ಪೆರುವಾಜೆ ಭಾವೈಕ್ಯ ಮಹಿಳಾ ಮಂಡಲದ ನೂತನ ಪದಾಧಿಕಾರಿಗಳ ಆಯ್ಕೆ

ಅಧ್ಯಕ್ಷರಾಗಿ ಪ್ರಮೀಳಾ ಶೆಟ್ಟಿ , ಕಾರ್ಯದರ್ಶಿ ಸುಮಲತಾ ಸುನಿಲ್ , ಪೆರುವಾಜೆ ಗ್ರಾಮದ ಭಾವೈಕ್ಯ ಮಹಿಳಾ ಮಂಡಲದ ನೂತನ ಪದಾಧಿಕಾರಿಗಳ ಆಯ್ಕೆಯು ಆ.08 ರಂದು ನಡೆಯಿತು.

ಮಹಿಳಾ ಮಂಡಲದ ಅಧ್ಯಕ್ಷರಾಗಿ ಪ್ರಮೀಳಾ ಶೆಟ್ಟಿ, ಉಪಾಧ್ಯಕ್ಷರಾಗಿ ಭಾಗ್ಯಲಕ್ಷ್ಮಿ ಅರ್ನಾಡಿ, ಕಾರ್ಯದರ್ಶಿಯಾಗಿ ಸುಮಲತಾ ಸುನಿಲ್, ಜತೆ ಕಾರ್ಯದರ್ಶಿಯಾಗಿ ಯಶೋಧಾ, ಕೋಶಾಧಿಕಾರಿಯಾಗಿ ರಾಗಿಣಿ ಆಯ್ಕೆಯಾದರು. ನಿರ್ದೇಶಕರಾಗಿ ಪ್ರೇಮ ಕೊಲ್ಯ, ವನಿತಾ ಸಾರಕೆರೆ, ಸುಜಾತ ಪದ್ಮನಾಭ, ವೀಣಾ ಕೊಲ್ಯ, ಸವಿತಾ, ಅಶ್ವಿನಿ ಆಯ್ಕೆಯಾದರು.
