ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಸುಬ್ರಮಣ್ಯೇಶ್ವರ ದೇವರ ಹುಂಡಿಗೆ ಇಪ್ಪತ್ತರ ನೋಟಿನಲ್ಲಿ ಅತ್ತೆಯನ್ನು ಸಾಯಿಸಲು ಬೇಡಿಕೆಯಿಟ್ಟು ಸೊಸೆಯೊಬ್ಬಳು ವರ ಕೇಳಿದ್ದಾಳೆ.
ಅತ್ತೆಯ ಕಾಟವನ್ನು ಇನ್ನೂ ತಾಳುವ ಸಾಮಥ್ರ್ಯ ನನಗಿಲ್ಲ. ಅತ್ತೆ ಆದಷ್ಟು ಬೇಗ ಸಾಯಬೇಕು ಸ್ವಾಮಿ ಎಂದು ನೋಟು ಹಾಕಿದವರು ದೇವರಲ್ಲಿ ಬೇಡಿಕೆ ಇಟ್ಟಿದ್ದಾರೆ. ದೇಣಿಗೆಗಾಗಿ ಇಟ್ಟಿದ್ದ ಹುಂಡಿಯಲ್ಲಿ ಈ ನೋಟು ಕಂಡುಬಂದಿದೆ. ದೇವರೇ, ನನ್ನ ಅತ್ತೆ ಸಾಯುವುದನ್ನು ಖಚಿತಪಡಿಸು ಎಂದು ಒತ್ತಿ ಬರೆದಿದ್ದಾರೆ. ನೋಟಿನ ಎರಡೂ ಕಡೆಗೂ ಬೇಡಿಕೆಯನ್ನು ಬರೆಯಲಾಗಿದೆ.

ಆ ನೋಟನ್ನು ನೋಡಿ ಕೆಲವರು ನಕ್ಕರೆ, ಕೆಲವರು ನಿಟ್ಟುಸಿರು ಬಿಟ್ಟರು. ಮುಖ್ಯವಾಗಿ ಇದು ಸೊದರ ಸೊಸೆಯ ಬೇಡಿಕೆಯೋ, ಅತ್ತೆಯ ಮಗನ ಹೆಂಡತಿಯ ಬೇಡಿಕೆಯೋ ಕಂಡು ಬಂದಿಲ್ಲ. ಆದರೆ ಸುದ್ದಿ ಕೂಡಲೆ ಹರಡಿದ್ದರಿಂದ ಫೋಟೋಗಳು, ಮರಿ ವೀಡಿಯೋಗಳು ತೆಗೆಯಲ್ಪಟ್ಟವು ಜಾಲ ತಾಣಗಳಲ್ಲಿ ಈ ಫೋಟೋ ಈಗ ಹರಿದಾಡುತ್ತಿದೆ. ವಿಮರ್ಶೆಗಳು ಸಹ ನಾನಾ ಕೋನದಿಂದ ಬರುತ್ತಿದೆ.

