ಮೂಡುಬಿದಿರೆ: ಶಿವತತ್ವ ಶ್ರೇಷ್ಠವಾದುದು. ಶಿವ ಅದಿ-ಅಂತ್ಯ ರಹಿತವಾದ ದೇವರು. ಆತ ನಮ್ಮ ಹೃದಯದೊಳಗೆ ಇದ್ದಾಗ ಬೇರೆ ಬೇರೆ ಹೆಸರಿನಿಂದ ಕರೆಯಲ್ಪಡುತ್ತಾನೆ. ಹೊರಗಡೆ ಬಂದಾಗ ಆತ ಒಬ್ಬನೇ ಆದ್ದರಿಂದ ಆತ ನಮ್ಮೊಳಗಡೆ ಇರುವಾಗಲೇ ಜಾಗೃತಿಯನ್ನು ಹೊಂದಬೇಕು ಎಂದು ಒಡಿಯೂರು ಗುರುದತ್ತ ಸಂಸ್ಥಾನದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಅವರು ಶಿರ್ತಾಡಿ ಶ್ರೀ
ಮೂಡುಬಿದಿರೆ: ಇಲ್ಲಿನ ಸಮಾಜ ಮಂದಿರ ಸಭಾ(ರಿ) ಇದರ ವತಿಯಿಂದ 75ನೇ ವರ್ಷದ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಮಾಜಿ ಸಚಿವ, ಸಮಾಜ ಮಂದಿರ ಸಭಾದ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಧ್ವಜರೋಹಣಗೈದು ಶುಭ ಹಾರೈಸಿದರು. ಉಪಾಧ್ಯಕ್ಷ ಸಂಪತ್ ಸಾಮ್ರಜ್ಯ, ಪ್ರಧಾನ ಕಾರ್ಯದರ್ಶಿ ಸುರೇಶ್ ಪ್ರಭು, ಆಡಳಿತ ಮಂಡಳಿಯ ಸದಸ್ಯರಾದ ಕೆ.ಆರ್. ಪಂಡಿತ್, ಸಿ.ಹೆಚ್.ಗಫೂರ್ , ಪುಂಡಿಕೈ ಗಣಪಯ್ಯ ಭಟ್, ದಯಾನಂದ ಪಂಡಿತ್ ರಾಮ್ ಪ್ರಸಾದ್, ಎಂ.ಎಸ್.ಕೋಟ್ಯಾನ್, ವೆಂಕಟೇಶ್ ಕಾಮತ್, ರಾಜೇಶ್
ಮೂಡುಬಿದಿರೆ: ರಾಷ್ಟ್ರೀಯ ಮತದಾರರ ದಿನವನ್ನು ಮೂಡುಬಿದಿರೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆಚರಿಸಲಾಯಿತು. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ಲೋಕೇಶ್ ಸಿ. ಅವರು ಮಾತನಾಡಿ, ಮತದಾನ ಮಾಡುವ ಅವಕಾಶವನ್ನು ಯುವಜನತೆ ಸದುಪಯೋಗಪಡಿಸಿಕೊಳ್ಳಬೇಕು.ನಮಗೆ ಮೂಲಭೂತ ಸೌಲಭ್ಯ ಬೇಕಾದಲ್ಲಿ ನಾವು ಉತ್ತಮ ನಾಯಕನ ಆಯ್ಕೆ ಮಾಡಬೇಕು ಹಾಗೂ ಈ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದ್ದು, ವಿದ್ಯಾರ್ಥಿಗಳು ಅದರಲ್ಲಿ ಭಾಗವಹಿಸಿ ಮಾಹಿತಿ
ಮೂಡುಬಿದಿರೆ: ಯೆನೆಪೊಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೆಷಿನ್ ಲರ್ನಿಂಗ್ ವಿಭಾಗದ ಸಹಯೋಗದೊಂದಿಗೆ ಯೆನಾರ್ಟಿಫಿಷಿಯಾ ವಿದ್ಯಾರ್ಥಿ ಸಂಘದ ವತಿಯಿಂದ ಅನ್‌ಸ್ಕ್ರ್ಯಾಂಬಲ್ 2.0 ರಾಷ್ಟ್ರೀಯ ಹ್ಯಾಕಥಾನ್ ಸ್ಪರ್ಧೆ ನಡೆಯಿತು. ಉಡುಪಿಯ ರೋಬೋಸಾಫ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಕ್ಯಾಂಪಸ್ ರಿಲೇಶನ್‌ಶಿಪ್ ಮ್ಯಾನೇಜರ್ ಲಕ್ಷ್ಮೀ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಎಂಜಿನಿಯರಿಂಗ್ ವಿದ್ಯಾರ್ಥಿಗಳು ನಿಮ್ಮಲ್ಲಿ ನೀವು ನಂಬಿಕೆ
ಎಸ್.ಕೆ.ಎಸ್.ಎಸ್.ಎಫ್ ದ.ಕ.ಜಿಲ್ಲಾ ವೆಸ್ಟ್ ಸಮಿತಿಯ ವತಿಯಿಂದ ಜ.26 ರಂದು ಮೂಡುಬಿದಿರೆಯಲ್ಲಿ ‘ಮಾನವ ಸರಪಳಿ’ ಎಂಬ ವಿಶೇಷ ಕಾರ್ಯಕ್ರಮ ನಡೆಯಲಿದೆ ಎಂದು ಸ್ವಾಗತ ಸಮಿತಿಯ ಅಧ್ಯಕ್ಷರಾದ ಡಿ.ಎ.ಉಸ್ಮಾನ್ ಹಾಜಿ ಏರ್ ಇಂಡಿಯಾ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಪ್ರತಿ ವರ್ಷ ಜ.26 ಗಣರಾಜ್ಯೋತ್ಸವದಂದು ಜಿಲ್ಲಾ ವ್ಯಾಪ್ತಿಯಲ್ಲಿ ‘ಮಾನವ ಸರಪಳಿ’ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದು ಈ ವರ್ಷ ಕೂಡಾ
ಮೂಡುಬಿದಿರೆ : ನೇತಾಜಿ ಬ್ರಿಗೇಡ್ ಮೂಡುಬಿದಿರೆ ವತಿಯಿಂದ ಮೂಡುಬಿದಿರೆಯ “ಕೋಟಿ – ಚೆನ್ನಯ್ಯ” ಜೋಡುಕರೆ ಕಂಬಳದಲ್ಲಿ ನಡೆದ 14ನೇ ಸೇವಾ ಯೋಜನೆಯಲ್ಲಿ ಸಂಗ್ರಹವಾದ ರೂ.1,34,894 ಧನವನ್ನು ಆಯ್ದ 5 ಮಂದಿ ಫಲಾನುಭವಿಗಳಿಗೆ ಸ್ವರಾಜ್ಯ ಮೈದಾನದ ಬಳಿ ಇರುವ ಶ್ರೀ ಆದಿಶಕ್ತಿ ಮಹಾಮ್ಮಾಯಿ ದೇವಸ್ಥಾನ ಮಾರಿಗುಡಿ ಬಳಿ ಹಸ್ತಾಂತರಿಸಲಾಯಿತು. ಕಣ್ಣಿನ ಕ್ಯಾನ್ಸರ್ ಚಿಕಿತ್ಸೆಗಾಗಿ ಕಿನ್ನಿಗೋಳಿ ತಾಳಿಪಾಡಿಯ 6 ತಿಂಗಳ ಮಗು ಪೂಜಿತಾ ಶೆಟ್ಟಿಗಾರ್, ಗಾಂಧಿ
ಮೂಡುಬಿದಿರೆ : ಡಿ.14.ರಿಂದ 17ರ ವರೆಗೆ ನಡೆಯುವ ‘ಆಳ್ವಾಸ್‌ವಿರಾಸತ್-23’ರ ಮಾಧ್ಯಮ ಕೇಂದ್ರವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ, ವಿರಾಸತ್ ನ ರೂವಾರಿ ಡಾ.ಎಂ.ಮೋಹನ ಆಳ್ವ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಸಣ್ಣಮಟ್ಟದಿಂದ ಆರಂಭಗೊಂಡ ಆಳ್ವಾಸ್ ವಿರಾಸತ್ ಇಂದು ಲೋಕ ಪ್ರಸಿದ್ಧವಾಗಿದೆ. ವಿವಿಧತೆಯಲ್ಲಿ ಏಕತೆಯನ್ನು ಸಾರುವ ಸಂದೇಶವನ್ನು ಹೊಂದಿದೆ. ವಿರಾಸತ್ ಯಶಸ್ಸಿನಲ್ಲಿ ಮಾಧ್ಯಮದ ಪಾತ್ರ ಮಹತ್ತರವಾದುದು ಎಂದರು. ವನ್ಯಜೀವ ಛಾಯಾಗ್ರಾಹಕ,
ದ.ಕ.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ) ಮೂಡುಬಿದಿರೆ ಇವುಗಳ ಜಂಟಿ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯುವ “ಮೈಸೂರು ವಿಭಾಗೀಯ ಮಟ್ಟದ ಜಾನಪದ ಕಲಾ ತಂಡಗಳ ತರಬೇತಿ ಕಾರ್ಯಗಾರ”ವು ವಿದ್ಯಾಗಿರಿಯ ಶ್ರೀಮತಿ ಅಪ್ಪಾಜಿ ನಾಯಕ್ ಸಭಾಂಗಣದಲ್ಲಿ ಗುರುವಾರ ಆರಂಭಗೊಂಡಿತು. ಮೈಸೂರು ವಿಭಾಗದ ಆ.ಕು.ಕ.ಸೇವೆಯ ವಿಭಾಗೀಯ ಜಂಟಿ ನಿರ್ದೇಶಕಿ ಡಾ.ರಾಜೇಶ್ವರಿ ದೇವಿ
ದ.ಕ ಜಿಪಂ , ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಕಚೇರಿ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮೂಡುಬಿದಿರೆ ಹಾಗೂ ರೋಟರಿ ಆಂಗ್ಲ ಮಾಧ್ಯಮ ಶಾಲೆ ಮೂಡುಬಿದಿರೆ ಇವುಗಳ ಸಹಯೋಗದೊಂದಿಗೆ ಸ್ವರಾಜ್ಯ ಮೈದಾನದಲ್ಲಿ ನಡೆದ ದ.ಕ ಜಿಲ್ಲಾ ಮಟ್ಟದ ವಿಶೇಷ ಸಾಮಥ್ರ್ಯದ ಮಕ್ಕಳ ಕ್ರೀಡಾ ಕೂಟಕ್ಕೆ ಮೂಡುಬಿದಿರೆ ರೋಟರಿ ಕ್ಲಬ್‍ನ ಅಧ್ಯಕ್ಷ ನಾಗರಾಜ್ ಬಿ.ಚಾಲನೆಯನ್ನು ನೀಡಿದರು.
ಮೂಡುಬಿದಿರೆಯಲ್ಲಿ ನಡೆಯುತ್ತಿರುವ ದ.ಕ. ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪ್ರೌಢಶಾಲಾ ಬಾಲಕಿಯರ ವಿಭಾಗದ 1500 ಮತ್ತು 3000 ಕಿ.ಮೀ ಓಟದಲ್ಲಿ ಪುತ್ತೂರು ತಾಲೂಕಿನ ಕಡಬ ಸ.ಪ.ಪೂ.ಕಾಲೇಜಿನ ಚರಿಷ್ಮಾ ಕೂಟ ದಾಖಲೆಯನ್ನು ನಿರ್ಮಿಸಿದ್ದಾರೆ. ಎಡಪದವು ಪ.ಪೂ.ಕಾಲೇಜಿನ ಸೌಮ್ಯ ಕೆ.ಪಿ ಅವರು 2004ರಲ್ಲಿ 5:01.70 ಸೆಕುಂಡು ನಲ್ಲಿ ಕ್ರಮಿಸಿ ಮಾಡಿರುವ ದಾಖಲೆಯನ್ನು ಚರಿಷ್ಮಾ ಅವರು 4:53.9 ಸೆಕುಂಡಿನಲ್ಲಿ ಕ್ರಮಿಸುವ ಮೂಲಕ ಹಾಗೂ 3000 ಓಟದಲ್ಲಿ 10:44.7 ಸೆಕುಂಡಿನಲ್ಲಿ