HomeFresh Newsಯಕ್ಷ ದೇಗುಲ 10ನೇ ತೋಕೂರು ಇದರ ನೂತನ ಅಧ್ಯಕ್ಷರಾಗಿ ಪ್ರೇಮಲತಾ ಯೋಗೀಶ್ ಆಯ್ಕೆ

ಯಕ್ಷ ದೇಗುಲ 10ನೇ ತೋಕೂರು ಇದರ ನೂತನ ಅಧ್ಯಕ್ಷರಾಗಿ ಪ್ರೇಮಲತಾ ಯೋಗೀಶ್ ಆಯ್ಕೆ

ಹಳೆಯಂಗಡಿ: ಯಕ್ಷ ದೇಗುಲ ಹತ್ತು ಸಮಸ್ತರು 10ನೇ ತೋಕೂರು ಇದರ 7ನೇ ವರ್ಷದ ಮಹಾಸಭೆಯು ಯಕ್ಷ ದೇಗುಲದ ಅಧ್ಯಕ್ಷರಾದ ಶ್ರೀ ದಿನಕರ್ ಸಾಲ್ಯಾನ್ ರವರ ಅಧ್ಯಕ್ಷತೆಯಲ್ಲಿ ಶ್ರೀ ಓಂಕಾರೇಶ್ವರೀ ಮಂದಿರ 10ನೇ ತೋಕೂರು ಇಲ್ಲಿ ನೆರವೇರಿತು.

ಯಕ್ಷದೇಗುಲದ ಪ್ರಧಾನ ಕಾರ್ಯದರ್ಶಿ ಶ್ರೀ ಭಾಸ್ಕರ್ ಅಮೀನ್ ತೋಕೂರುರವರು ವಾರ್ಷಿಕ ಆಯ-ವ್ಯಯದ ಮಂಡನೆಯನ್ನು ಸಭೆಯ ಮುಂದಿರಿಸಿ ಅನುಮೋದನೆಯನ್ನು ಪಡೆದುಕೊಂಡರು.

ಸಭೆಯಲ್ಲಿ 7ನೇ ವರ್ಷದ ಯಕ್ಷಗಾನ ಬಯಲಾಟದ ಯಶಸ್ಸಿಗೆ ಸಹಕಾರವನ್ನು ನೀಡಿರುವ ಎಲ್ಲಾ ದಾನಿಗಳಿಗೆ ಮತ್ತು ಸದಸ್ಯರಿಗೆ ಸಂಘಟನೆಯ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಮಾಜಿ ಅಧ್ಯಕ್ಷರಾದ ಶ್ರೀ ದಿನಕರ್ ಸಾಲ್ಯಾನ್ ರವರು ಮಾತನಾಡಿ 7ನೇ ವರ್ಷದ ಯಕ್ಷಗಾನ ಬಯಲಾಟಕ್ಕೆ ಸಹಕಾರವನ್ನು ನೀಡಿರುವ ಸರ್ವ ಸದಸ್ಯರಿಗೂ ಧನ್ಯವಾದವನ್ನು ಅರ್ಪಿಸಿದರು.

ಯಕ್ಷ ದೇಗುಲದ 2026-27 ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಶ್ರೀಮತಿ ಪ್ರೇಮಲತಾ ಯೋಗೀಶ್ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಮತ್ತು ಗೌರವಾಧ್ಯಕ್ಷರಾಗಿ ಸತತ 8ನೇ ವರ್ಷಕ್ಕೆ ಶ್ರೀ ಜಯಕೃಷ್ಣ ಕೋಟ್ಯಾನ್ ರವರು ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಪದ್ಮರಾಜ್ ಕರ್ಕೇರ ಪ್ರಧಾನ ಕಾರ್ಯದರ್ಶಿಯಾಗಿ ಸತತ 8ನೇ ವರ್ಷಕ್ಕೆ ಶ್ರೀ ಭಾಸ್ಕರ್ ಅಮೀನ್ ತೋಕೂರು ಮತ್ತು ಕೋಶಾಧಿಕಾರಿಯಾಗಿ ಶ್ರೀ ನವೀನ್ ಚಂದ್ರರವರು ಆಯ್ಕೆಯಾದರು.
ಜೊತೆ ಕಾರ್ಯದರ್ಶಿಗಳಾಗಿ ಶ್ರೀಮತಿ ಕುಸುಮ ಎಚ್ ಕೋಟ್ಯಾನ್, ಆಂತರಿಕ ಲೆಕ್ಕಪರಿಶೋಧಕರಾಗಿ ಶ್ರೀ ಹಿಮಕರ್ ಸುವರ್ಣ ಕಲ್ಲಾಡಿ, ಗೌರವ ಸಲಹೆಗಾರರಾಗಿ ಶ್ರೀ ಗುರುರಾಜ ಎಸ್ ಪೂಜಾರಿ, ಶ್ರೀ ದಿವಾಕರ್ ಕರ್ಕೇರ, ಶ್ರೀ ಸಂಜೀವ ಕರ್ಕೇರ, ಶ್ರೀ ಗಣೇಶ್ ಜಿ ಬಂಗೇರ, ಶ್ರೀ ಸುರೇಶ್ ಬಿ ದೇವಾಡಿಗ, ಶ್ರೀ ಸದಾಶಿವ ಸಾಲ್ಯಾನ್, ಶ್ರೀ ಮೋಹನ್ ಪೂಜಾರಿ, ಶ್ರೀ ದಿನಕರ್ ಸಾಲ್ಯಾನ್ ರವರನ್ನು ಆಯ್ಕೆ ಮಾಡಲಾಯಿತು.
ಸಂಘಟನಾ ಸಮಿತಿಯ ಸದಸ್ಯರಾಗಿ ಶ್ರೀ ಮೋಹನ್ ದಾಸ್ ಶೆಟ್ಟಿಗಾರ್, ಶ್ರೀಮತಿ ವನಿತಾ ಕೆ. ಸನಿಲ್, ಶ್ರೀಮತಿ, ಶ್ರೀ ಭೋಜ ಕೋಟ್ಯಾನ್, ಶ್ರೀ ಮಹಮ್ಮದ್ ಶರೀಫ್, ಶ್ರೀ ಅಮ್ಜದ್, ಶ್ರೀ ಮೋಹನ್ ದಾಸ್ ದೇವಾಡಿಗ, ಶ್ರೀ ಸಂಪತ್ ಜೆ ಶೆಟ್ಟಿ, ಶ್ರೀ ಸುನೀಲ್, ಶ್ರೀ ಶ್ರೀನಿವಾಸ ಸಮಿತಿಯ ಸದಸ್ಯರಾಗಿ ಶ್ರೀ ಸದಾಶಿವ ಕುಂದರ್, ಶ್ರೀ ರಾಜೇಶ್ ಪೂಜಾರಿ, , ಶ್ರೀ ಹಿಮಕರ್, ಶ್ರೀ ವಿಶ್ವಜಿತ್ ಆಚಾರ್ಯ, ಶ್ರೀ ರೋಹಿತಾಕ್ಷ, ಶ್ರೀ ಬಶೀರ್ ಅಹ್ಮದ್ ಕಲ್ಲಾಪು, ಶ್ರೀ ಶ್ರೀನಿವಾಸ, ಶ್ರೀ ವಿಶಾಲ್ ಮತ್ತು ಶ್ರೀ ಮನೋಜ್ ರವರನ್ನು ಆಯ್ಕೆ ಮಾಡಲಾಯಿತು.

ಮಾಜಿ ಅಧ್ಯಕ್ಷರಾದ ಶ್ರೀ ದಿನಕರ್ ಸಾಲ್ಯಾನ್ ರವರು ನೂತನ ಅಧ್ಯಕ್ಷರಾದ ಶ್ರೀಮತಿ ಪ್ರೇಮಲತಾ ಯೋಗೀಶ್ ರವರಿಗೆ ಅಧಿಕಾರ ಹಸ್ತಾಂತರವನ್ನು ನೆರವೇರಿಸಿ ಕೊಟ್ಟರು.

8ನೇ ವರ್ಷಕ್ಕೆ ಆಯ್ಕೆಯಾದ ನೂತನ ಹಾಗೂ ಮೊದಲ ಮಹಿಳಾ ಅಧ್ಯಕ್ಷರಾದ ಶ್ರೀಮತಿ ಪ್ರೇಮಲತಾ ಯೋಗೀಶ್ ರವರು ಮಾತನಾಡಿ ಯಕ್ಷ ದೇಗುಲ ಸಂಘಟನೆಯ ಜವಾಬ್ದಾರಿಯು ದೊರಕಿರುವುದು ದೈವ ದೇವರುಗಳ ಆಶೀರ್ವಾದದಿಂದ ಮಾತ್ರ ಈ ಸಂಘಟನೆಯ ಸರ್ವತೋಮುಖ ಅಭಿವೃದ್ಧಿಗಾಗಿ ಶಕ್ತಿಮೀರಿ ಪ್ರಯತ್ನಿಸಿ, ಸಂಘಟನೆಯನ್ನು ಇನ್ನಷ್ಟು ಬಲಗೊಳಿಸುವುದಾಗಿ ತಿಳಿಸುತ್ತಾ ಎಲ್ಲಾ ಸದಸ್ಯರ ಸಹಕಾರವನ್ನು ಬಯಸಿದರು.

ಕಾರ್ಯಕ್ರಮವನ್ನು ಪ್ರಧಾನ ಕಾರ್ಯದರ್ಶಿ ಶ್ರೀ ಭಾಸ್ಕರ್ ಅಮೀನ್ ತೋಕೂರುರವರು ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments