ಪುಷ್ಪಕ್ ಲ್ಯಾಂಡಿಂಗ್ ಪರೀಕ್ಷೆ ಯಶಸ್ವಿ..!

ಇಸ್ರೋದವರು ತಯಾರಿಸಿದ ಆರ್‌ಎಲ್‌ವಿ ಪುಷ್ಪಕ್ ಮರುಬಳಕೆ ಉಡ್ಡಯನ ವಾಹನದ ಪರೀಕ್ಷೆಯು ಶುಕ್ರವಾರ ಯಶಸ್ವಿಯಾಗಿ ನಡೆಯಿತು. ಇದು ಆರ್‌ಎಲ್‌ವಿ ಮೂರನೆಯ ಪ್ರಯೋಗ ವಾಹನವಾಗಿದೆ.
ಚಳ್ಳಕೆರೆಯಲ್ಲಿರುವ ಪರೀಕ್ಷಾ ರನ್‌ವೇಯಿಂದ ಇಂದು ಪ್ರಯೋಗ ಪರೀಕ್ಷೆ ಯಶಸ್ಸು ಕಂಡಿತು. 2016ರಲ್ಲಿ ಮೊದಲ ಪ್ರಯೋಗ ನಡಸಲಾಗಿತ್ತು. 2023ರಲ್ಲಿ ಎರಡನೇ ಪ್ರಯೋಗ ಯಶಸ್ವಿಯಾದ ಬೆನ್ನಿಗೇ ಮೂರನೆಯ ಪ್ರಯೋಗಕ್ಕೆ ಕೈ ಹಾಕಲಾಗಿತ್ತು. ವಾಯು ಪಡೆಯ ಹೆಲಿಕಾಪ್ಟರ್ ಮೂಲಕ ಉಡ್ಡಯಣ ವಾಹನವನ್ನು ನಾಲ್ಕೂವರೆ ಕಿಲೋಮೀಟರ್ ಎತ್ತರಕ್ಕೆ ಒಯ್ಯಲಾಯಿತು. ಅಲ್ಲಿಂದ ನಿಯತಾಂಕ ನೀಡಿ ಕೆಳಗೆ ಬೀಳಿಸಿದ್ದು, ಯಶಸ್ವಿಯಾಗಿ ಲ್ಯಾಂಡ್ ಆಗಿದೆ. ವಾಹನದ ಭಾಗಗಳನ್ನು ಮರು ಬಳಕೆ ಮಾಡುವಂತೆ ಪುಷ್ಪಕ್ ರಚಿಸಲಾಗಿದೆ.

Related Posts

Leave a Reply

Your email address will not be published.