಪ್ಯಾಟಿಯ ಕಾರ್ಯಾಧ್ಯಕ್ಷರಾದ ಗಿರೀಶ್ ಬಿ. ಸಾಲಿಯಾನ್, ಉಧ್ಯಮಿ ಮಹಾದಾನಿ ಸುನಿಲ್ ಆರ್. ಸಾಲಿಯಾನ್, ಸಂಘದ ಸಿ.ಎಂ.ಎಂ. ಸ್ಥಳೀಯ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಸಂಜೀವ ಎನ್. ಬಂಗೇರ, ಕಾರ್ ಆಂಡ್ ಬೈಕ್ ಮುಖ್ಯ ಸಂಪಾದಕ ಗಿರೀಶ್ ವಿ. ಕರ್ಕೇರ, ಸ್ಕಂದಾ ಮೀಡಿಯಾ ಸರ್ವೀಸಸ್ ನ ಸಂಸ್ಥಾಪಕ ಮತ್ತು ಸಿ. ಇ. ಒ. ಯೋಗೇಶ್ ಸಾಲಿಯಾನ್, ಸಂಮ್ಮಾನ್ ಕೇಪಿಟಲ್ ಇಂಡಿಯಾ ಬುಲ್ಸ್ ಫೈನಾನ್ಸ್ ಇದರ ಟೀಮ್ ಲೀಡ್ ಸಂದೀಪ್ ಕೆ. ಸೀನ ಮೂಲ್ಯ, ಶಿರ್ವ ಮಂಚಕಲ್ ಶಶೀ ಕಿಚನ್ ಮಾಲಕಿ ಶ್ರೀಮತಿ ಶಶಿಕಲಾ ಕುಲಾಲ್ ಮತ್ತು ಶಿಕ್ಷಕಿ ಶ್ರೀಮತಿ ವಿಜಯ ಎಂ. ಮೂಲ್ಯ ಅವರು ಉಪಸ್ಥಿತರಿರುವರು.
ಈ ಸಂದರ್ಭದಲ್ಲಿ ಡಾ. ಮೊನಪ್ಪ ಮೂಲ್ಯ, (ಬಿ.ಎಸ್.ಸಿ. ಎಂಬಿಬಿಎಸ್), ಸಮಾಜ ಸೇವಕ ಹಾಗೂ ದಾನಿ ಶ್ರೀಧರ್ ಬಂಗೇರ, ಕಾಂದಿವಲಿ ಮತ್ತು ಸಮಾಜ ಸೇವಕಿ ಶ್ರೀಮತಿ ಪಾರ್ವತಿ ಡಿ. ಬಂಗೇರ ಅವರನ್ನು ಸನ್ಮಾನಿಸಲಾಗುವುದು.
ಡಾ. ಮೊನಪ್ಪ ಮೂಲ್ಯ, ಡಾ. ಸಹನಾ ಸಾಯಿನಾಥ್ ಸಾಲ್ಯಾನ್ , ಡಾ. ಸೋಹನ್ ಎಂ. ಮೂಲ್ಯ ಹಾಗೂ ಡಾ. ಕರಿಷ್ಮಾ ಸೋಹನ್ ಮೂಲ್ಯ ಅವರ ನೇತೃತ್ವದಲ್ಲಿ ಉಚಿತ ವೈದ್ಯಕೀಯ ತಪಾಸಣೆ ನಡೆಯಲಿದೆ.
ಅಂದು ಬೆಳಿಗ್ಗೆ ಭಜನೆ, ನೃತ್ಯ, ಮಕ್ಕಳ ಛದ್ಮವೇಶ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಪ್ರಭಂಧ ಸ್ಪರ್ಧೆ ಇತ್ಯಾದಿಗಳು ನಡೆಯಲಿದೆ. ಸಭಾಕಾರ್ಯಕ್ರಮದ ನಂತರ ಸದಸ್ಯರಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು, ಬಹುಮಾನ ವಿತರಣೆ ನಡೆಯಲಿದೆ.
ಸಮಾಜ ಬಾಂಧಾವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕುಲಾಲ ಸಂಘ ಮುಂಬಯಿಯ ಪರವಾಗಿ ಗೌರವಾಧ್ಯಕ್ಷ ಪಿ. ದೇವದಾಸ್ ಎಲ್. ಕುಲಾಲ್, ಉಪಾಧ್ಯಕ್ಷ ಡಿ. ಐ. ಮೂಲ್ಯ, ಪ್ರಧಾನ ಕಾರ್ಯದರ್ಶಿ ಕರುಣಾಕರ ಬಿ, ಸಾಲ್ಯಾನ್, ಗೌರವ ಕೋಶಾಧಿಕಾರಿ ಜಯ ಎಸ್. ಅಂಚನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತಾ ಡಿ. ಬಂಜನ್, ಸ್ಥಳೀಯ ಸಮಿತಿಯ ಪರವಾಗಿ ಉಪ ಕಾರ್ಯಾಧ್ಯಕ್ಷ ಅರುಣ್ ಡಿ. ಬಂಗೇರ, ಕಾರ್ಯದರ್ಶಿ ಸುಕುಮಾರ್ ಎಸ್. ಸಾಲ್ಯಾನ್, ಕೋಶಾಧಿಕಾರಿ ಮುಂಡಪ್ಪ ಸಿ. ಮೂಲ್ಯ. ಜೊತೆ ಕಾರ್ಯದರ್ಶಿ ಅಶೋಕ್ ಎಸ್ ಸಾಲ್ಯಾನ್. ಜೊತೆ ಕೋಶ ಅಧಿಕಾರಿ ಜಗದೀಶ್ ಆರ್ ಮೂಲ್ಯ.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರತ್ನಾ ಡಿ. ಕುಲಾಲ್, ಉಪಕಾರ್ಯಾಧ್ಯಕ್ಷೆ ಆರತಿ ಕೆ. ಸಾಲ್ಯಾನ್, ಕಾರ್ಯದರ್ಶಿ ಭಾರತಿ ಪಿ. ಅರ್ಕ್ಯಾನ್, ಕೋಶಾಧಿಕಾರಿ ನವ್ಯ ಎಸ್. ಮೂಲ್ಯ, ಜೊತೆ ಕಾರ್ಯದರ್ಶಿ ಪ್ರಮೀಳಾ ಬಂಗೇರ. ಜೊತೆ ಕೋಶಾಧಿಕಾರಿ ಸರಿತಾ ಎಸ್ ಮೂಲ್ಯ. ಸ್ಥಳೀಯ
ಸಮಿತಿಯ ಸದಸ್ಯರುಗಳಾದ ಗಣೇಶ್ ಬಿ ಸಾಲ್ಯಾನ್. ನಾಗೇಶ್ ಎಮ್ ಮೂಲ್ಯ. ಕೇಶವ ಬಿ ಬಂಜನ್. ಸಾಂತ ಕೆ ಕುಲಾಲ್ .ಹರೀಶ್ ಕೆ ಬಂಗೇರ. ಸತೀಶ್ ಬಿ ಬಂಗೇರ. ಹರೀಶ್ ಕೆ ಬಂಗೇರ. ಯುವ ವಿಭಾಗದ ಸಂಚಾಲಕ ವಿನಯ ವಿ ಸಾಲ್ಯಾನ್. ಮತ್ತು
ಸಲಹಾ ಸಮಿತಿ ಮತ್ತು ಯುವ ವಿಭಾಗದ ಸದಸ್ಯರು ವಿನಂತಿಸಿದ್ದಾರೆ.

