HomeFresh Newsಸಿಬಿಎಸ್ಇ ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆಯಲ್ಲಿ  ಗೊನ್ಝಾಗ ಶೇ.100 ಸಾಧನೆ

ಸಿಬಿಎಸ್ಇ ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆಯಲ್ಲಿ  ಗೊನ್ಝಾಗ ಶೇ.100 ಸಾಧನೆ

ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯು 2025-26ನೇ ಸಾಲಿನ ಸಿಬಿಎಸ್ಇ ದ್ವಿತೀಯ ಪಿಯುಸಿ (Class XII) ಬೋರ್ಡ್ ಪರೀಕ್ಷೆಯಲ್ಲಿ ಶೇ.100 ಫಲಿತಾಂಶವನ್ನು ಸಾಧಿಸಿದೆ. ಪರೀಕ್ಷೆಗೆ ಹಾಜರಾದ 28 ವಿದ್ಯಾರ್ಥಿಗಳಲ್ಲಿ 5 ವಿದ್ಯಾರ್ಥಿಗಳು ಶೇ.85 ಮತ್ತು ಅದಕ್ಕೂ ಹೆಚ್ಚಿನ ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ಪಡೆದಿದ್ದಾರೆ. 23 ವಿದ್ಯಾರ್ಥಿಗಳು ಶೇ.65 ರಿಂದ 85ರೊಳಗಿನ ಅಂಕಗಳನ್ನು ಪಡೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಇಶಾನ್ ಪೈ ಅವರು ಶೇ.95.60 ಅಂಕಗಳನ್ನು,  ದ್ವಿತೀಯ ಸ್ಥಾನವನ್ನು ಪಡೆದ ನೀಲ್ ತಿಮಯ್ಯ ನಂದ ಕಂಡ್ರತಾಂಡ ಅವರು ಶೇ.87 ಅಂಕಗಳನ್ನು, ತೃತೀಯ ಸ್ಥಾನವನ್ನು ಪಡೆದ ಶೈನಾಡ್ ರೆಬೆಕ್ಕಾ ಫರ್ನಾಂಡಿಸ್ ಅವರು ಶೇ.86.80 ಅಂಕಗಳನ್ನು ಪಡೆದಿದ್ದಾರೆ. ನಾಲ್ಕನೇ ಸ್ಥಾನವನ್ನು ಅಲ್ಮಿರಾ ಶಾರಿ ಫೆರ್ನಾಂಡಿಸ್ ಅವರು ಶೇ.86.60 ಅಂಕಗಳೊಂದಿಗೆ ಹಾಗೂ ಐದನೇ ಸ್ಥಾನವನ್ನು ಜಿಯಾನ್ನಾ ಕ್ಲೇರ್ ಸಲ್ದಾನ್ಹಾ ಅವರು ಶೇ.85.60 ಅಂಕಗಳೊಂದಿಗೆ ಪಡೆದಿದ್ದಾರೆ.

ಇಶಾನ್ ಪೈ ಅವರು ಕಂಪ್ಯೂಟರ್ ಸೈನ್ಸ್‌ನಲ್ಲಿ ಶೇ.100, ಗಣಿತದಲ್ಲಿ ಶೇ.96, ರಸಾಯನಶಾಸ್ತ್ರದಲ್ಲಿ ಶೇ.95 ಹಾಗೂ ಭೌತಶಾಸ್ತ್ರದಲ್ಲಿ ಶೇ.90 ಅಂಕಗಳನ್ನು ಗಳಿಸಿದ್ದಾರೆ.

ಶೈನಾಡ್ ರೆಬೆಕ್ಕಾ ಫೆರ್ನಾಂಡಿಸ್ ಅವರು ಇಂಗ್ಲಿಷ್‌ನಲ್ಲಿ ಶೇ.99, ಜೀವಶಾಸ್ತ್ರದಲ್ಲಿ ಶೇ.98 ಹಾಗೂ ರಸಾಯನಶಾಸ್ತ್ರದಲ್ಲಿ ಶೇ.95 ಅಂಕಗಳನ್ನು ಪಡೆದಿದ್ದಾರೆ.ಚಿನ್ಮಯ್ ಸಚ್ಚಿದಾನಂದ ಅವರು ರಸಾಯನಶಾಸ್ತ್ರದಲ್ಲಿ ಶೇ.95 ಅಂಕಗಳನ್ನು ಪಡೆದಿದ್ದಾರೆ.ಶಾಲೆಯ ಪ್ರಾಂಶುಪಾಲರಾದ ರೋಹನ್ ಡಿ’ಅಲ್ಲ್ಮೇಡ ಅವರು ಹಾಗೂ ಶಿಕ್ಷಕ ವೃಂದವು ವಿದ್ಯಾರ್ಥಿಗಳ ಈ ಅತ್ಯುತ್ತಮ ಸಾಧನೆಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments