ಬಡಗಮಿಜಾರು : ಚಿರತೆ ದಾಳಿಗೆ ಕರು ಸಾವು

ಮೂಡುಬಿದಿರೆ: ಚಿರತೆಯೊಂದು ದನದ ಕರುವಿನ ಮೇಲೆರಗಿ ತಿಂದು ಸಾಯಿಸಿದ ಘಟನೆ ಬಡಗ ಮಿಜಾರಿನಲ್ಲಿ ನಡೆದಿದೆ.ತೆಂಕಮಿಜಾರು ಗ್ರಾ.ಪಂ.ವ್ಯಾಪ್ತಿಯ ಪಂಜುರ್ಲಿ ಗುಡ್ಡೆಯ ದಿನೇಶ್ ಅವರ ಮನೆಯ ಒಂದೂವರೆ ತಿಂಗಳಿನ ಕರುಇದಾಗಿದೆ. ಇವರು ತೋಟದಲ್ಲಿ ಕರು ಮೇಯಲು ಕಟ್ಟಿದ್ದು ಅಲ್ಲಿಯೆ ಚಿರತೆ ಕರುವಿನ ಮೇಲೆರಗಿ ತಿಂದಿದೆ.ಮೂಡುಬಿದಿರೆ ಅರಣ್ಯ ಇಲಾಖೆಯ ಉಪವಲಯಾರಣ್ಯಾಧಿಕಾರಿ ಅಶ್ವಿತ್ ಗಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಧನದ ಭರವಸೆಯನ್ನು ನೀಡಿದ್ದಾರೆ.

Related Posts

Leave a Reply

Your email address will not be published.