ಉಳ್ಳಾಲ: ಸೋಮೇಶ್ವರ ಉಚ್ಚಿಲ ಕಡಲ ತೀರದಲ್ಲಿ ಚೀನಾದ ಹಡಗು ಮುಳುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಬರೋಬ್ಬರಿ ಆರು ತಿಂಗಳ ಬಳಿಕ ಹಡಗಿನ ತೈಲ ತೆರವು ಕಾರ್ಯ ಆರಂಭವಾಗಿದೆ. ಸರಕು ಹಡಗಿನಲ್ಲಿದ್ದ ಸುಮಾರು 220 ಟನ್ ತೈಲ ತೆರವು ಕಾರ್ಯ ನಡೀತಾ ಇದ್ದು, ಚೀನದಿಂದ ಲೆಬನಾನ್‍ಗೆ 8 ಸಾವಿರ ಟನ್ ತೂಕದ ಸ್ಟೀಲ್ ಕಾಯಿಲ್ ಸಾಗಿಸುತ್ತಿದ್ದ ಹಡಗು ಇದಾಗಿತ್ತು. 2022ರ
ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಳುಗಡೆಯಾಗಿದ್ದು, 7 ಮಂದಿ ಮೀನುಗಾರರನ್ನು ಸ್ಥಳೀಯರು ರಕ್ಷಣೆ ಮಾಡಿರುವ ಘಟನೆ ಉಚ್ಚಿಲದಲ್ಲಿ ನಡೆದಿದೆ. ಮೀನುಗಾರಿಕೆಗೆ ತೆರಳಿದ್ದ ಸಂದರ್ಭ ಉಚ್ಚಿಲದ ನಿವಾಸಿ ವಿಮಲಾ ಸಿ ಪುತ್ರನ್ ಮಾಲಕತ್ವದ ಶ್ರೀ ಗಿರಿಜಾ ದೋಣಿಯು ಸೋಮವಾರ ಬೆಳಗ್ಗೆ ಸಮುದ್ರದಲ್ಲಿ ಮುಳುಗಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾದ ಘಟನೆ ನಡೆದಿದೆ. ಸೋಮವಾರ ಬೆಳಗಿನ ಜಾವ ಐದು ಗಂಟೆಯ ಸುಮಾರಿಗೆ ಉಚ್ಚಿಲದ ಶ್ರೀ ಗಿರಿಜಾ ದೋಣಿಯಲ್ಲಿ 7 ಮಂದಿ ಮೀನುಗಾರಿಕೆಗೆ
ಕೇವಲ ಬೆರಳೆಣಿಕೆಯ ಗ್ರಾಮಸ್ಥರ ಮಧ್ಯೆಯೇ 56ನೇ ಉಚ್ಚಿಲ ಬಡಾ ಗ್ರಾಮ ಪಂಚಾಯತಿಯ ಪ್ರಥಮ ಗ್ರಾಮ ಸಭೆ, ಉಚ್ಚಿಲ ಶ್ರೀ ಮಹಾಲಕ್ಷ್ಮಿ ಸಭಾಭವನದಲ್ಲಿ ನಡೆದಿದೆ. ಆರಂಭದಲ್ಲೇ ಸಭಾಭವನದಲ್ಲಿ ಸೂಕ್ತ ಧ್ವನಿವರ್ಧಕದ ವ್ಯವಸ್ಥೆ ಇಲ್ಲದೆ ಸಭೆ ಮಾತುಗಳು ಉಪಸ್ಥಿತರಿದ್ದ ಬೆರಳೆಣಿಕೆ ಮಂದಿಗೂ ಕೇಳದೆ ಸಭೆಯಲ್ಲಿ ಗೊಂದಲದ ಸ್ಥಿತಿ ನಿರ್ಮಾಣವಾಗಿತ್ತು.15 ಮಂದಿ ಗ್ರಾಮಸ್ಥರು, ಆಶಾ ಕಾರ್ಯಕರ್ತೆಯರು, ಅಧಿಕಾರಿ ವರ್ಗ ಮಾತ್ರ ಸಭೆಯಲ್ಲಿ ಕಾಣಿಸುತ್ತಿದ್ದು ಗ್ರಾ.ಪಂ. ಕಾರ್ಯವೈಕರಿ
ಇತ್ತೀಚೆಗೆ ನವಿಕೃತಗೊಂಡ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ರಾಜ್ಯ ಗ್ರೃಹ ಸಚಿವ ಆರಗ ಜ್ಞಾನೇಂದ್ರರವರು ಬುಧವಾರ ಸಂಜೆ ಭೇಟಿ ನೀಡಿ ಶ್ರೀ ಮಹಾಲಕ್ಷ್ಮಿಯ ದರ್ಶನ ಪಡೆದರು.ದೇವಳದ ವತಿಯಿಂದ ಅವರನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಯಿತು.ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಮುಖ್ಯ ಅರ್ಚಕ ಕೆ ವಿ ರಾಘವೇಂದ್ರ ಉಪಾಧ್ಯಾಯ ಹಾಗೂ ವಿಷ್ಣುಮೂರ್ತಿ ಉಪಾಧ್ಯಾಯರವರು ಶ್ರೀದೇವಿಗೆ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಿದರು.ದೇವಾಲಯದ ರುವಾರಿ ನಾಡೋಜ ಡಾ. ಜಿ. ಶಂಕರ್
ವೃದ್ಧರೊಬ್ಬರಿಗೆ ಕಾರು ಡಿಕ್ಕಿ ಹೊಡೆದು ಗಂಭೀರ ಗಾಯವಾಗಿ ಆಸ್ಪತ್ರೆಗೆ ಸೇರಿದ್ಧ ಅವರು ಚಿಕಿತ್ಸೆ ಪಲಕಾರಿಯಾಗದೆ ಮೃತಪಟ್ಟ ಘಟನೆ ಉಳ್ಳಾಲ ತಾಲೂಕಿನ ಉಚ್ಚಿಲ ಎಂಬಲ್ಲಿ ನಡೆದಿದೆ.ಉಚ್ಚಿಲ ನಿವಾಸಿ ನಾರಾಯಣ ಪೂಜಾರಿ(82) ಮೃತ ದುರ್ಧೈವಿ ಆಗಿದ್ದು, ಶುಕ್ರವಾರ ಸಂಜೆ ರಸ್ತೆ ದಾಟುತ್ತಿರುವಾಗ ಕೇರಳಕ್ಕೆ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ನಾರಾಯಣ ಪೂಜಾರಿ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಲಕಾರಿಯಾಗಿದೆ
ಉಚ್ಚಿಲ : ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ವತಿಯಿಂದ ಉಚ್ಚಿಲ ಮೊಗವೀರ ಭವನದಲ್ಲಿ ಆಯೋಜಿಸಲಾಗಿದ್ದ ಉಪ್ಪಳದಿಂದ ಶಿರೂರುವರೆಗಿನ ಮೊಗವೀರ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಗುರಿಕಾರರಿಗೆ ಗೌರವಧನ ವಿತರಣಾ ಕಾರ್ಯಕ್ರಮವನ್ನು ಉಚ್ಚಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಾಡೋಜ ಜಿ. ಶಂಕರ್ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಉಚ್ಚಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಜೀಣೋದ್ಧಾರ ಸಂದರ್ಭ ಸಮಾಜದ
ಉಚ್ಚಿಲ ವಿಶಾಲ್ ಕೈರಂಪಣಿ ಪಂಡಿನಿಂದ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿ ಬಿರುಸುಗೊಳ್ಳುತ್ತಿರುವ ಮಳೆ ಕಡಿಮೆಯಾಗಲಿ, ಲೋಕ ಸಮೃದ್ಧಿಯಾಗಲಿ, ಮಳೆಗಾಲದ ಮೀನುಗಾರಿಕೆಯಲ್ಲಿ ಮತ್ಸ್ಯ ಸಂಪತ್ತು ಹೇರಳವಾಗಿ ಸಿಗುವಂತ್ತಾಗಲಿ ಎಂದು ಉಚ್ಚಿಲ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶಾಲ್ ಕೈರಂಪಣಿ ಪಂಡಿನ ಎಲ್ಲಾ ಸದಸ್ಯರು ಸಾಮೂಹಿಕ ಪ್ರಾರ್ಥನೆ ನಡೆಸಿದರು.ದೇವಳದ ಅರ್ಚಕ ಗೋವಿಂದ ಭಟ್ ಹಾಗೂ ಸಾಮಗರು ಪ್ರಾರ್ಥನಾ ವಿಧಿ ವಿಧಾನ
ತುಳುನಾಡಿದ ಹತ್ತು ಹಲವು ನಾಟಕ ತಂಡಗಳಲ್ಲಿ ತನ್ನ ನಟನಾ ಸಾಮರ್ಥ್ಯವನ್ನು ತೋರಿಸಿ ಅಲ್ಲದೇ ವಿ4ನ್ಯೂಸ್ ಕರ್ನಾಟಕದ ಕಾಮಿಡಿ ಪ್ರೀಮಿಯರ್ ಲೀಗ್‌ನಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಪ್ರಸಿದ್ಧ ಕಲಾವಿದ ಯತೀಶ್ ಶೆಟ್ಟಿ ಉಚ್ಚಿಲರವರು ಅನಾರೋಗ್ಯದ ಕಾರಣದಲ್ಲಿ ವಿಧಿವಶರಾಗಿದ್ದಾರೆ. ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದು ತನ್ನ ಉತ್ತಮ ನಡವಳಿಕೆ ಮತ್ತು ಉತ್ತಮ ನಟನೆಯ ಮೂಲಕ ಎಲ್ಲ ಮೆಚ್ಚುಗೆಗೆ ಪಾತ್ರರಾಗಿದ್ದ ಯತೀಶ್ ಶೆಟ್ಟಿ ಉಚ್ಚಿಲರವರು ಅನಾರೋಗ್ಯದಿಂದ ತನ್ನ ಚಿಕ್ಕ
ಉಡುಪಿ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್.ಎಚ್.ನಾಗೂರರವರು ಪಠ್ಯಪುಸ್ತಕ ಸಮಿತಿ ಬೆಂಗಳೂರು ಇದರ ಆದೇಶದಂತೆ ಹಾಗೂ ಉಡುಪಿ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾ ಅಧಿಕಾರಿಯವರ ನಿರ್ದೇಶನದ ಮೇರೆಗೆ ಉಚ್ಚಿಲ ಬಡಾ ಗ್ರಾಮ ಪಂಚಾಯತಿಯ ವಾಚನಾಲಯಕ್ಕೆ 5ರಿಂದ 10 ನೇ ತರಗತಿಯ ಹಿಂದಿನ ವರ್ಷದ 2 ಜೊತೆ ಪುಸ್ತಕಗಳನ್ನು ಅಧ್ಯಕ್ಷೆ ಜ್ಯೋತಿ ಗಣೇಶ್ ರವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಡಿಡಿಪಿಐ ಎನ್.ಎಚ್.ನಾಗೂರರವರು ಮಾತನಾಡಿ, ರಜಾ ಅವಧಿಯಲ್ಲಿ 1-10ನೇ ತರಗತಿಗಳಲ್ಲಿ
ಕಳೆದ ನಾಲ್ಕು ವರ್ಷಗಳಿಂದ ಉಚ್ಚಿಲ ಬಡ ಗ್ರಾ.ಪಂ. ವ್ಯಾಪ್ತಿಯ ಭಾರತ್ ನಗರದ ಹನ್ನೆರಡು ಮನೆಗಳಿರುವ ಪ್ರದೇಶ ಸುತ್ತಲೂ ಮಳೆ ನೀರು ನಿಂತು ಕೃತಕ ದ್ವೀಪ ನಿರ್ಮಾಣಗೊಂಡಿದ್ದರೂ ಈ ಭಾಗದ ಶಾಸಕರಾಗಲೀ ಗ್ರಾ.ಪಂ. ಆಗಲಿ ಸ್ಪಂದಿಸುತ್ತಿಲ್ಲ ಎಂಬುದಾಗಿ ಜನ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.ಇಲ್ಲಿಯ ಸಮಸ್ಯೆಯ ಬಗ್ಗೆ ಮಾದ್ಯಮಕ್ಕೆ ಮಾಹಿತಿ ನೀಡಿದ ದಿವ್ಯ ಎಂಬವರು, ಮಕ್ಕಳು, ಹಿರಿಯರು, ಅನಾರೋಗ್ಯ ಪೀಡಿತರು ವಾಸ ಮಾಡುವ ಬಡ ಎರ್ಮಾಳು ಭರತ್ ನಗರ ನಿವಾಸಿಗಳಾದ ನಾವು ಮಳೆ ಬಂದರೆ