ಉಳ್ಳಾಲ: ಕಿಂಗ್ಸ್ ಕಲ್ಲಾಪು ವತಿಯಿಂದ ಭಂದುತ್ವ ಸೌಹಾರ್ದ ಇಫ್ತಾರ್ ಕೂಟ

ಉಳ್ಳಾಲ: ಪ್ರೀತಿ ಹರಡಲಿ ಎಲ್ಲೆಡೆ ಎಂಬ ಘೋಷವಾಕ್ಯದೊಂದಿಗೆ ಕಿಂಗ್ಸ್ ಕಲ್ಲಾಪು ಅಯೋಜಿಸಿದ ಬಂಧುತ್ವ ಸೌಹಾರ್ದ ಇಫ್ತಾರ್ ಕೂಟ ತೊಕ್ಕೋಟ್ಟು ಯುನಿಟಿ‌ ಹಾಲ್‌ ಮೈದಾನದಲ್ಲಿ ನಡೆಯಿತು.

ಸಭಾಧ್ಯಕ್ಷ ಯು.ಟಿ ಖಾದರ್ ಫರೀದ್ ಮುಖ್ಯ ಅತಿಥಿಯಾಗಿ ‌ಭಾಗವಹಿಸಿ‌ ಮಾತನಾಡಿ, ಪವಿತ್ರವಾದ ತಿಂಗಳ ಪವಿತ್ರವಾದ ದಿನದಲ್ಲಿ ಶ್ರದ್ಧಾಪೂರ್ವಕ ಉಪವಾಸ ವೃತ ‌ಮಾಡಿಕೊಂಡು ಇಫ್ತಾರ್ ಸಂದರ್ಭದಲ್ಲಿ ಎಲ್ಲಾ ಜಾತಿ ಎಲ್ಲಾ ಧರ್ಮದ ಸಮಾಜಿಕ ಧಾರ್ಮಿಕ ಮುಖಂಡರನ್ನು ಸೇರಿಸಿಕೊಂಡು ಭಂದುತ್ವ ಕಾರ್ಯಕ್ರಮ ಆಯೋಜಿಸುವ ಮೂಲಕ ಸಮಾಜಕ್ಕೆ ದೊಡ್ಡ ಮಟ್ಟದ ಸಂದೇಶವನ್ನು ಕಿಂಗ್ಸ್ ಕಲ್ಲಾಪು ನೀಡಿದೆ ಎಂದು ಹೇಳಿದರು.

ತುಳುನಾಡ ದೈವರಾಧನೆಯ ವಿಮರ್ಶಕ ತಮ್ಮಣ್ಣ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ‌ಮಾತನಾಡಿ ತುಳುನಾಡಿನಲ್ಲಿ ಸಾಮರಸ್ಯಕ್ಕೆ ಯಾವತ್ತು ದಕ್ಕೆಯಾಗಿಲ್ಲ. ಬ್ಯಾರಿ ಎಂಬ ಹೆಸರು ಅನೇಕರಿಗೆ ಏಕವಚನ ವಾಗಿ ಕಾಣಬಹುದು ಅದರೆ ತುಳುನಾಡಿನ ಲೆಕ್ಕಾಚಾರ ನೋಡಿದಾಗ ದ್ರಾವಿಡ ಮೂಲ ಪರಂಪರೆಯ ಬಂಟ ಬಿಲ್ಲವ ಕಲಾಲ್ ಬೇರೆ ಬೇರೆ ಹೆಸರು ಇದ್ದಾಗೆ ಬ್ಯಾರಿ ಎಂಬ ಹೆಸರು ತುಳುನಾಡಿದ ದ್ರಾವಿಡ ಪರಂಪರೆಯ ಭಾಗವಾಗಿದೆ ಬ್ಯಾರಿ ಎಂಬ ಪದ ಅತ್ಯಂತ ಅರ್ಥಪೂರ್ಣ ಆಗಾಗಿ ದೈವ ಆರಾಧನೆಯಲ್ಲಿ ಅನೇಕ ಸ್ಥಳಗಳಲ್ಲಿ ದೈವದ ಉತ್ಸವಗಳ ಕಟ್ಟುಪಾಡಿನಲ್ಲಿ ಬ್ಯಾರಿ ಜನಾಂಗ ಸಮಾನವಾದ ಗೌರವವನ್ನು ಪಡೆದುಕೊಂಡಿದೆ ಎಂದು ಹೇಳಿದರು.

ಮಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮಾತ ಡಿ.ಎಸ್ ಗಟ್ಟಿ, ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಯು.ಎಚ್ ಉಮ್ಮರ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಸುರೇಶ್ ಭಟ್ನಗರ, ಗ್ಯಾರಂಟಿ ಅನುಷ್ಠಾನ ದ.ಕ ಜಿಲ್ಲಾ ಸಮಿತಿ ಸದಸ್ಯೆ ಸುರೇಖಾ ಚಂದ್ರಹಾಸ್, ಚಂದ್ರಿಕ ರೈ, ಕಣಚೂರು ಇಸ್ಲಾಮಿಕ್ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷ ಡಾ. ಹಾಜಿ ಯು.ಕೆ ಮೋನು, ಉಳ್ಳಾಲ ಸಯ್ಯದ್ ಮದನಿ ದರ್ಗಾ ಸಮಿತಿ ಮಾಜಿ ಅಧ್ಯಕ್ಷ ರಶೀದ್ ಹಾಜಿ, ಹಜ್ ಸಲಹಾ ಸಮಿತಿ ಅಧ್ಯಕ್ಷ ನಾಸೀರ್ ಲಕ್ಕಿಸ್ಟಾರ್, ಸಿ.ಎ ಇಸ್ಹಾಕ್ ಪುತ್ತೂರು, ಹಫೀಝ್ ಸ್ವಲಾಹಿ, ನರಿಂಗಾನ ಗ್ರಾ.ಪಂ ಅಧ್ಯಕ್ಷ ನವಾಝ್ ನರಿಂಗಾನ, ಉಳ್ಳಾಲ ನಗರ ಸಭೆಯ ಸದಸ್ಯರಾದ. ಅಸೀಫ್ ಕಲ್ಲಾಪು, ಮುಸ್ತಾಕ್ , ಮಂಗಳೂರು ತಾ.ಪಂ ಮಾಜಿ ಅಧ್ಯಕ್ಷ ಮೊಹಮ್ಮದ್ ಮೋನು, ಕಲ್ಲಾಪು ಮಸೀದಿ ಖತೀಬ್ ಶರೀಫ್ ಸ ಅದಿ, ಡೆನಿಸ್ ಡಿಸೋಜಾ ಹಾಗೂ ಕಿಂಗ್ಸ್ ಕಲ್ಲಾಪುನ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.