ಸುರತ್ಕಲ್: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ ಭಾರತ ಸರ್ಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕರ್ನಾಟಕ ಸರ್ಕಾರ ಬಂಟರ ಸಂಘ (ರಿ) ಸುರತ್ಕಲ್ ಇದರ ಸಹಯೋಗದಲ್ಲಿ ಸಾರ್ವಜನಿಕರಿಗೆ ಅಯುಷ್ಮಾನ್ ಭಾರತ ಕಾರ್ಡ್ ಮತ್ತು ಇ ಶ್ರಮ ಕಾರ್ಡ್ ವಿತರಣಾ ಕಾರ್ಯ ಕ್ರಮ ಸಮಾರಂಭ ಫೆಬ್ರವರಿ 18 ರಂದು ಆದಿತ್ಯವಾರ ಬೆಳಿಗ್ಗೆ 9-30 ಕ್ಕೆ ಬಂಟರ ಭವನ ಸುರತ್ಕಲ್ ಇಲ್ಲಿ
ಸುರತ್ಕಲ್: ಭಾರತವು ಕೃಷಿ ಪ್ರಧಾನವಾದ ದೇಶವಾಗಿದ್ದು ಇಂದಿನ ಯುವ ಜನತೆ ಕೃಷಿಯತ್ತ ಒಲವು ತೋರಿಸುವ ಅಗತ್ಯ ವಿದೆ ಎಂದು ನಿವೃತ್ತ ಸುರತ್ಕಲ್ ಕೃಷಿ ಅಧಿಕಾರಿ ಅಬ್ದುಲ್ ಬಸೀರ್ ನುಡಿದರು ಅವರು ಬಂಟರ ಸಂಘ ಸುರತ್ಕಲ್, ಲಯನ್ಸ್ ಕ್ಲಬ್ ಸುರತ್ಕಲ್ ಮತ್ತು ಜೆಸಿಐ ಸುರತ್ಕಲ್ ಸಹಯೋಗ ದಲ್ಲಿ ಬಂಟರ ಭವನ ಸುರತ್ಕಲ್ ನಲ್ಲಿ ನಡೆದ ಸಾವಯವ ಕೃಷಿಕರ ಮತ್ತು ಗ್ರಾಹಕರ ಮುಖಾಮುಖಿ ಕಾರ್ಯ ಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು ಇಂದಿನ ಕಾಲಘಟ್ಟದಲ್ಲಿ ನಮ್ಮ ಆರೋಗ್ಯ ದ
ಸುರತ್ಕಲ್: ಸುರತ್ಕಲ್ ಟೋಲ್ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಟೋಲ್ ವಿರೋಧಿ ಹೋರಾಟಗಾರರ ಸಮಿತಿ ಕರೆ ನೀಡಿರುವ ಪ್ರತಿಭಟನೆ. ಟೋಲ್ ಗೇಟ್ ಮುತ್ತಿಗೆ ಸಂದರ್ಭ ಪೋಲಿಸ್ ಹಾಗೂ ಪ್ರತಿಭಟನಾಕಾರರ ನಡುವೆ ನೂಕಾಟ-ತಳ್ಳಾಟ ನಡೆದಿದ್ದು, ಈ ವೇಳೆ ಪೊಲೀಸರು ಪ್ರತಿಭಟನಾಕಾರರಿಗೆ ಲಾಠಿ ಪ್ರಯೋಗ ಮಾಡಿರುವುದಾಗಿ ಎಂದು ತಿಳಿದು ಬಂದಿದೆ. ಪ್ರತಿಭಟನಾಕಾರರನ್ನು ನಿಯಂತ್ರಿಸುವ ಸಂದರ್ಭದಲ್ಲಿ ಪ್ರತಿಭಟನಾಕಾರ ಅಬ್ದುಲ್ ಖಾದರ್ ಎಂಬವರ ಕಣ್ಣಿಗೆ ಲಾಠಿ ತಾಗಿ
ಸುರತ್ಕಲ್ ಎನ್‍ಐಟಿಕೆ ಬಳಿಯ ಟೋಲ್‍ಗೇಟ್ ತೆರವಿಗೆ ಅಧಿಕಾರಿಗಳು 20 ದಿನಗಳ ಕಾಲಾವಕಾಶ ಕೋರಿದ್ದು ಅಲ್ಲಿಯವರೆಗೆ ಕಾಯುವಂತೆ ವಿನಂತಿಸಿರುವುದಾಗಿ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಕೂಡ ಲೋಕಸಭೆಯಲ್ಲಿ ಟೋಲ್‍ಗೇಟ್ ತೆರವು ಬಗ್ಗೆ ಪ್ರಸ್ತಾವ ಮಾಡಿದ್ದರು ಮತ್ತು ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ. ತೆರವಿಗಾಗಿ ಕೆಲವು ಸಭೆಗಳನ್ನು ನಡೆಸಲಾಗಿದೆ.
ವಿಶ್ವ ತುಳು ಲಿಪಿ ದಿನದ ಅಂಗವಾಗಿ ನಗರದ ಸುರತ್ಕಲ್ ನ ಗೋವಿಂದದಾಸ್ ಕಾಲೇಜು ಮುಂಭಾಗದಲ್ಲಿ ‘ತುಳು ದಿಬ್ಬಣ’ ಕಾರ್ಯಕ್ರಮ ನಡೆಯಿತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಅವರು ಮಾತನಾಡಿ, ಇಂದು ನಾವು ಮಲಯಾಳಂಗೆ ತುಳುಲಿಪಿಯನ್ನು ಮಾರುವ ಕಾಲ ಬಂದಿದೆ. ಆದರೆ, ಮಲಯಾಳಂಗೆ ಲಿಪಿಯನ್ನು ನೀಡಿರುವ ಭಾಷೆ ತುಳು ಎಂದು ಹೇಳಲು ನಮಗೆ ಹೆಮ್ಮೆಯಾಗುತ್ತದೆ ಎಂದು ಹೇಳಿದರು.