Home Posts tagged #Yakshagana

ಬೈಂದೂರಿನ ನಾಗೂರಿನಲ್ಲಿ ತಾಳಮದ್ದಳೆ ಸಪ್ತಾಹ : ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಂದ ಉದ್ಘಾಟನೆ

ಬೈಂದೂರು: ನಾಗೂರಿನ ಗೋಪಾಲಕೃಷ್ಣ ಕಲಾಮಂದಿರದ ಕೋಟ ವೈಕುಂಠ ನಾಯಕ್ ಸ್ಮರಣ ವೇದಿಕೆಯಲ್ಲಿ ಧಾರೇಶ್ವರ ಯಕ್ಷಬಳಗ ಚಾರಿಟೆಬಲ್ ಟ್ರಸ್ಟ್ ಕಿರಿಮಂಜೇಶ್ವರ ವತಿಯಿಂದ ಸೆ.18ರಿಂದ ಸೆ.24ರವರೆಗೆ ಯಕ್ಷಗಾನ ತಾಳಮದ್ದಳೆ ಸಪ್ತಾಹ ಕಾರ್ಯಕ್ರಮವನ್ನು ಯಕ್ಷ ಪ್ರೇಮಿ ಮಾನ್ಯ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಉದ್ಘಾಟನೆ ಮಾಡಿದರು. ಈ ವೇಳೆ ಕರಾವಳಿ ಭಾಗದ ಯಕ್ಷಗಾನ ತಾಳಮದ್ದಳೆ

ಕಲಾವಿದನ ಬದುಕಿಗೆ ಜೀವ ತುಂಬುವವರು ಕಲಾಭಿಮಾನಿಗಳು : ಕಟೀಲ್‍ನ ಹರಿನಾರಾಯಣ ಅಸ್ರಣ್ಣರು ಅಭಿಪ್ರಾಯ

ಕಾರ್ಕಳ: ಯಕ್ಷಗಾನವೆಂಬುದು ಕರಾವಳಿಯ ಮಣ್ಣಿನ ಕಲೆಯಾಗಿದೆ ಈ ಕಲೆಯು ಸ್ವರ್ಗವನ್ನ ಭೂಮಿಯಲ್ಲಿ ಭಾಸವಾಗುವಂತೆ ಸ್ಪರ್ಶವಿಲ್ಲದೆ ನಿಭಾಯಿಸುವಂತೆ ಮಾಡುತ್ತದೆ ಕಲಾವಿದನ ಬದುಕಿಗೆ ಕಲಾ ಸಂಘಟಕರು ಕಲಾ ಕಲಾಭಿಮಾನಿಗಳು ಜೀವ ತುಂಬುವವರು ಆಗಿರುತ್ತಾರೆ. ಎಂದು ಕಟೀಲ್‍ನ ಹರಿನಾರಾಯಣ ಅಸ್ರಣ್ಣರು ಹೇಳಿದರು. ಅವರು ನಾರಾವಿಯ ಧರ್ಮ ಶ್ರೀ ಸಭಾಭವನದ ಬಲಿಪ ಪ್ರಸಾದ ಭಟ್ ವೇದಿಕೆಯಲ್ಲಿ ಜರುಗಿದ ಯಕ್ಷ ತೀರ್ಥ ಸಂಭ್ರಮ 2022ರ ಕಾರ್ಯಕ್ರಮವನ್ನು ಉದ್ಘಾಟಿಸಿ, ಉದ್ದೇಶಿಸಿ

ದ್ವೀಪದಲ್ಲಿ ಮತ್ತೆ ವಿಜೃಂಭಿಸಲಿರುವ ಕರಾವಳಿಯ ಗಂಡು ಕಲೆ

ಬಹರೈನ್: ಯಕ್ಷಗಾನಕ್ಕೂ ಹಾಗು ಬಹರೇನ್ ದ್ವೀಪ ರಾಷ್ಟ್ರಕ್ಕೂ ಸುಮಾರು ನಾಲ್ಕು ದಶಕಗಳ ಅವಿನಾಭಾವ ಸಂಭಂದವಿದೆ. ಪ್ರಪ್ರಥಮವಾಗಿ ಯಕ್ಷಗಾನವನ್ನು ಸೀಮೋಲಂಘನ ಮಾಡಿಸಿದ ಕೀರ್ತಿಯ ಜೊತೆಗೆ ಸಂಪೂರ್ಣ ಹಿಮ್ಮೇಳ ಮುಮ್ಮೇಳವನ್ನು ಹಿಒಂದಿರುವ ಕೀರ್ತಿ ಕೂಡ ಬಹರೈನ್ ದ್ವೀಪ ರಾಷ್ಟ್ರಕ್ಕೆ ಸಲ್ಲುತ್ತದೆ. ಹಾಗಾಗಿ ದ್ವೀಪ ರಾಷ್ಟ್ರದಲ್ಲಿ ಆಗಾಗ್ಗೆ ಅಲ್ಲಲ್ಲಿ ಲಯಬದ್ಧವಾದ ಚೆಂಡೆಯ ಸದ್ದು ಕೇಳಿಸುತ್ತಲೇ ಇರುತ್ತದೆ. ದ್ವೀಪ ರಾಷ್ಟ್ರ ಬಹರೈನ್‍ನಲ್ಲಿ ಮತ್ತೆ ಕರಾಳಿಯ ಗಂಡು

ಶ್ರೀಯಕ್ಷದೇವ ಮಿತ್ರಕಲಾ ಮಂಡಳಿಯ 24ರ ಸಂಭಮ

ಮೂಡುಬಿದಿರೆ: ಬೆಳುವಾಯಿಯ ಶ್ರೀಯಕ್ಷದೇವ ಮಿತ್ರ ಕಲಾಮಂಡಳಿಯ 24ನೇ ವರ್ಷದ ಸಂಭಮ ಈ ಬಾರಿ ‘ಯಕ್ಷ ಕಲ್ಯಾಣೋತ್ಸವ’ ಶೀರ್ಷಿಕೆಯಡಿ ಸಮಾಜಮಂದಿರದಲ್ಲಿ ಕಲಾವಿದ ಮಿಜಾರು ದಿ. ಕೆ. ಸುಬ್ರಾಯ ಭಟ್ ಕಲಾವೇದಿಕೆಯಲ್ಲಿ ನ.13ರಂದು ದಿನಪೂರ್ತಿ ನಡೆಯಲಿದೆ ಎಂದು ಸಂಸ್ಥೆಯ ಸ್ಥಾಪಕ, ಕಾರ್ಯಾಧ್ಯಕ್ಷ ಎಂ.ದೇವಾನಂದ ಭಟ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು. ಅವರು ಮೂಡುಬಿದರೆಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಸಭಾ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ

ಕಡಬದ್ವಯ ಸಂಸ್ಮರಣಾ ಯಕ್ಷಗಾನ ಪ್ರಶಸ್ತಿ- 2021 : ಹಿರಿಯ ಹಿಮ್ಮೇಳನ ವಾದಕರಾದ ಮೋಹನ್ ಶೆಟ್ಟಿಗಾರ್ ಅವರಿಗೆ ಪ್ರಶಸ್ತಿ

ಕರಾವಳಿಯ ಹೆಮ್ಮೆಯ ಕಲೆಯಾಗಿರುವ ಯಕ್ಷಗಾನ ಕ್ಷೇತ್ರದ ತೆಂಕುತಿಟ್ಟಿನ ಹೆಸರಾಂತ ಹಿಮ್ಮೇಳ ವಾದಕರಾದ ಕಡಬ ನಾರಾಯಣ ಆಚಾರ್ಯರ ಸ್ಮರಣಾರ್ಥ ಕಡಬದ್ವಯ ಸಂಸ್ಮರಣಾ ಯಕ್ಷಗಾನ ಪ್ರಶಸ್ತಿ- 2021ನ್ನು ಮಂಗಳೂರಿನ ಹಿರಿಯ ಹಿಮ್ಮೇಳನ ವಾದಕರಾದ ಮೋಹನ್ ಶೆಟ್ಟಿಗಾರ್ ಮಿಜಾರು ಇವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಕಡಬ ಸ್ಮಾರಕ ಸಮಿತಿಯ ಬೆಳುವಾಯಿ ಸುಂದರ ಆಚಾರಿ ತಿಳಿಸಿದರು. ಅವರು ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.

ಮೂಡುಬಿದಿರೆ: ರಂಗಸ್ಥಳದಲ್ಲಿ ಕುಸಿದುಬಿದ್ದ ಕಲಾವಿದ

ಮೂಡುಬಿದಿರೆಯ ಅಲಂಗಾರಿನಲ್ಲಿ ಸೋಮವಾರ ರಾತ್ರಿ ನಡೆದ ಯಕ್ಷಗಾನದ ವೇಳೆ ಕಲಾವಿದರೊಬ್ಬರು ಕುಸಿದು ಬಿದ್ದಿದ್ದು, ಕೆಲವು ನಿಮಿಷಗಳ ಬಳಿಕ ಚೇತರಿಸಿಕೊಂಡು ಬಳಿಕ ರಂಗಸ್ಥಳದಲ್ಲಿ ಕಾಣಿಸಿಕೊಂಡಿದ್ದಾರೆ. ಅಲಂಗಾರು ಶ್ರೀಮಹಾಲೀಂಗೇಶ್ವರ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಕರ್ಣಪರ್ವ ಪ್ರಸಂಗದಲ್ಲಿ ಖ್ಯಾತ ಕಲಾವಿದ ಮೋಹನ ಅಮ್ಮುಂಜೆ ಅವರು ಪಾತ್ರಧಾರಿಯಾಗಿದ್ದರು. ಈ ಸಂದರ್ಭ ಅತೀವ ಬಳಲಿಕೆಯಿಂದ ಅವರು ರಂಗಸ್ಥಳದಲ್ಲಿ ಕುಸಿದು ಬಿದ್ದಿದ್ದು, 15 ನಿಮಿಷಗಳ ಕಾಲ ಯಕ್ಷಗಾನವನ್ನು

ಪಟ್ಲ ಫೌಂಡೇಶನ್ ಟ್ರಸ್ಟ್‍ನಿಂದ ಆಹಾರ ಕಿಟ್ ವಿತರಣೆ

 ಮಂಗಳೂರು: ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಯಕ್ಷಗಾನ ಕಲಾವಿದರು, ನಾಟಕ ಕಲಾವಿದರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಅನೇಕ ಸೇವಾ ಸಂಸ್ಥೆಗಳು ಕಲಾವಿದರಿಗೆ ನೆರವನ್ನು ನೀಡಿ ಕಲಾವಿದರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ಖ್ಯಾತ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರ ನೇತೃತ್ವದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಕಲಾವಿದರಿಗೆ ಸಹಾಯ ಹಸ್ತ ನೀಡುತ್ತಿರುವುದು ಶ್ಲಾಘನೀಯ ಕೆಲಸ ಎಂದು ಬಿಜೆಪಿ