ಸುಳ್ಯ ತಾಲೂಕು ಪೆರುವಾಜೆಯ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜ.30ರಂದು ಜಾತ್ರಾ ಮಹೋತ್ಸವ ನಡೆಯಲಿದ್ದು, ಅದರ ಪೂರ್ವಭಾವಿಯಾಗಿ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಗೊನೆ ಮುಹೂರ್ತ ನೆರವೇರಿತು. ಶ್ರೀ ದೇವರ ವಾರ್ಷಿಕ ಉತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ ದಿನಾಂಕ ಜ.30ರಂದು ಮಂಗಳವಾರ
ಪೆರುವಾಜೆ : ಇತಿಹಾಸ ಪ್ರಸಿದ್ದ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವದ ಪ್ರಯುಕ್ತ ಗುರುವಾರ ಬೆಳಗ್ಗೆ ಶ್ರೀ ದೇವಿಯ ಬಲಿಬಿಂಬಕ್ಕೆ ಚಿನ್ನದ ಕವಚ, ಉಳ್ಳಾಕುಲು ದೈವಕ್ಕೆ ಬೆಳ್ಳಿಯ ಆಭರಣ ಸಮರ್ಪಣೆ ನಡೆಯಿತು. ಶತಮಾನದ ಬಳಿಕ ದೇವಳಕ್ಕೆ ಬ್ರಹ್ಮರಥ ಸಮರ್ಪಣೆಯಾಗಿದ್ದು ಜ.19ರಂದು ಬ್ರಹ್ಮ ರಥೋತ್ಸವ ನಡೆಯಲಿದೆ. ಈ ಪ್ರಯುಕ್ತ ಸುಮಾರು ಎಂಟು ಲಕ್ಷ ರೂ ವೆಚ್ಚದಲ್ಲಿ ದೇವಳದ ವತಿಯಿಂದ ಉತ್ಸವ ಬಿಂಬಕ್ಕೆ
ಸುಳ್ಯ ತಾಲೂಕಿನ ಬೆಳ್ಳಾರೆಯ ಪೆರುವಾಜೆಯಲ್ಲಿ ಯತೀಶ್ ಕುಮಾರ್ ಪೆಲತಡ್ಕ ಮಾಲಕತ್ವದ ಅಕ್ಷಯ ಫಾರ್ಮ್ ಪ್ರೆಶ್ ಚಿಕನ್ ಸೆಂಟರ್ ಶುಭಾರಂಭಗೊಂಡಿತು. ಇಲ್ಲಿ ಬಾಯ್ಲರ್, ಟೈಸನ್ ಮತ್ತು ನಾಟಿ ಕೋಳಿಗಳು ರಖಂ ಮತ್ತು ಚಿಲ್ಲರೆ ವ್ಯಾಪಾರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಹೆಚ್ಚಿನ
ಅಧ್ಯಕ್ಷರಾಗಿ ಪ್ರಮೀಳಾ ಶೆಟ್ಟಿ , ಕಾರ್ಯದರ್ಶಿ ಸುಮಲತಾ ಸುನಿಲ್ , ಪೆರುವಾಜೆ ಗ್ರಾಮದ ಭಾವೈಕ್ಯ ಮಹಿಳಾ ಮಂಡಲದ ನೂತನ ಪದಾಧಿಕಾರಿಗಳ ಆಯ್ಕೆಯು ಆ.08 ರಂದು ನಡೆಯಿತು. ಮಹಿಳಾ ಮಂಡಲದ ಅಧ್ಯಕ್ಷರಾಗಿ ಪ್ರಮೀಳಾ ಶೆಟ್ಟಿ, ಉಪಾಧ್ಯಕ್ಷರಾಗಿ ಭಾಗ್ಯಲಕ್ಷ್ಮಿ ಅರ್ನಾಡಿ, ಕಾರ್ಯದರ್ಶಿಯಾಗಿ ಸುಮಲತಾ ಸುನಿಲ್, ಜತೆ ಕಾರ್ಯದರ್ಶಿಯಾಗಿ ಯಶೋಧಾ, ಕೋಶಾಧಿಕಾರಿಯಾಗಿ ರಾಗಿಣಿ ಆಯ್ಕೆಯಾದರು. ನಿರ್ದೇಶಕರಾಗಿ ಪ್ರೇಮ ಕೊಲ್ಯ, ವನಿತಾ ಸಾರಕೆರೆ, ಸುಜಾತ ಪದ್ಮನಾಭ, ವೀಣಾ ಕೊಲ್ಯ,
ಸುಳ್ಯ ತಾಲೂಕು ಪೆರುವಾಜೆ ಗ್ರಾಮದ ಮೂರನೆಯ ವಾರ್ಡಿನ ನಾಗನ ಮಜಲು ಎಂಬಲ್ಲಿ ರಸ್ತೆ ಬಿರುಕು ಬಿಟ್ಟ ವರದಿಗೆ ಸ್ಪಂದಿಸಿದ ತಾಲೂಕು ತಹಶೀಲ್ದಾರ್ ಶ್ರೀಮತಿ ಅನಿತಾ ಲಕ್ಷ್ಮಿ ಆದೇಶದ ಮೇರೆಗೆ ಪೆರುವಾಜೆ ಗ್ರಾಮದ ನೋಡಲ್ ಆಫೀಸರ್ ಗಳಾದ ಪೆರುವಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಅಲೆಕ್ಕಾಡಿ ಮತ್ತು ಗ್ರಾಮ ಲೆಕ್ಕಾಧಿಕಾರಿ ಶಿವರಾಜ್ ಹಾಗೂ ಮೆಸ್ಕಾಂ ಅಧಿಕಾರಿ ಪ್ರಸಾದ್ ಕೆ.ವಿ. ಅವರು ಭೇಟಿ ನೀಡಿ ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ
ಪೆರುವಾಜೆ ಗ್ರಾಮದ ಕಾನಾವು ಸಮೀಪದ ಪೆರುವಾಜೆ ಬ್ಲಾಕ್ ಅರಣ್ಯ ಪ್ರದೇಶದಲ್ಲಿ ಉರುಳಿಗೆ ಬಿದ್ದ ಚಿರತೆಯನ್ನು ಯಶಸ್ವಿ ಕಾರ್ಯಾಚರಣೆಯ ಮೂಲಕ ಸೆರೆ ಹಿಡಿಯಲಾಗಿದೆ. ತಜ್ಞ ವೈದ್ಯರ ತಂಡ ಅರವಳಿಕೆ ಮದ್ದು ಪ್ರಯೋಗಿಸಿದ ಅನಂತರ ಚಿರತೆಯನ್ನು ಸೆರೆ ಹಿಡಿದು ಬೋನಿನ ಮೂಲಕ ಪಶ್ಚಿಮ ಘಟ್ಟದ ಕಾಡಿಗೆ ಕೊಂಡೊಯ್ಯಲಾಯಿತು. ಕಾರ್ಯಾಚರಣೆ ವೇಳೆ ಸಂದರ್ಭದಲ್ಲಿ ಪುತ್ತೂರು, ಸುಳ್ಯ ಉಪವಿಭಾಗದ ಅರಣ್ಯಧಿಕಾರಿಗಳು ಪಾಲ್ಗೊಂಡಿದ್ದರು.