Home Posts tagged #murali mohan chunthar

“ನಮ್ಮ ಆರೋಗ್ಯದ ಗುಟ್ಟು ಮತ್ತು ಜುಟ್ಟು ನಮ್ಮ ಕೈಯಲ್ಲಿಯೇ ಇದೆ”

ಪ್ರತಿ ವರ್ಷ ಎಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನ ಎಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದೆ. 1948 ರ ಎಪ್ರಿಲ್ 7 ರಂದು ವಿಶ್ವ ಆರೋಗ್ಯ ಸಂಸ್ಥೆ ಉದಯವಾಯಿತು. ಇದರ ಸವಿ ನೆನಪಿಗಾಗಿ 1950 ರಂದು ಪ್ರತಿ ವರ್ಷ ಎಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನ ಎಂದು ಆಚರಿಸಿ, ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. 1950 ರಲ್ಲಿ “ನಿಮ್ಮ ಆರೋಗ್ಯ ಸೇವೆಗಳ

ಏನಿದು ಪೊಲಿಯೋ ರೋಗ.

ಪೊಲಿಯೋ ಎನ್ನುವ ರೋಗ ವೈರಾಣುವಿನಿಂದ ಹರಡುವ ಸಾಂಕ್ರಾಮಿಕ ಮತ್ತು ಶಾಶ್ವತ ಅಂಗ ವೈಕಲ್ಯಕ್ಕೆ ಕಾರಣವಾಗುವ ರೋಗವಾಗಿದ್ದು, ಲಸಿಕೆಯಿಂದ ತಡೆಗಟ್ಟಲು ಸಾಧ್ಯವಿದೆ. ಪ್ರತಿ ವರ್ಷ ಅಕ್ಟೋಬರ್ -24 ರಂದು “ವಿಶ್ವ ಪೊಲಿಯೋ ದಿನ” ಎಂದು ಆಚರಿಸಿ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಪೊಲಿಯೋ ರೋಗಕ್ಕೆ ಮೊತ್ತ ಮೊದಲ ಬಾರಿ ಲಸಿಕೆ ಕಂಡು ಹಿಡಿದ ಸಂಶೋಧಕ ಶ್ರೀ ಜೋನಾಡ್ ಸಾಲ್ ಅವರ ಹುಟ್ಟಿದ ದಿನವನ್ನು ಅವರ ನೆನಪಿಗಾಗಿ ಪೊಲಿಯೋ ದಿನ ಎಂದು ಆಚರಿಸಲಾಗುತ್ತಿದೆ. 1955 ರಲ್ಲಿ

ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ದಂತ ವೈದ್ಯರ ಪಾತ್ರ’

ಒಂದು ಆರೋಗ್ಯ ಪೂರ್ಣ ಸಮಾಜದ ನಿರ್ಮಾಣದಲ್ಲಿ ಆ ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಪಾಲುದಾರನಾಗುತ್ತಾನೆ ಮತ್ತು ಹೊಣೆಗಾರನಾಗುತ್ತಾನೆ. ಅಂತಹ ಪ್ರತಿ ಪ್ರಜೆಗಳ ಆರೋಗ್ಯವನ್ನು ಕಾಪಾಡುವಲ್ಲಿ ವೈದ್ಯರು ಬಹುಮುಖ್ಯ ಭೂಮಿಕೆ ವಹಿಸುತ್ತಾರೆ. ಅದು ಕುಟುಂಬ ವೈದ್ಯರೇ ಇರಬಹುದು, ಅಲೋಪತಿ, ಆಯುರ್ವೇದ, ಹೊಮಿಯೋಪತಿ, ಯುನಾನಿ ಅಥವಾ ದಂತ ವೈದ್ಯರೂ ಇರಬಹುದು. ಒಟ್ಟಿನಲ್ಲಿ ವೈದ್ಯರು ಒಬ್ಬ ವ್ಯಕ್ತಿಯ ಆರೋಗ್ಯದ ಮೇಲೆ ನೇರವಾದ ಮತ್ತು ಪ್ರತ್ಯಕ್ಷವಾದ ಪರಿಣಾಮ ಬೀರುವ ವ್ಯಕ್ತಿ

ಜ್ವರಗಳ ರಾಜ ಮೆದುಳು ಜ್ವರ – ಜಪಾನೀಸ್ ಎನ್‍ಸೆಫಲೈಟಿಸ್

ಜಪಾನೀಸ್ ಎನ್‍ಸೆಫಲೈಟಿಸ್ ವೈರಸ್ ಎಂಬ ವೈರಾಣುವಿನಿಂದ ಈ ರೋಗ ಹರಡುತ್ತದೆ. ಮೊದಲ ಬಾರಿ ಈ ರೋಗ ಜಪಾನಿನಲ್ಲಿ 1871ರಲ್ಲಿ ಕಂಡು ಬಂದ ಕಾರಣ ಈ ಜ್ವರಕ್ಕೆ ಜಪಾನೀಸ್ ಎನ್‍ಸೆಫಲೈಟಿಸ್ ಎಂದು ನಾಮಕರಣ ಮಾಡಲಾಯಿತು. ಸಾಮಾನ್ಯವಾಗಿ ಹಂದಿಗಳಲ್ಲಿ ಕಂಡು ಬರುವ (ಕೆಲವೊಂದು ಪ್ರಬೇಧದ ಹಕ್ಕಿಗಳಲ್ಲಿಯೂ ಕಂಡು ಬರುತ್ತದೆ) ಈ ವೈರಾಣು, ಹಂದಿಗಳಿಗೆ ಯಾವುದೇ ತೊಂದರೆ ಮಾಡುವುದಿಲ್ಲ. ಈ ರೋಗಾಣು ಇರುವ ಹಂದಿಗಳನ್ನು ಕಡಿದ ಕ್ಯೂಲೆಕ್ಸ್ ಸೊಳ್ಳೆಗಳು ಮನುಷ್ಯರನ್ನು

ಹೆಬ್ಬೆರಳು ಚೀಪುವುದು ಯಾಕೆ?

ಸಣ್ಣ ಮಕ್ಕಳು ಬಾಯಲ್ಲಿ ಕೈಬೆರಳು ಹಾಕಿ ಚೀಪುವುದು ಸಾಮಾನ್ಯ ಲಕ್ಷಣ. ಇದೇನೂ ಬಹಳ ದೊಡ್ಡ ಸಮಸ್ಯೆ ಏನಲ್ಲ. ಸಾಮಾನ್ಯವಾಗಿ ಚಿಕ್ಕ ಮಕ್ಕಳು ಸುಸ್ತಾದಾಗ, ಬೇಸರವಾದಾಗ, ನಿದ್ದೆ ಬರುವ ಹೊತ್ತಲ್ಲಿ, ಸಾಂತ್ವನದ ಅವಶ್ಯಕತೆ ಇದ್ದಾಗ ಹೆಬ್ಬೆರಳನ್ನು ಚೀಪುವುದು ಕಂಡು ಬರುತ್ತದೆ. ಈ ಬೆರಳು ಚೀಪುವ ಅಭ್ಯಾಸ ಗರ್ಭಾವಸ್ಥೆಯ (15ನೇ ವಾರದಲ್ಲಿ) ಆರಂಭವಾಗುತ್ತದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಗರ್ಭಾಶಯದ ಒಳಗೆ ಮಗು ದಿನಕ್ಕೆ ನೂರಾರು ಬಾರಿ ಆಕಳಿಸುತ್ತದೆ ಎಂದೂ

ಕ್ಯಾಪ್ಟನ್ ಪ್ರಾಂಜಲ್ ಬಲಿದಾನ ವ್ಯರ್ಥ ವಾಗದಿರಲಿ….ಡಾ ಚೂಂತಾರು

ದೇಶದ ರಕ್ಷಣೆಗಾಗಿ ತನ್ನ ಜೀವವನ್ನೇ ಪಣಕ್ಕಿಟ್ಟು ಹೋರಾಡಿ ಹುತಾತ್ಮರಾದ ಶ್ರೀ ಕ್ಯಾಪ್ಟನ್ ಪ್ರಾಂಜಲ್ ಅವರು ನಮ್ಮ ಯುವ ಪೀಳಿಗೆಗೆ ಮಾದರಿ. ಅವರ ತ್ಯಾಗ ಮತ್ತು ಬಲಿದಾನ ವ್ಯರ್ಥ ವಾಗದಿರಲಿ. ಭಯೋತ್ಪಾದನೆ ಮತ್ತು ಹಿಂಸಾಚಾರ ವನ್ನು ಬೇರು ಸಮೇತ ಕಿತ್ತು ಹಾಕಿ ಅಗಲಿದ ಕ್ಯಾಪ್ಟನ್ ಪ್ರಾಂಜಲ್ ಅವರ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ನಾವೆಲ್ಲಾ ನಮ್ಮ ಜಾತಿ ಮತ ಧರ್ಮ ಎಂದು ಕಚ್ಚಾಡದೆ, ದೇಶದ ಆಂತರಿಕ ಭದ್ರತೆ ಮತ್ತು ಶಾಂತಿ ಹಾಗೂ

ಲೀಚ್ ಥೆರಪಿ

ಲೀಚ್ ಎಂದು ಆಂಗ್ಲಭಾಷೆಯಲ್ಲಿ ಕರೆಸಿಕೊಳ್ಳುವ ‘ಜಿಗಣೆ’ ಅಥವಾ ‘ಇಂಬಳ’ ಸಾಮಾನ್ಯವಾಗಿ ತೇವವಿರುವ ಜಾಗಗಳಲ್ಲಿ, ಅರಣ್ಯ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತದೆ. ಈ ಜೀವಿಯ ಆಹಾರ ಮತ್ತು ವಾಸಸ್ಥಳ ಎಲ್ಲವೂ ಜಲವೇ ಆಗಿರುವುದರಿಂದ ಇವುಗಳಿಗೆ ‘ಜಲೌಕ’ ಎಂದೂ ಕರೆಯುತ್ತಾರೆ. ವಿಷಕಾರಕ ಜಿಗಣೆ ಮತ್ತು ವಿಷರಹಿತ ಜಿಗಣೆ ಎಂದು ಎರಡು ವಿಧಗಳಿದ್ದು, ವಿಷರಹಿತ ಜಿಗಣೆಗಳನ್ನು ಚಿಕಿತ್ಸೆಗಾಗಿ ಬಳಸುತ್ತಾರೆ. ಕಾಡು ಪ್ರದೇಶಗಳಲ್ಲಿ ತೇವವಿರುವ ಜಾಗಗಳಲ್ಲಿ ಹೇರಳವಾಗಿ ಕಂಡು ಬರುವ ಈ

ಶಾಸ್ತ್ರೀ ಜಿ ಮತ್ತು ಗಾಂಧೀಜಿಯವರ ಆದರ್ಶಗಳನ್ನು ನಿತ್ಯ ಅಳವಡಿಸಿಕೊಳ್ಳೋಣ : ಡಾ|| ಚೂಂತಾರು

ದಿನಾಂಕ 02-10-2023ನೇ ಸೋಮವಾರದಂದು ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಅಂಗವಾಗಿ ನಗರದ ಮೇರಿಹಿಲ್‍ನಲ್ಲಿ ಇರುವ ಜಿಲ್ಲಾ ಗೃಹರಕ್ಷಕದಳ ಮತ್ತು ಪೌರರಕ್ಷಣಾ ಕಛೇರಿಯಲ್ಲಿ ಗಾಂಧೀಜಿಯವರ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಭಾವಚಿತ್ರಕ್ಕೆ ಪುಷ್ಟನಮನ ಸಲ್ಲಿಸಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಮತ್ತು ಗಾಂಧೀಜಿಯವರ ತ್ಯಾಗ, ಸೇವೆ ಹಾಗೂ ಬಲಿದಾನವನ್ನು ಸ್ಮರಿಸಲಾಯಿತು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟರಾದ

ವಿಶ್ವ ರೇಬಿಸ್ ದಿನ, ಸೆಪ್ಟಂಬರ್ 28

ಪ್ರತಿ ವರ್ಷ ಸೆಪ್ಟಂಬರ್ 28ರಂದು ವಿಶ್ವದಾದ್ಯಂತ ವಿಶ್ವ ರೇಬಿಸ್ ದಿನ ಎಂದು ಆಚರಿಸಿ, ರೇಬಿಸ್ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. 2007ನೇ ವರ್ಷದಿಂದ ಈ ಆಚರಣೆ ಜಾರಿಗೆ ಬಂದಿತು. 2023ನೇ ವರ್ಷದ ಆಚರಣೆಯ ಧ್ಯೇಯ ವಾಕ್ಯ “Rabies one health, Zero Deaths” ಅಂದರೆ “ರೇಬಿಸ್ ಒಂದೇ ಆರೋಗ್ಯ, ಶೂನ್ಯ ಸಾವು” ಎಂಬುದಾಗಿದೆ. ಸೆಪ್ಟಂಬರ್ 28ರಂದು ಮೊದಲ ರೇಬಿಸ್ ಲಸಿಕೆಯನ್ನು ಅಭಿವೃದ್ಧಿ ಪಡಿಸಿದ ಪ್ರೆಂಚ್ ರಸಾಯನ ಶಾಸ್ತ್ರ ತಜ್ಞ ಹಾಗೂ ಸೂಕ್ಷ್ಮ