ಉಪ್ಪುಂದ : ಮೀನುಗಾರಿಕೆಗೆ ತೆರಳಿದ್ದ ವೇಳೆ ದೋಣಿ ಪಲ್ಟಿ : 9 ಮಂದಿ ಮೀನುಗಾರರ ರಕ್ಷಣೆ
ಮೀನುಗಾರಿಕೆಗಾಗಿ ತೆರಳಿದ್ದ ವೇಳೆ ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿಯೊಂದು ಪಲ್ಟಿಯಾದ ಘಟನೆ ನಡೆದಿದ್ದು, ಅದೃಷ್ಟವಶಾತ್ ದೋಣಿಯಲ್ಲಿದ್ದ ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ.ಉಪ್ಪುಂದ ತಾರಾಪತಿ ಪುಂಡಲೀಕ ಅವರ ಒಡೆತನ ಶ್ರೀ ದುರ್ಗಾಪರಮೇಶ್ವರಿ ಹೆಸರಿನ ದೋಣಿಯಲ್ಲಿ 9 ಮಂದಿ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದು, ಈ ವೇಳೆ ಅಂದಾಜು 5 ನಾಟಿಕಲ್ ಮೈಲುಗಳ ದೂರದಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿ ಮಗುಚಿ ಬಿದ್ದಿದೆ. ಈ ವೇಳೆ ಬಲೆಗಳ ನಡುವೆ ಸಿಲುಕಿದ್ದ ಓರ್ವ ಮೀನುಗಾನನ್ನು ಸಹಮೀನುಗಾರ ಚಂದ್ರ ಎಂಬವರು ರಕ್ಷಿಸಿದ್ದಾರೆ
ಘಟನೆ ನಡೆದ ಬಳಿಕ ಸಮೀಪದ ದೋಣಿಗಳಿಗೆ ಮಾಹಿತಿ ತಲುಪಿಸಿದ್ದು, ಮೀನುಗಾರರು ನೆರವಿಗೆ ಬಂದಿದ್ದಾರೆ. ಅಪಘಾತಕ್ಕೀಡಾದ ದೋಣಿಯಲ್ಲಿದ್ದ ನೀರನ್ನು ಖಾಲಿ ಮಾಡಿ ಮೀನುಗಾರರು ಹಾಗೂ ದೋಣಿಯನ್ನು ಮರವಂತೆ ಬಂದರಿಗೆ ಕೊಂಡೊಯ್ಯಲಾಯಿತು. ಅಪಘಾತದಲ್ಲಿ ದೋಣಿಯಲ್ಲಿ ಬಲೆ, ಇಂಜಿನ್ಗೆ ಹಾನಿಯಾಗಿದ್ದು ಲಕ್ಷಕ್ಕೂ ಅಧಿಕ 2 ನಷ್ಟವಾಗಿರಬಹುದೆಂದು ಅಂದಾಜಿಸಲಾಗಿದೆ.