Home Posts tagged ##padubidri axident

ಉದ್ಯಾವರ ಸೇತುವೆಯಲ್ಲಿ ಕಾರು ಲಾರಿ ಅಪಘಾತ: ರಾಷ್ಟ್ರೀಯ ಹೆದ್ದಾರಿ ಸಂಚಾರ ಅಸ್ತವ್ಯಸ್ತ

ಉದ್ಯಾವರ ಸೇತುವೆಯಲ್ಲಿ ಲಾರಿ ಹಾಗೂ ಕಾರು ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಬಹಳಷ್ಟು ಸಮಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.   ಕಾರು ಬಹುತೇಕ ಜಖಂಗೊಂಡು ಚಲಿಸದ ಕಾರಣ ಸ್ಥಳಕ್ಕೆ ಬಂದ ಕಾಪು ಪೊಲೀಸರು ಬಾರ ಎತ್ತುವ ಯಂತ್ರ ತರಿಸಿ ಕಾರನ್ನು ಸೇತುವೆ ಮೇಲಿಂದ ತೆರವುಗೊಳಿಸಲಾಯಿತು.

ಕಟಪಾಡಿಯಲ್ಲಿ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಗುದ್ದಿದ ಕಾರು: ಪ್ರಯಾಣಿಕರು ಅಪಾಯದಿಂದ ಪಾರು

ರಾಷ್ಟ್ರೀಯ ಹೆದ್ದಾರಿ 66 ಕಟಪಾಡಿ ಮೂಡಬೆಟ್ಟು ಕಂಬಳ ದ ಬಳಿ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಗುದ್ದಿದ ಘಟನೆ ಆದಿತ್ಯವಾರ ನಡೆದಿದೆ. ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಹೆದ್ದಾರಿ ಪಕ್ಕದ ವಿದ್ಯುತ್ ಕಂಬಕ್ಕೆ ಗುದ್ದಿದೆ. ಈ ಪರಿಣಾಮವಾಗಿ ವಿದ್ಯುತ್ ಕಂಬಗಳು ತುಂಡಾಗಿ ಉರುಳಿ ಬಿದ್ದಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕಾಪು ಪೊಲೀಸರು

ಪಡುಬಿದ್ರಿ ಜಂಕ್ಷನ್‌ ನಲ್ಲಿ ಟ್ಯಾಂಕರ್ ಕಂಟೈನರ್ ಡಿಕ್ಕಿ : ಸಂಚಾರ ಅಸ್ತವ್ಯಸ್ತ

ಪಡುಬಿದ್ರಿಯ ಕಾರ್ಕಳ ರಸ್ತೆಯ ತಿರುವಲ್ಲಿ, ಟ್ಯಾಂಕರ್ ಚಾಲಕನ ಅವಸರದ ಚಾಲನೆಯಿಂದಾಗಿ ಕಂಟೈನರ್‌ವೊಂದಕ್ಕೆ ಡಿಕ್ಕಿಯಾದ ಪರಿಣಾಮ ರಸ್ತೆ ತಿರುವಲ್ಲಿದ್ದ ರಿಂಗ್ ಹಾಗೂ ವಾಹನಗಳೆರಡು ಒಂದಕ್ಕೊಂದು ಅಂಟಿಕೊಂಡ ಪರಿಣಾಮ ಸುಮಾರು ಒಂದು ಗಂಟೆಗಳ ಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತ ಗೊಂಡಿದೆ. ಮಂಗಳೂರು ಕಡೆಯಿಂದ ಬಂದ ಕಂಟೈನರ್ ಜಂಕ್ಷನ್‌ನಲ್ಲಿ ಕಾರ್ಕಳ ರಸ್ತೆಗೆ ತಿರುಗುತ್ತಿದ್ದ ವೇಳೆ, ಹಿಂದಿನಿಂದ ಇಂಧನ ಏರಿಕೊಂಡು ಬಂದ ಟ್ಯಾಂಕರ್ ಚಾಲಕ, ಟ್ಯಾಂಕರನ್ನು