HomeFresh Newsಸುಳ್ಯ: ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ: ಬಲಿಬಿಂಬಕ್ಕೆ ಚಿನ್ನದ ಕವಚ ಸಮರ್ಪಣೆ

ಸುಳ್ಯ: ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ: ಬಲಿಬಿಂಬಕ್ಕೆ ಚಿನ್ನದ ಕವಚ ಸಮರ್ಪಣೆ

ಪೆರುವಾಜೆ : ಇತಿಹಾಸ ಪ್ರಸಿದ್ದ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವದ ಪ್ರಯುಕ್ತ ಗುರುವಾರ ಬೆಳಗ್ಗೆ ಶ್ರೀ ದೇವಿಯ ಬಲಿಬಿಂಬಕ್ಕೆ ಚಿನ್ನದ ಕವಚ, ಉಳ್ಳಾಕುಲು ದೈವಕ್ಕೆ ಬೆಳ್ಳಿಯ ಆಭರಣ ಸಮರ್ಪಣೆ ನಡೆಯಿತು.

ಶತಮಾನದ ಬಳಿಕ ದೇವಳಕ್ಕೆ ಬ್ರಹ್ಮರಥ ಸಮರ್ಪಣೆಯಾಗಿದ್ದು ಜ.19ರಂದು ಬ್ರಹ್ಮ ರಥೋತ್ಸವ ನಡೆಯಲಿದೆ. ಈ ಪ್ರಯುಕ್ತ ಸುಮಾರು ಎಂಟು ಲಕ್ಷ ರೂ ವೆಚ್ಚದಲ್ಲಿ ದೇವಳದ ವತಿಯಿಂದ ಉತ್ಸವ ಬಿಂಬಕ್ಕೆ ಚಿನ್ನದ ಕವಚ, ಉಳ್ಳಾಕುಲು ದೈವಕ್ಕೆ ಬೆಳ್ಳಿಯ ಆಭರಣ ಸಮರ್ಪಿಸಲಾಯಿತು.
ಕ್ಷೇತ್ರದ ತಂತ್ರಿ ಕೆಮ್ಮಿಂಜೆ ಕಾರ್ತಿಕ್ ತಂತ್ರಿ ನೇತೃತ್ವದಲ್ಲಿ ಸಮರ್ಪಣೆಗೆ ಧಾರ್ಮಿಕ ವಿಧಿ ವಿಧಾನ ನೆರವೇರಿತು.

ಈ ಸಂದರ್ಭದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ, ಸದಸ್ಯರಾದ ಪಿ. ವೆಂಕಟಕೃಷ್ಣ ರಾವ್, ಜಯಪ್ರಕಾಶ್ ರೈ, ದಾಮೋದರ ನಾಯ್ಕ, ನಾರಾಯಣ ಕೊಂಡೆಪ್ಪಾಡಿ, ಜಗನ್ನಾಥ ರೈ, ಭಾಗ್ಯಲಕ್ಷ್ಮಿ, ಯಶೋದ ಎ,ಎಸ್., ಕ್ಷೇತ್ರದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ಭೋಜರಾಜ ಶೆಟ್ಟಿ ಕಲ್ಕಂಪಾಡಿಗುತ್ತು, ಕ್ಷೇತ್ರದ ಕಚೇರಿ ವ್ಯವಸ್ಥಾಪಕ ವಸಂತ ಪೆರುವಾಜೆ ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments