ಉಚ್ಚಿಲ ಅಪಾಯಕಾರಿ ಡೈವರ್ಷನ್ ಮುಚ್ಚುಗಡೆ : ಬೆಂಬಲ ವ್ಯಕ್ತ ಪಡಿಸಿದ ಸಾರ್ವಜನಿಕರು
ಬಹಳಷ್ಟು ಅಮಾಯಕರು ಪ್ರಾಣ ಕಳೆದುಕೊಂಡ ಉಚ್ಚಿಲದ ಪಣಿಯೂರು ತಿರುವು ಬಳಿಯ ಡೈವರ್ಷನ್ ಮುಚ್ಚುವ ಮೂಲಕ ನವಯುಗ್ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.ಕೆಲ ವರ್ಷಗಳ ಹಿಂದೆ ಸರ್ವಿಸ್ ರಸ್ತೆ ನಿರ್ಮಾಣದ ಬೇಡಿಕೆ ಮುಂದಿರಿಸಿದ ಸಾರ್ವಜನಿಕರು, ಸರ್ವಿಸ್ ರಸ್ತೆ ನಿರ್ಮಾಣ ಮಾಡುವ ವರಗೆ ಪಣಿಯೂರು ಕ್ರಾಸ್ ಬಳಿ ಡೈವರ್ಷನ್ ತೆರೆಯುವಂತೆ ಆಗ್ರಹಿಸಿದ ಹಿನ್ನಲೆಯಲ್ಲಿ ಅನಧಿಕೃತ ಡೈವರ್ಷನ್ ತೆರೆದುಕೊಂಡಿದ್ದು, ಆ ಬಳಿಕ ಆ ಡೈವರ್ಷನ್ ನಲ್ಲಿ ನಡೆದ ದುರಂತ ಒಂದೆರಡಲ್ಲ.
ಕೆಲವರು ಕೈಕಾಲು ಕಳೆದುಕೊಂಡರೆ, ಬಹಳಷ್ಟು ಮಂದಿ ಅಮಾಯಕರು ಪ್ರಾಣವನ್ನೇ ಕಳೆದುಕೊಂಡು ತಮ್ಮ ಕುಟುಂಬವನ್ನು ಅನಾಥರನ್ನಾಗಿಸಿದರು. ಇದೀಗ ಸರ್ವಿಸ್ ರಸ್ತೆ ನಿರ್ಮಾಣಗೊಂಡು ಸಮಯ ಕೆಲವು ಸಂದರೂ ಡೈವರ್ಷನ್ ಮುಚ್ಚುಗಡೆಗೆ ಶೇಕಡಾ ತ್ತೊಂಬತ್ತರಷ್ಟು ಬೆಂಬಲ ವಿದ್ದರೂ, ಹತ್ತರಷ್ಟು ವಿರೋಧ ವ್ಯಕ್ತವಾಗಿದ್ದ ಹಿನ್ನಲೆಯಲ್ಲಿ ಮುಚ್ಚುವಿಕೆಗೆ ಅಡ್ಡಿಯಾಗಿದ್ದು, ಇದೀಗ ಎಡೆಬಿಡದೆ ನಡೆಯುತ್ತಿರುವ ಅಪಘಾತಗಳಿಂದ ಸಾರ್ವಜನಿಕರು ನವಯುಗ್ ಕಂಪನಿಯ ವಿರುದ್ಧ ಕಿಡಿಕಾರುತ್ತಿದಂತೆ ಎಚ್ಚರಗೊಂಡ ಇಲಾಖೆ ಪೊಲೀಸ್ ರಕ್ಷಣೆಯೊಂದಿಗೆ ಅಪಾಯಕಾರಿ ಅವೈಜ್ಞಾನಿಕ ಡೈವರ್ಷನ್ ಗೆ ಬ್ರೇಕ್ ಹಾಕುವ ಮೂಲಕ ಸಾರ್ವಜನಿಕರ ಶ್ಲಾಘನೆಗೆ ಪಾತ್ರರಾಗಿದ್ದು, ಆದರೆ ಪಣಿಯೂರು ರಸ್ತೆಗೆ ಘನ ವಾಹನಗಳು ಸರಗವಾಗಿ ಸಂಚರಿಸುವಂತೆ ಕಂಪನಿ ವ್ಯವಸ್ಥೆ ಕಲ್ಪಿಸುವಂತೆ ಜನ ಒತ್ತಾಯಿಸಿದ್ದಾರೆ.