ಮಂಜೇಶ್ವರ ಗ್ರಾಮ ಪಂಚಾಯತ್‍ನ ಎರಡನೇ ವಾರ್ಡು ವ್ಯಾಪ್ತಿಯಲ್ಲಿರುವ ತೂಮಿನಾಡು ಮಹಾಕಾಳಿ ರಸ್ತೆ, ಕಳಪೆ ಕಾಮಗಾರಿಯಿಂದ ತಿಂಗಳು ಕಳೆಯುವ ಮುನ್ನವೇ ಕಿತ್ತು ಹೋಗಿದೆ. ಕಳಪೆ ಮತ್ತು ಅರೆಬರೆ ಕಾಮಗಾರಿ ನಡೆಸಿದ ಗುತ್ತಿಗೆದಾರನ ವಿರುದ್ಧ ವ್ಯಾಪಕ ಆಕ್ರೋಶವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಮಂಜೇಶ್ವರ ಗ್ರಾಮ ಪಂಚಾಯತ್ ಫಂಡ್‍ನಿಂದ 3 ಲಕ್ಷ ರೂ.
ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿಯಲ್ಲಿ ಕಳೆದ ಸುಮಾರು ಹನ್ನೊಂದು ವರ್ಷಗಳಿಂದ ಕುಂಟುತ್ತಾ ಸಾಗಿದ ಚತುರ್ಷ್ಪಥ ಹೆದ್ದಾರಿ ಕಾಮಗಾರಿ ಇದೀಗ ಅಂತ್ಯ ಕಾಣುವ ಲಕ್ಷಣಗಳು ಗೊಚರಿಸುತ್ತಿದ್ದರೂ ಮಾಡಿದ ಕಾಮಗಾರಿ ಕೆಲವೇ ಗಂಟೆಗಳಲ್ಲಿ ಆಯುಷ್ಯ ಕಳೆದುಕೊಳ್ಳುತ್ತಿದ್ದರೂ ಪ್ರಶ್ನಿಸುವವರಿಲ್ಲದೆ, ಆನೆ ನಡೆದಿದ್ದೇ ದಾರಿ ಎಂಬಂತ್ತಾಗಿದೆ. ಪಡುಬಿದ್ರಿ- ಎರ್ಮಾಳು ಗಡಿಭಾಗಲ್ಲಿ ಹೆದ್ದಾರಿಗೆ ಕಿರು ಸೇತುವೆ ನಿರ್ಮಾಣ ಕಾರ್ಯ ಆರಂಭಿಸಿ ದಶಕಗಳೇ ಕಳೆದು ಇದೀಗ ಪೂರ್ಣಗೊಂಡು,
ಪುತ್ತೂರು : ಅಭಿವೃದ್ಧಿ ಹೊಂದುತ್ತಿರುವ ಪುತ್ತೂರು ವಿಧಾನಸಭಾ ಕ್ಷೇತ್ರದ ಕೆದಿಲ ಗ್ರಾಮದಲ್ಲಿ ಹಲವು ರಸ್ತೆಗಳು ನಾದುರಸ್ತಿಯಲ್ಲಿದ್ದು, ಕೆದಿಲ ಗ್ರಾಪಂನವರು ಗ್ರಾಮದ ಹಲವು ರಸ್ತೆಗಳ ದುರಸ್ತಿಗೆ ಅನುದಾನ ಒದಗಿಸುವಂತೆ ಬೇಡಿಕೆಯಿಟ್ಟಿದ್ದಾರೆ. ಇದು ತಾಲೂಕಿನ ಇಡೀ ಗ್ರಾಮಸ್ಥರ ಬೇಡಿಕೆಯೂ ಆಗಿದೆ. ಎಲ್ಲಾ ಸಮುದಾಯದವರು ವಾಸಿಸುವ ಈ ಗ್ರಾಮದಲ್ಲಿ ಕೃಷಿಕರು ಅಧಿಕ ಸಂಖ್ಯೆಯಲ್ಲಿದ್ದಾರೆ. ಹಲವು ಶಾಲೆಗಳು ಕಾರ್ಯಾಚರಿಸುತ್ತಿವೆ. ಅಡಕೆ ಗಾರ್ಬಲ್‌ಗಳು ಇನ್ನಿತರ
ಮಂಜೇಶ್ವರ: ಮಂಜೇಶ್ವರ ವರ್ಕಾಡಿ ಪಂಚಾಯತಿಗೆ ಒಳಪಟ್ಟ ಆನೆಕ್ಕಲ್ಲು ಕತ್ತರಕೋಡಿ ಬೋರ್ಕಳ ಮಾರ್ಗವಾಗಿ ಉಪ್ಪಳಕ್ಕೆ ಹೋಗುವ ರಸ್ತೆಯ ಸ್ಥಿತಿ ತುಂಬಾ ಶೋಚನೀಯವಾಗಿದೆ. ಪ್ರತಿದಿನ ನೂರಾರು ವಾಹನಗಳು ಸಂಚರಿಸುವ ಹಾಗೂ ನೂರಾರು ಕಾಲ್ನಡಿಗೆ ಯಾತ್ರಿಕರು ಆಶ್ರಯಿಸುವ ಏಕೈಕ ರಸ್ತೆಯಾಗಿದೆ. ಜನರು ನಡೆದು ಹೋಗಲು ಅಥವಾ ತುರ್ತು ಸಮಯಗಳಲ್ಲಿ ರೋಗಿಗಳನ್ನು ಕೊಂಡೊಯ್ಯಲು ಬೇರೆ ದಾರಿಯಿಲ್ಲ ಏಕೆಂದರೆ ಈ ಮಳೆಗಾಲದಲ್ಲಿ ಜನರು ನಡೆಯುವುದು ತುಂಬಾ ಕಷ್ಟದಿಂದ ಹಾಗೂ ವಾಹನಗಳ ಸಂಚಾರವೂ