Home Posts tagged #UT Kadhar

ಉಳ್ಳಾಲ ಕ್ಷೇತ್ರದ ಮಳೆ ಹಾನಿ ಪ್ರದೇಶಗಳಿಗೆ ಸ್ಪೀಕರ್ ಖಾದರ್ ಭೇಟಿ, ಪರಿಶೀಲನೆ

ಕರ್ನಾಟಕ ವಿಧಾನಸಭೆ ಅಧಿವೇಶನದ ವಾರಾಂತ್ಯದ ಬಿಡುವಿನ ದಿನ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದ ಯು.ಟಿ. ಖಾದರ್ ಅವರು ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಕರ್ನಾಟಕ ಹದಿನಾರನೇಯ ವಿಧಾನಸಭೆಯ ಅಧಿವೇಶನವು ಜುಲೈ ಮೂರರಂದು ಪ್ರಾರಂಭವಾಗಿದ್ದು, ಯು.ಟಿ ಖಾದರ್ ಸಭಾಧ್ಯಕ್ಷರಾದ ಬಳಿಕ ಪೂರ್ಣ ಪ್ರಮಾಣದ ಮೊದಲ ಅಧಿವೇಶನ ನಡೆಯುತ್ತಾ ಇದೆ. ಮೊದಲ ವಾರದ ಅಧಿವೇಶನದಲ್ಲಿ

ರಸ್ತೆ ಗುಂಡಿ, ಚರಂಡಿ ಅಭಿವೃದ್ಧಿ ಮಾಡುವ ಯೋಗ್ಯತೆ ಇಲ್ಲ : ನಳಿನ್ ವಿರುದ್ಧ ಮಾಜಿ ಸಚಿವ ಯು.ಟಿ.ಖಾದರ್ ವಾಗ್ದಾಳಿ

ರಸ್ತೆ ಗುಂಡಿ, ಚರಂಡಿ ಅಭಿವೃದ್ಧಿ ಮಾಡುವ ಯೋಗ್ಯತೆ, ಅರ್ಹತೆ ಇಲ್ಲದವರು, ಭಾವನಾತ್ಮಕ ವಿಚಾರದ ಮೂಲಕವೇ ರಾಜಕಾರಣ ಮಾಡುತ್ತಿದ್ದಾರೆ ಎಂದು ನಳಿನ್ ವಿರುದ್ಧ ಮಾಜಿ ಸಚಿವ ಹಾಗೂ ಶಾಸಕ ಯು.ಟಿ.ಖಾದರ್ ವಾಗ್ದಾಳಿ ನಡೆಸಿದ್ದಾರೆ. ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಸ್ತೆ ಗುಂಡಿ, ಚರಂಡಿ ಅಭಿವೃದ್ಧಿ ಮಾಡುವ ಯೋಗ್ಯತೆ ಎಂಬುವುದನ್ನ ಕಳೆದ ನಾಲ್ಕು ವರ್ಷ ಜನರಿಗೆ ತೋರಿಸಿಕೊಟ್ಟಿದ್ದಾರೆ. ಚುನಾವಣೆ ಹತ್ತಿರ ಬಂದಾಗ ಇಂತಹ

ಶಬರಿಮಲೆ ಯಾತ್ರೆ : ಕರ್ನಾಟಕ-ಕೇರಳದ ವಾಹನಗಳಿಗೆ ತೆರಿಗೆಯಲ್ಲಿ ರಿಯಾಯಿತಿ ಕಲ್ಪಿಸಲು ಖಾದರ್ ಮನವಿ

ಕರ್ನಾಟಕದಿಂದ ಶಬರಿಮಲೆಗೆ ಹೋಗುವ ಮತ್ತು ಮರಳಿ ಬರುವ ಅಯ್ಯಪ್ಪ ಮಾಲಾಧಾರಿಗಳಿರುವ ಕರ್ನಾಟಕ-ಕೇರಳದ ವಾಹನಗಳಿಗೆ ತೆರಿಗೆಯಲ್ಲಿ ರಿಯಾಯಿತಿ ಕಲ್ಪಿಸಬೇಕು ಎಂದು ರಾಜ್ಯ ವಿಧಾನಸಭೆಯ ಪ್ರತಿಪಕ್ಷ ಉಪನಾಯಕ ಯು.ಟಿ. ಖಾದರ್ ಮನವಿ ಮಾಡಿದ್ದಾರೆ. ಕರ್ನಾಟಕದಿಂದ ಶಬರಿಮಲೆ ಯಾತ್ರೆಗೆ ತೆರಳುವ ಅಯ್ಯಪ್ಪಮಾಲಾಧಾರಿಗಳ ವಾಹನಗಳಿಗೆ ಕರ್ನಾಟಕ ಮತ್ತು ಕೇರಳದ ಎರಡೂ ರಾಜ್ಯಗಳ ತೆರಿಗೆ ಪಾವತಿಸಲು ಕಷ್ಟವಾಗುತ್ತಿರುವುದರಿಂದ ತೆರಿಗೆಯಲ್ಲಿ ವಿಶೇಷ ರಿಯಾಯಿತಿ ಕಲ್ಪಿಸಲು ಅಧಿಕಾರಿಗಳು

ಹತ್ತು ದಿವಸಗಳ ಒಳಗಾಗಿ ಮಂಗಳೂರು ವಿವಿ ಫಲಿತಾಂಶ ಬಿಡುಗಡೆ : ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಪ್ರಶ್ನೆಗೆ ಸದನದಲ್ಲಿ ಭರವಸೆ

ಮಂಗಳೂರು ವಿಶ್ವವಿದ್ಯಾನಿಲಯದ ಫಲಿತಾಂಶ ವಿಳಂಬದ ಬಗ್ಗೆ ಸದನದಲ್ಲಿ ಸರಕಾರವನ್ನು ಪ್ರಶ್ನಿಸಿದ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಫಲಿತಾಂಶ ವಿಳಂಬದಿಂದಾಗಿ ವಿದ್ಯಾರ್ಥಿಗಳಿಗೆ ತನ್ನ ಹಿಂದಿನ ವರ್ಷದ ಫಲಿತಾಂಶ ತಿಳಿಯದೆ ಮುಂದಿನ ವರ್ಷಕ್ಕಾಗಿ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಲು ಗೊಂದಲ,ಅದೇ ರೀತಿ ಹಾಸ್ಟೆಲ್ ಗಳಲ್ಲಿ ಗೊಂದಲ ಮುಂತಾದ ವಿಚಾರಗಳ ಬಗ್ಗೆ ಸದನದಲ್ಲಿ ವಿವರಿಸಿ ಆದಷ್ಟು ಬೇಗನೇ ಫಲಿತಾಂಶ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಒತ್ತಾಯಿಸಿದರು.”ಎ”

ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಆಡಳಿತ ನಿಷ್ಕ್ರಿಯವಾಗಿದೆ: ಯು.ಟಿ. ಖಾದರ್ ಆರೋಪ

ರಾಜ್ಯದಲ್ಲಿ ಸರಕಾರ ಇದೆಯೋ ಇಲ್ಲವೋ ಎಂದು ಜನ ಕೇಳುತ್ತಿದ್ದಾರೆ. ರಾಜ್ಯದಲ್ಲಿ ಆಡಳಿತ ಅಷ್ಟು ನಿಷ್ಕ್ರೀಯವಾಗಿದೆ ಎಂದು ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಮತ್ತು ಮಾಜಿ ಸಚಿವ ಯು.ಟಿ. ಖಾದರ್ ಸುದ್ದಿಗೋಷ್ಠಿಯಲ್ಲಿಂದು ಟೀಕಿಸಿದ್ದಾರೆ. ರಾಜ್ಯದಲ್ಲಿ ಆಡಳಿತ ನಡೆಸಿದ ಯಡಿಯೂರಪ್ಪ ನೇತೃತ್ವದ ಸರಕಾರ ಎಲ್ಲಾ ಕ್ಷೇತ್ರದಲ್ಲೂ ವಿಫಲವಾಗಿದೆ. ಅವರ ಪಕ್ಷದವರೆ ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಬಹಿರಂಗ ಹೇಳಿಕೆ ನೀಡಿದ್ದಾರೆ. ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಈ

ಸರ್ಕಾರದ ವೈಫಲ್ಯವನ್ನು ಮರೆಮಾಚಲು ಜನಸಂಖ್ಯೆ ಟಾರ್ಗೆಟ್: ಯು.ಟಿ.ಖಾದರ್ 

ಜನಸಂಖ್ಯೆಯನ್ನು ದೇಶದ ಸಂಪನ್ಮೂಲ ಶಕ್ತಿಯಾಗಿ ಬಳಕೆ ಮಾಡಬೇಕಾದದ್ದು ಸರ್ಕಾರದ ಕೆಲಸ. ಆದರೆ ಸರ್ಕಾರವು ತನ್ನ ಆಡಳಿತ ವೈಫಲ್ಯವನ್ನು ಮರೆಮಾಚಲು ಜನಸಂಖ್ಯೆಯನ್ನು ಟಾರ್ಗೆಟ್ ಮಾಡಿರೋದು ದುರಂತ ಅಂತಾ ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು. ಈ ಕುರಿತು ಮಂಗಳೂರಲ್ಲಿ ಮಾತನಾಡಿದ ಅವರು, ಒಂದು ಸರ್ಕಾರವು ಆಡಳಿತ ಮಾಡೋ ಮೊದಲು ದೇಶದ ಜನಸಂಖ್ಯೆಯನ್ನು ಹೇಗೆ ಮಾನವ ಸಂಪನ್ಮೂಲ ಶಕ್ತಿಯಾಗಿ ಬಳಕೆ ಮಾಡಬೇಕೆಂಬುದನ್ನು ಅರಿಯಬೇಕು ಅಂದರು. ಮಂಗಳೂರಲ್ಲಿ ಅವತ್ತು ರಾಜ್ಯಮಟ್ಟದ

ಯಾರಿಗೂ ಹೇಳ್ಬೇಡಿ ಆಡಿಯೋ ನಕಲಿ ಅಥವಾ ಅಸಲಿಯೇ ಸಿಎಂ ಸ್ಪಷ್ಟ ಪಡಿಸಲಿ: ಯು.ಟಿ.ಖಾದರ್

 ಬಿಜೆಪಿ ರಾಜ್ಯಾಧ್ಯಕ್ಷರ ಆಡಿಯೋ ನಕಲಿ ಅಥವಾ ಅಸಲಿಯೇ ಎಂದು ಮುಖ್ಯ ಮಂತ್ರಿ ಸ್ಪಷ್ಟ ಪಡಿಸಬೇಕಾಗಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ರು. ಹಾಲಿ ಸಿ.ಎಂ ಯಡಿಯೂರಪ್ಪ ಇನ್ನೂ ಮುಂದುವರಿಯುತ್ತಾರೋ ಇಲ್ಲವೋ ಎನ್ನುವುದನ್ನು ಬಿಜೆಪಿ ರಾಜ್ಯಾಧ್ಯಕ್ಷರು ಸ್ಪಷ್ಟವಾಗಿ ತಿಳಿಸಲಿ ಯು.ಟಿ.ಖಾದರ್ ಅವರು ಹೇಳಿದರು. ಇನ್ನು ಕಾಂಗ್ರೆಸ್‌ನಲ್ಲಿ ಯಾವುದೇ ಬಣವಿಲ್ಲ, ಎಲ್ಲಾರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ಬರುವ ಕೆಲಸ

ಬೆಲೆ ಏರಿಕೆಯ ಬಗ್ಗೆ ನೈಜ ಕಾರಣ ಜನತೆಗೆ ತಿಳಿಸಲಿ: ಮಾಜಿ ಸಚಿವ ಯು.ಟಿ. ಖಾದರ್ 

ಪೆಟ್ರೋಲ್ ,ಡೀಸೆಲ್ ಬೆಲೆ ಏರಿಕೆಯ ಬಗ್ಗೆ ನೈಜ ಕಾರಣವನ್ನು ಜನತೆಗೆ ತಿಳಿಸಲು ಬಿಜೆಪಿ ನೇತ್ರತ್ವದ ಕೇಂದ್ರ ಸರಕಾರ ಶ್ವೇತ ಪತ್ರ ಹೊರಡಿಸಲಿ.ಬೆಲೆ ನಿಯಂತ್ರಣಕ್ಕೆ ತಕ್ಷಣ ಸರ್ಕಾರ ಸೂಕ್ತ ಕ್ರಮಕ್ಕೆ ಮುಂದಾಗಲಿ ಎಂದು ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಮತ್ತು ಮಾಜಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.ಅವರು ಮಂಗಳೂರಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಇಂಧನದ ಬೆಲೆ ಏರಿಕೆಯ ಹಿಂದಿನ ಯುಪಿಎ ಸರಕಾರ ಪೆಟ್ರೋಲ್ ಕಂಪೆನಿಗಳಿಗೆ