ಮೂಡುಬಿದಿರೆ: ಗೋವಿಂದ ಭಟ್ ಅವರಿಗೆ ಬಲಿಪ ಭಾಗವತ ಪ್ರಶಸ್ತಿ ಪ್ರದಾನ

ಮೂಡುಬಿದಿರೆ: ಯಕ್ಷಗಾನ ಲೋಕದ ಮೇರು ಭಾಗವತ ದಿ. ಬಲಿಪ ನಾರಾಯಣ ಭಾಗವತ ಅವರ ಮೊದಲ ವರ್ಷದ ಸಂಸ್ಮರಣೆಯ ಅಂಗವಾಗಿ ಹಿರಿಯ ಕಲಾವಿದ ಗೋವಿಂದ ಭಟ್ ಅವರಿಗೆ ಬಲಿಪ ಭಾಗವತ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಾರೂರಿನ ನೂಯಿಯಲ್ಲಿರುವ ಬಲಿಪರ ನಿವಾಸದ ಆವರಣದಲ್ಲಿ ಜರಗಿದ ಕಟೀಲು ಮೇಳದ ಹರಿಕೆ ಬಯಲಾಟದ ರಂಗಸ್ಥಳದಲ್ಲಿ ಮಾನಪತ್ರ, ನಗದು ಗೌರವದೊಂದಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಗೋವಿಂದ ಭಟ್ ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ಬಲಿಪರು ಎಂದರೆ ಯಕ್ಷಗಾನ ಯಕ್ಷಗಾನ ಎಂದರೆ ಬಲಿಪರು ಎನ್ನುವ ಮಟ್ಟಕ್ಕೆ ಬಲಿಪರು ಬೆಳಗಿದ್ದರು ಎಂದು ಗತವೈಭವನ್ನು ನೆನಪಿಸಿಕೊಂಡರು.
ಕಟೀಲಿನ ಶ್ರೀ ಹರಿನಾರಾಯಣ ದಾಸ ಆಸ್ರಣ್ಣ ಆಶೀರ್ವಚನ ನೀಡಿದರು. ಮಾರೂರು ಖಂಡಿಗ ರಾಮದಾಸ ಆಸ್ರಣ್ಣ, ಮೇಳದ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಮೂಡುಬಿದಿರೆಯ ಉದ್ಯಮಿ ಕೆ. ಶ್ರೀಪತಿ ಭಟ್ , ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್, ಕೆ. ರಾಮ ಭಟ್ ಮತ್ತಿತರರು ಉಪಸ್ಥಿತರಿದ್ದರು. ಕೆ.ವತ್ಸ ಭಟ್, ಕರ್ಪೆ ನೀಲಕಂಠ ಭಟ್ ಕಾರ್ಯಕ್ರಮ ನಿರೂಪಿಸಿದರು.
