ಮಳೆಯಿಂದಾಗಿ ಪೆರುವಾಜೆಯ ನಾಗನಮಜಲಿನಲ್ಲಿ ರಸ್ತೆಯಲ್ಲಿ ಬಿರುಕು : ಪೆರುವಾಜೆ ಗ್ರಾಮದ ನೋಡೆಲ್ ಅಫೀಸರ್‍ಗಳು ಭೇಟಿ, ಪರಿಶೀಲನೆ
ಸುಳ್ಯ ತಾಲೂಕು ಪೆರುವಾಜೆ ಗ್ರಾಮದ ಮೂರನೆಯ ವಾರ್ಡಿನ ನಾಗನ ಮಜಲು ಎಂಬಲ್ಲಿ ರಸ್ತೆ ಬಿರುಕು ಬಿಟ್ಟ ವರದಿಗೆ ಸ್ಪಂದಿಸಿದ ತಾಲೂಕು ತಹಶೀಲ್ದಾರ್ ಶ್ರೀಮತಿ ಅನಿತಾ ಲಕ್ಷ್ಮಿ ಆದೇಶದ ಮೇರೆಗೆ ಪೆರುವಾಜೆ ಗ್ರಾಮದ ನೋಡಲ್ ಆಫೀಸರ್ ಗಳಾದ ಪೆರುವಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಅಲೆಕ್ಕಾಡಿ ಮತ್ತು ಗ್ರಾಮ ಲೆಕ್ಕಾಧಿಕಾರಿ ಶಿವರಾಜ್ ಹಾಗೂ ಮೆಸ್ಕಾಂ ಅಧಿಕಾರಿ ಪ್ರಸಾದ್ ಕೆ.ವಿ. ಅವರು ಭೇಟಿ ನೀಡಿ ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಜಗನ್ನಾಥ ಪೂಜಾರಿ ಮತ್ತು ವಾರ್ಡಿನ ಸದಸ್ಯ ಸಚಿನ್ ರಾಜ್ ಶೆಟ್ಟಿ ಮಾತನಾಡಿ ಕಾಮಗಾರಿಯನ್ನು ಗ್ರಾಮ ಪಂಚಾಯತಿ ಮುಖಾಂತರ ಮಾಡಿಸಲು ಅಧಿಕವಾದ ವೆಚ್ಚ ಇರುವುದರಿಂದ ಸಾಧ್ಯವಾಗದೇ ಇರುವುದರಿಂದ ಜಿಲ್ಲಾಧಿಕಾರಿಯವರು ಸ್ಥಳ ಪರಿಶೀಲನೆ ಮಾಡಬೇಕೆಂದು ಈ ಮೂಲಕ ಮನವಿಯನ್ನು ಮಾಡಿದರು. ಈ ಸಂದರ್ಭದಲ್ಲಿ ನಾಗನ ಮಜಲ್ ಗ್ರಾಮಸ್ಥರು ಉಪಸ್ಥಿತರಿದ್ದರು