ತುಳು ಲಿಪಿ ನಾಮಫಲಕ ಅನಾವರಣ ಕಾರ್ಯಕ್ರಮ

ಕಾಸರಗೋಡು ಜಿಲ್ಲೆಯ ಶ್ರೀ ಮದ್ ಜಗದ್ಗುರು ಶಂಕರಾಚಾರ್ಯ ಸಂಸ್ಥಾನಂ ಎಡನೀರು ಮಠದಲ್ಲಿ ತುಲು ಲಿಪಿ ನಾಮಫಲಕ ಅನಾವರಣ ಕಾರ್ಯಕ್ರಮ ನಡೆಯಿತು.

ಶ್ರೀ ಶಂಕರಾಚಾರ್ಯ ಸಂಸ್ಥಾನಂ ಎಡನೀರು ಮಠ ಕಾಸರಗೋಡು. ಇಲ್ಲಿನ ಶ್ರೀ ವಿಷ್ಣುಮಂಗಲ ದೇವಾಲಯದ ವಾರ್ಷಿಕೋತ್ಸವದ ಸಂಧರ್ಭದಲ್ಲಿ ಶ್ರೀ ಶ್ರೀ ಸಚ್ಚಿದಾನಂದಭಾರತೀ ಶ್ರೀಪಾದಂಗಳವರ ಹಾಗೂ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಕೇರಳದ ಮಾಜಿ ಕಂದಾಯ ಸಚಿವರಾದ ಶ್ರೀ ಇ ಚಂದ್ರಶೇಖರನ್ ಅವರು ಶ್ರೀ ಮಠದ ಮುಂಭಾಗದಲ್ಲಿ ನೂತನ ಮಹಾದ್ವಾರ ಸಮರ್ಪಣೆ ಹಾಗೂ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಅವರ ದಿವ್ಯ ಹಸ್ತದಿಂದ ತುಲು ಲಿಪಿ ನಾಮಫಲಕ ಅನಾವರಣದಿನಾಂಕ 16 ಫೆಬ್ರವರಿ 2023 ರಂದು ಕಾಸರಗೋಡಿನ ಜಗದ್ಗುರು ಶಂಕರಾಚಾರ್ಯ ಸಂಸ್ಥಾನಂ ಎಡನೀರು ಇಲ್ಲಿನ ಶ್ರೀ ವಿಷ್ಣುಮಂಗಲ ದೇವಾಲಯದ ವಾರ್ಷಿಕೋತ್ಸವದ ಸಂಧರ್ಭದಲ್ಲಿ ಶ್ರೀ ಶ್ರೀ ಸಚ್ಚಿದಾನಂದಭಾರತೀ ಶ್ರೀಪಾದಂಗಳವರ ಹಾಗೂ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಕೇರಳದ ಮಾಜಿ ಕಂದಾಯ ಸಚಿವರಾದ ಶ್ರೀ ಇ ಚಂದ್ರಶೇಖರನ್ ಅವರು ಶ್ರೀ ಮಠದ ಮುಂಭಾಗದಲ್ಲಿ ನೂತನ ಮಹಾದ್ವಾರ ಸಮರ್ಪಣೆ ಹಾಗೂ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಅವರ ದಿವ್ಯ ಹಸ್ತದಿಂದ ತುಲು ಲಿಪಿ ನಾಮಫಲಕ ಅನಾವರಣ ಮಾಡಲಾಯಿತು.

ತುಲು ಲಿಪಿಯನ್ನು ಕಲಿಸುವ ಹಾಗೂ ನಾಮ ಫಲಕ ಅಳವಡಿಸುವ ಕಾರ್ಯವನ್ನು ಕೈಗೆತ್ತಿಕೊಂಡಿರುವ ಜೈ ತುಳುನಾಡು(ರಿ ) ಸಂಘಟನೆಯ ಬಗ್ಗೆ ಸ್ವಾಮೀಜಿಯವರು ಮೆಚ್ಚುಗೆ ವ್ಯಕ್ತ ಪಡಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜೈ ತುಲುನಾಡ್ (ರಿ.) ಸಂಘಟನೆಯ ಉಪಾಧ್ಯಕ್ಷರಾದ ಹರಿಕಾಂತ್ ಸಾಲ್ಯಾನ್ ಕಾಸರಗೋಡು, ಜೈ ತುಲುನಾಡ್ (ರಿ.) ಕಾಸರಗೋಡು ಘಟಕದ ಜೊತೆ ಕಾರ್ಯದರ್ಶಿ ಜಗನ್ನಾಥ್ ಕುಲಾಲ್, ತುಲು ಸಾಹಿತಿ ಶ್ರೀ ವಿಜಯರಾಜ್ ಪುನಿಂಚತಾಯ, ನಿವೃತ ಪ್ರಾಂಶುಪಾಲರು ಹಾಗು ಎಡನೀರು ಮಠದ ಮೆನೆಜರ್ ಶ್ರೀ ರಾಜೇಂದ್ರ ಕಲ್ಲುರಾಯ, ವೆಂಕಟ್ ಭಟ್ ಎಡನೀರು, ಚುಟುಕು ಕವಿ ಹಾಗು ವ್ಯಂಗ್ಯಚಿತ್ರ ಕಲಾವಿದರಾದ ರಾಘವೇಂದ್ರ ಕೆದಿಲಾಯ ಎಡನೀರು. ಶ್ರೀ ಟಿ ಶ್ಯಾಮ್ ಭಟ್ IಂS ಬೆಂಗಳೂರು ಇವರು ಅಧ್ಯಕ್ಷತೆ ವಹಿಸಿದ್ದರು. ಪಿ. ರಾಜೇಂದ್ರ ಕಲ್ಲೂರಾಯ ಸ್ವಾಗತಿಸಿ, ಡಾ .ಶ್ರೀಪತಿ ಕಲ್ಲುರಾಯ ನಿರೂಪಿಸಿ, ಸೂರ್ಯ ಭಟ್ ಎಡನೀರು ಧನ್ಯವಾದಗೈದರು.

Related Posts

Leave a Reply

Your email address will not be published.