ಪಡುಬಿದ್ರಿ: ಟ್ಯಾಂಕರ್- ಸ್ಕೂಟರ್ ಅಪಘಾತ -ಗಂಭೀರ ಗಾಯಗೊಂಡಿದ್ದ ಸಹ ಸವಾರ ಮೃತ್ಯು

 ಹೆಜಮಾಡಿ ಸಮೀಪದ ಕನ್ನಂಗಾರಿನಲ್ಲಿ ನಡೆದ ಟ್ಯಾಂಕರ್ ಹಾಗೂ ಸ್ಕೂಟರ್ ಮಧ್ಯೆ ನಡೆದ ಅಪಘಾತದಲ್ಲಿ ಸ್ಕೂಟರ್‌ನ ಸಹ ಸವಾರ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೃತ ಯುವಕ ಜಾರ್ಕಾಂಡ್ ಮೂಲದ ಹೆಜಮಾಡಿ ಬ್ರಹ್ಮಸ್ಥಾನ ಬಳಿ ಬಾಡಿಗೆ ಕೋಣೆಯ ನಿವಾಸಿ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಸದ್ದಾಂ ಅನ್ಸಾರಿ(20). ಸವಾರ ಪರ್ವೇಜ್ ಸಣ್ಣ ಪುಟ್ಟ ಗಾಯಗೊಂಡಿದ್ದಾರೆ.ತಮ್ಮ ವಾಸದ ಮನೆಯಿಂದ ಪಡುಬಿದ್ರಿ ಕಡೆಗೆ ಸ್ಕೂಟರ್ ನಲ್ಲಿ ಬರುತ್ತಿದ್ದು, ಹೆಜಮಾಡಿ ಒಳ ರಸ್ತೆಯಿಂದ ಹೆದ್ದಾರಿಗೆ ಎಂಟ್ರಿ ಕೊಡುತ್ತಿದ್ದಂತೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದ ಟ್ಯಾಂಕರ್ ಗೆ ಡಿಕ್ಕಿಯಾಗಿದೆ.

ಗಂಭೀರ ಗಾಯಗೊಂಡಿರು ಸಹ ಸವಾರನನ್ನು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.   ಈ ಭಾಗದಲ್ಲಿ ಸರ್ವಿಸ್ ರಸ್ತೆಯ ಅಗತ್ಯವಿದ್ದರೂ ರಸ್ತೆ ನಿರ್ಮಾಣವಾಗದ ಕಾರಣ ಹೆಜಮಾಡಿ ಒಳ ರಸ್ತೆಗೆ ಸಂಚರಿಸುವವರು ಏಕಮುಖ ಸಂಚರಿಸುವ  ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಿಂದ ಅಪಾಯಕಾರಿ ಸಂಚಾರ ಇಲ್ಲಿ ಅನಿವಾರ್ಯ, ಅದಕ್ಕೆ ಪೂರಕವಾಗಿ ಪಕ್ಕದ ಹೊಟೇಲ್ ಮಾಲಿಕರಿಗೆ ಪೊಲೀಸ್ ಎಚ್ಚರಿಕೆಯ ಹೊರತಾಗಿಯೂ ಹೆದ್ದಾರಿಗೆ ಅಂಟಿಕೊಂಡೇ ಬೃಹತ್ ವಾಹನಗಳನ್ನು ಪಾರ್ಕ್ ಮಾಡುತ್ತಿರುವುದರಿಂದ ಈ ಪ್ರದೇಶ ಅಪಘಾತ ವಲಯವಾಗಿ ರೂಪುಗೊಳ್ಳುವಂತ್ತಾಗಿ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಾಗಿದೆ ಎಂಬುದಾಗಿ ಘಟನಾ ಸ್ಥಳದಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.  

Related Posts

Leave a Reply

Your email address will not be published.