ಉಪ್ಪುಂದ: ಚಂದ್ರಯಾನ-3 ಯಶಸ್ವಿ: ವಿದ್ಯಾರ್ಥಿಗಳಿಂದ ಗಮನಸೆಳೆದ ISRO ರಚನಾ ವಿನ್ಯಾಸ
ಭಾರತದ ಚಂದ್ರಯಾನ-೩ ಯಶಸ್ವಿಯಾದ ಹಿನ್ನೆಲೆಯಲ್ಲಿ ಅದಕ್ಕೆ ಕಾರಣೀಕರ್ತರಾದ ನಮ್ಮ ಹೆಮ್ಮೆಯ ಇಸ್ರೋ ಸಂಸ್ಥೆಗೆ ಗೌರವ ಸೂಚಕವಾಗಿ ಉಪ್ಪುಂದ ಸರಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗದ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಂದ ISRO ಎಂಬ ರಚನಾ ವಿನ್ಯಾಸವನ್ನು ರಚಿಸಿ ಅಭಿನಂದನೆ ಸಲ್ಲಿಸಲಾಯಿತು.
ಕಳೆದ ಬಾರಿ ಇದೇ ಸಂಸ್ಥೆಯ ವಿದ್ಯಾರ್ಥಿಗಳು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ೭೫ ಎಂಬ ರಚನಾ ವಿನ್ಯಾಸವನ್ನು ರಚಿಸಿ ರಾಜ್ಯಾದ್ಯಂತ ಗಮನಸೆಳೆದಿದ್ದರು.