Home Posts tagged #uppunda

ಉಪ್ಪುಂದ: ಚಂದ್ರಯಾನ-3 ಯಶಸ್ವಿ: ವಿದ್ಯಾರ್ಥಿಗಳಿಂದ ಗಮನಸೆಳೆದ ISRO ರಚನಾ ವಿನ್ಯಾಸ

ಭಾರತದ ಚಂದ್ರಯಾನ-೩ ಯಶಸ್ವಿಯಾದ ಹಿನ್ನೆಲೆಯಲ್ಲಿ ಅದಕ್ಕೆ ಕಾರಣೀಕರ್ತರಾದ ನಮ್ಮ ಹೆಮ್ಮೆಯ ಇಸ್ರೋ ಸಂಸ್ಥೆಗೆ ಗೌರವ ಸೂಚಕವಾಗಿ ಉಪ್ಪುಂದ ಸರಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗದ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಂದ ISRO ಎಂಬ ರಚನಾ ವಿನ್ಯಾಸವನ್ನು ರಚಿಸಿ ಅಭಿನಂದನೆ ಸಲ್ಲಿಸಲಾಯಿತು. ಕಳೆದ ಬಾರಿ ಇದೇ ಸಂಸ್ಥೆಯ ವಿದ್ಯಾರ್ಥಿಗಳು

ಉಪ್ಪುಂದ : ಮೀನುಗಾರಿಕೆಗೆ ತೆರಳಿದ್ದ ವೇಳೆ ದೋಣಿ ಪಲ್ಟಿ : 9 ಮಂದಿ ಮೀನುಗಾರರ ರಕ್ಷಣೆ

ಮೀನುಗಾರಿಕೆಗಾಗಿ ತೆರಳಿದ್ದ ವೇಳೆ ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿಯೊಂದು ಪಲ್ಟಿಯಾದ ಘಟನೆ ನಡೆದಿದ್ದು, ಅದೃಷ್ಟವಶಾತ್ ದೋಣಿಯಲ್ಲಿದ್ದ ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ.ಉಪ್ಪುಂದ ತಾರಾಪತಿ ಪುಂಡಲೀಕ ಅವರ ಒಡೆತನ ಶ್ರೀ ದುರ್ಗಾಪರಮೇಶ್ವರಿ ಹೆಸರಿನ ದೋಣಿಯಲ್ಲಿ 9 ಮಂದಿ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದು, ಈ ವೇಳೆ ಅಂದಾಜು 5 ನಾಟಿಕಲ್ ಮೈಲುಗಳ ದೂರದಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿ ಮಗುಚಿ ಬಿದ್ದಿದೆ. ಈ ವೇಳೆ ಬಲೆಗಳ ನಡುವೆ ಸಿಲುಕಿದ್ದ ಓರ್ವ

ಉಪ್ಪುಂದ ಕರ್ಕಿಕಳಿ ದೋಣಿ ದುರಂತ ಪ್ರಕರಣ : ಘಟನಾ ಸ್ಥಳಕ್ಕೆ ಮೀನುಗಾರಿಕ ಸಚಿವರು, ಶಾಸಕರು ಭೇಟಿ

ಬೈಂದೂರು: ತಾಲೂಕಿನ ಉಪ್ಪುಂದ ಕರ್ಕಿಕಳಿ ಎಂಬಲ್ಲಿ ನಡೆದ ದೋಣಿ ದುರಂತ ಪ್ರದೇಶ ಹಾಗೂ ಮೃತ ಮೀನುಗಾರರ ಮನೆಗಳಿಗೆ ಸಚಿವ ಮಾಂಕಾಳ ವೈದ್ಯ ಮತ್ತು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ ನೀಡಿ ಸಾಂತ್ವಾನ ಹೇಳಿದರು. ಸಚಿವ ಮಾಂಕಾಳ ವೈದ್ಯ ಮಾತನಾಡಿ ದೋಣಿ ದುರಂತದ ಬಗ್ಗೆ ನೋವಿದೆ. ಮೀನುಗಾರ ಕುಟುಂಬಕ್ಕೆ 24 ಗಂಟೆಯೊಳಗೆ ಸಂಕಷ್ಟ ಪರಿಹಾರ ನಿಧಿ ದೊರಕಿಸಿಕೊಡಬೇಕೆಂಬುದು ಶ್ರಮವಹಿಸಿದ್ದು, ಮೃತ ಮೀನುಗಾರರ ಕುಟುಂಬಕ್ಕೆ ತಲಾ ಲಕ್ಷ 6 ಹಸ್ತಾಂತರಿಸಲಾಗುತ್ತಿದೆ.

ಉಪ್ಪುಂದ ಮಡಿಕಲ್‍ನಲ್ಲಿ ದೋಣಿ ದುರಂತ : ಅವಘಡದಲ್ಲಿ ಓರ್ವ ಮೃತ್ಯು, ಇನ್ನೋರ್ವರಿಗಾಗಿ ಹುಡುಕಾಟ

ಬೈಂದೂರು ತಾಲ್ಲೂಕಿನ ಉಪ್ಪುಂದ ಮಡಿಕಲ್‍ನ ಕರ್ಕಿಕಳಿ ಎಂಬಲ್ಲಿ ಸಂಜೆ ದೋಣಿ ದುರಂತ ಸಂಭವಿಸಿದ್ದು, ಒಬ್ಬರು ಮೃತಪಟ್ಟು ಒಬ್ಬರು ನಾಪತ್ರೆಯಾಗಿದ್ದಾರೆ. ನಾಗೇಶ್ (30)ಮೃತಪಟ್ಟಿದ್ದು, ಸತೀಶ್ ಖಾರ್ವಿ(34) ನಾಪತ್ತೆಯಾಗಿರುವ ಮೀನುಗಾರ. ಸಚಿನ್ ಖಾರ್ವಿ ಮಾಲೀಕತ್ವದ ಮಾಸ್ತಿ ಮರ್ಲು ಚಿಕ್ಕು ಪ್ರಸಾದ ಹೆಸರಿನ ನಾಡದೋಣಿಯಲ್ಲಿ ಬೆಳಿಗ್ಗೆ ಭಟ್ಕಳ ಬಂದರಿನಿಂದ ಮೀನುಗಾರಿಕೆಗೆ ತೆರಳಿ ಮೀನುಗಾರಿಕೆ ಮುಗಿಸಿಕೊಂಡು ಉಪ್ಪುಂದ ಮಡಿಕಲ್‍ನ ಕರ್ಕಿಕಳಿ ಬಳಿ

ಅಂಕಪಟ್ಟಿ ಪರಿಶೀಲನೆಗೆ ದುಬಾರಿ ಶುಲ್ಕ ಇಳಿಕೆ : ಶಾಸಕ ಗುರುರಾಜ್ ಮನವಿಗೆ ಸ್ಪಂದಿಸಿದ ಮಂಗಳೂರು ವಿವಿ

ಉಪ್ಪುಂದ: ಪದವೀಧರರು ಉದ್ಯೋಗಕ್ಕೆ ಸೇರುವ ಸಂದರ್ಭ ಸಲ್ಲಿಸುವ ಅಂಕಪಟ್ಟಿಯ ಪರಿಶೀಲನೆ (ವೆರಿಫಿಕೇಶನ್) ಕಡ್ಡಾಯ. ಆದರೆ ಅಂಕಪಟ್ಟಿ ಪರಿಶೀಲನೆಗೆ ಮಂಗಳೂರು ವಿ.ವಿ.ಯ ವಿದ್ಯಾರ್ಥಿಗಳು ದುಬಾರಿ ಶುಲ್ಕ ತೆರಬೇಕಾಗಿದ್ದು, ಇದನ್ನು ಇಳಿಸಲು ಕ್ರಮ ಕೈಗೊಳ್ಳಬೇಕು ಎಂದು ವಿ.ವಿ.ಯ ಉಪಕುಲಪತಿಗಳಿಗೆ ನೂತನ ಶಾಸಕ ಬೈಂದೂರಿನ ಗುರುರಾಜ್ ಗಂಟೆಹೊಳೆ ಟ್ವಿಟ್ ಮೂಲಕ ಮನವಿ ಮಾಡಿದ್ದು ಮನವಿಗೆ ಮಂಗಳೂರು ವಿ.ವಿ. ಸ್ಪಂದಿಸಿದೆ. ಪದವೀಧರ ತನ್ನ ೬ ಸೆಮಿಸ್ಟರ್‌ಗಳ ಅಂಕಪಟ್ಟಿಗಳನ್ನು

ಪಂಜರು ಕೃಷಿಯಲ್ಲಿ ಸಾಧನೆಗೈದ ಉಪ್ಪುಂದ ಕರ್ಕಿಕಳಿ ಯುವ ಸಮುದಾಯ

ಮುಕ್ತ ಸಮಾಜದಲ್ಲಿ ದುಡಿದು ತಿನ್ನುವ ಹಂಬಲವಿದ್ದರೆ, ಕಾಯಕಕ್ಕೇನು ಕೊರತೆ ಇಲ್ಲಾ ಎನ್ನುವುದನ್ನು ನಮ್ಮ ಕರಾವಳಿಯ ಯುವ ಸಮುದಾಯ ಸಾಬೀತು ಪಡಿಸಿದೆ. ಕರಾವಳಿ ಭಾಗದಲ್ಲಿ ಮೀನುಗಾರಿಕೆಗೆ ಪ್ರಮುಖ ಕಸುಬು ಎಂದರೆ ತಪ್ಪಾಗಲಾರದೇನು, ಅದರಿಂದಲೇ ಎಸ್ಟೋ ಜನ ಯಶಸ್ಸು ಕಂಡವರಿದ್ದಾರೆ. ಅಂತೆಯೇ ಇದೀಗ ಹೊಸ ಪ್ರಯೋಗವೆಂಬಂತೆ ಪಂಜರು ಕೃಷಿಯನ್ನು ಆರಂಭಿಸಿ, ಅದರಿಂದ ಯಶಸ್ಸು ಗಳಿಸಿದ ಯುವ ಸಮೂಹ ಸಮಾಜಕ್ಕೇ ಹೊಸ ಉದ್ಯಮದ ಭರವಸೆ ನೀಡಿದೆ. ಬೈಂದೂರು ತಾಲೂಕಿನ ಉಪ್ಪುಂದ ಉಪ್ಪುಂದ

ಖಂಬದಕೋಣೆ ರೈತ ಸೇವಾ ಸಹಕಾರಿ ಸಂಘದ ಮಹಾಸಭೆ

ಉಪ್ಪುಂದ: ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಉಪ್ಪುಂದ ಇದರ 2021-22ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ಸಭಾಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಎಸ್.ಪ್ರಕಾಶ್‍ಚಂದ್ರ ಶೆಟ್ಟಿ ಮಾತನಾಡಿ ಸಾರ್ವಜನಿಕ ಸೇವೆಯಲ್ಲಿ ಸಂಘವು ವರ್ಷದಲ್ಲಿ ಎಲ್ಲ ವ್ಯವಹಾರಗಳಲ್ಲೂ ಗುರಿ ಮೀರಿದ ಸಾಧನೆಯನ್ನು ಮಾಡಿದೆ. ವರದಿ ವರ್ಷದಲ್ಲಿ ಸಂಘವು ರು.4.69ಕೋಟಿ ಲಾಭಗಳಿಸಿದ್ದು ಸದಸ್ಯರಿಗೆ ಶೇ.15 ಡಿವಿಡೆಂಡ್ ಘೋಷಿಸಿ, ತಾಲೂಕು ವ್ಯಾಪ್ತಿಗೆ

ಉಪ್ಪುಂದ : ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ

ಶ್ರಮ್ ಚಾರಿಟೇಬಲ್ ಟ್ರಸ್ಟ್ ರಿ ಉಪ್ಪುಂದ ಮತ್ತು ಉಡುಪಿ ಜಿಲ್ಲಾ ಭಾರತೀಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಇವರ ವತಿಯಿಂದ ವರಮಹಾಲಕ್ಷ್ಮಿ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಶ್ರೀ ದೇವರಿಗೆ ವಿಶೇಷ ಬಾಳೆದಿಂಡಿನ ಗೋಪುರ ನಿರ್ಮಿಸಿ ವಿವಿಧ ಜಾತಿಯ ಹೂಗಳಿಂದ ಜಾತಿಯ ಅಲಂಕರಿಸಲಾಗಿತ್ತು.ಮಣೆಯ ಮೇಲೆ ಹೊಸ ಬಟ್ಟೆಯನ್ನು ಹಾಕಿ ಅದರ ಮೇಲೆ ಅಕ್ಕಿ ಹರಡಿ ಕಳಶ ಇಟ್ಟು ಅದಕ್ಕೆ ಕುಂಕುಮ, ಅರಿಸಿಣ ಹಚ್ಚಲಾಗಿತ್ತು, ಕಳಸದ ಮೇಲೆ ತೆಂಗಿನಕಾಯಿ ಇಟ್ಟು