Home Posts tagged #Leopard

ನೆಯ್ಪಿಲಿಯ ನರಳಾಟ

ಭಾರತದಲ್ಲಿ ಚಿರತೆಗಳ ಸಂಖ್ಯೆ ವಾರ್ಷಿಕ 1.08 ಶೇಕಡಾ ಏರಿಕೆ ಕಾಣುತ್ತಿದೆ. ಸದ್ಯ ಭಾರತದಲ್ಲಿ 13,874 ಚಿರತೆಗಳು ಇರುವುದಾಗಿ ಒಕ್ಕೂಟ ಸರಕಾರದ ಪರಿಸರ ಮಂತ್ರಿ ಭೂಪೇಂದ್ರ ಯಾದವ್ ಬಿಡುಗಡೆ ಮಾಡಿರುವ ಚಿರತೆ ಸ್ಥಿತಿಗತಿ ವರದಿಯಲ್ಲಿ ಇದೆ. ಈ ಚಿರತೆ ಎನ್ನುವುದು ಲೆಪರ್ಡ್. ಇದನ್ನು ತುಳುವಿನಲ್ಲಿ ಚಿಟ್ಟೆ ಪಿಲಿ, ನೆಯ್ಪಿಲಿ ಎಂದೆಲ್ಲ ಕರೆಯುತ್ತಾರೆ. ಇದಕ್ಕೆ

ಕಾರ್ಕಳ: ಕೌಡೂರು ವ್ಯಾಪ್ತಿಯಲ್ಲಿ 4 ಜನರ ಮೇಲೆ ಚಿರತೆ ದಾಳಿ

ಹೊಂಚು ಹಾಕಿ ಸಂಚು ಮಾಡಿ ಸಾಕು ಪ್ರಾಣಿಗಳನ್ನ ಬೇಟೆಯಾಡುತ್ತಿದ್ದ ಬೇಟೆಗಾರ ಪ್ರಾಣಿ ಇದು. ಇತ್ತೀಚಿನ ದಿನಗಳಲ್ಲಿ ಬೇಟೆಯ ಬದಲಿಗೆ ಸ್ಥಳೀಯರ ಮೇಲೆ ದಾಳಿ ಮಾಡುವ ಮೂಲಕ ಭಯ ಹುಟ್ಟಿಸಿದೆ. ಎರಡು ಮೂರು ದಿನಗಳ ಅಂತರದಲ್ಲಿ ನಾಲ್ಕು ಜನರಿಗೆ ದಾಳಿ ಮಾಡಿ ಪರಾರಿಯಾಗಿರುವ ಈ ಚಿರತೆ, ಸೆರೆ ಹಿಡಿಯಲು ಅರಣ್ಯ ಇಲಾಖೆ ಕಣ್ಣಿಗೆ ಎಣ್ಣೆ ಬಿಟ್ಟು ಕಾಯುತ್ತಿದೆ… ಹೌದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಕೌಡೂರು ಗ್ರಾಮ ಪಂಚಾಯಿತಿ ಬಹುತೇಕ ಕಿರು ಅರಣ್ಯ ವೇ ತುಂಬಿರುವ ಪ್ರದೇಶ. ಈ

ಬಡಗಮಿಜಾರು : ಚಿರತೆ ದಾಳಿಗೆ ಕರು ಸಾವು

ಮೂಡುಬಿದಿರೆ: ಚಿರತೆಯೊಂದು ದನದ ಕರುವಿನ ಮೇಲೆರಗಿ ತಿಂದು ಸಾಯಿಸಿದ ಘಟನೆ ಬಡಗ ಮಿಜಾರಿನಲ್ಲಿ ನಡೆದಿದೆ.ತೆಂಕಮಿಜಾರು ಗ್ರಾ.ಪಂ.ವ್ಯಾಪ್ತಿಯ ಪಂಜುರ್ಲಿ ಗುಡ್ಡೆಯ ದಿನೇಶ್ ಅವರ ಮನೆಯ ಒಂದೂವರೆ ತಿಂಗಳಿನ ಕರುಇದಾಗಿದೆ. ಇವರು ತೋಟದಲ್ಲಿ ಕರು ಮೇಯಲು ಕಟ್ಟಿದ್ದು ಅಲ್ಲಿಯೆ ಚಿರತೆ ಕರುವಿನ ಮೇಲೆರಗಿ ತಿಂದಿದೆ.ಮೂಡುಬಿದಿರೆ ಅರಣ್ಯ ಇಲಾಖೆಯ ಉಪವಲಯಾರಣ್ಯಾಧಿಕಾರಿ ಅಶ್ವಿತ್ ಗಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಧನದ ಭರವಸೆಯನ್ನು ನೀಡಿದ್ದಾರೆ.

ಬಂಟ್ವಾಳದ ಹೆಗಡೆಗುಳಿಯಲ್ಲಿ ಉರುಳಿಗೆ ಸಿಲುಕಿದ್ದ ಚಿರತೆಯ ರಕ್ಷಣೆ

ಬಂಟ್ವಾಳ: ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಹೆಗಡೆಗುಳಿ ಎಂಬಲ್ಲಿ ಉರುಳಿಗೆ ಸಿಲುಕಿದ್ದ ಚಿರತೆಯೊಂದನ್ನು ಬಂಟ್ವಾಳದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯರ ಸಹಕಾರದೊಂದಿಗೆ ರಕ್ಷಿಸಲು ಯಶಸ್ವಿಯಾಗಿದೆ. ಶುಕ್ರವಾರ ತಡರಾತ್ರಿವರೆಗೂ ಈ ಕಾರ್ಯಾಚರಣೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯ ರಾವ್, ಉಪಅರಣ್ಯ ಸಂರಕ್ಷಣಾಧಿಕಾರಿ ದಿನೇಶ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನಟಾಲ್ಕರ್ ಮಾರ್ಗದರ್ಶನದಲ್ಲಿ ನಡೆದಿದ್ದು. ಅವರ ಮಾರ್ಗದರ್ಶನದಂತೆ ಮುಂದಿನ ಕ್ರಮ