ಟೈಮಿಂಗ್ ವಿಚಾರದಲ್ಲಿ ಖಾಸಗಿ ಬಸ್ ನಿರ್ವಾಹಕರಲ್ಲಿ ಕಿತ್ತಾಟ

ಉಡುಪಿ: ಟೈಮಿಂಗ್ ವಿಚಾರದಲ್ಲಿ ಖಾಸಗಿ ಬಸ್ ನಿರ್ವಾಹಕರು ಬೆಳ್ಳಂ ಬೆಳಗ್ಗೆ ರೋಡಲ್ಲೇ ಕಿತ್ತಾಡಿಕೊಂಡ ಘಟನೆ ಉಡುಪಿ ಕಾಪು ಎಂಬಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗ್ತಾ ಇದೆ.

ಇನ್ನು ಇಲ್ಲಿನ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಐದು ನಿಮಿಷಕ್ಕೊಂದು ಬಸ್ ಗಳು ಮಂಗಳೂರು ಕಡೆ ಪ್ರಯಾಣವನ್ನು ಮಾಡುತ್ತದೆ.

ಅದರಲ್ಲೂ ಬೆಳಗ್ಗಿನ ಹೊತ್ತು ಶಾಲೆ ಕಾಲೇಜು‌ ಮತ್ತು ಉದ್ಯೋಗಕ್ಕೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಈ ವೇಳೆ ಬಸ್ ಗಳ ನಡುವೆ ಪೈಪೋಟಿ ಇರುವುದು ಸಾಮಾನ್ಯವಾಗಿದೆ.

ಮುಂದಿನ‌ ಬಸ್ ನವ ತಮ್ಮ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಾನೆ ಎಂಬ ತಕರಾರು ಹಿಂದೆ ಬರುವ ಬಸ್ ನವರದ್ದು. ಇವತ್ತು ಇದೇ ರೀತಿ ಪ್ರಸಂಗ ನಡೆದು ಎರಡು ಬಸ್ ಗಳ ಕಂಡಕ್ಟರ್ ಗಳು ರಸ್ತೆಗಿಳಿದು ಕೈ ಕೈ ಮಿಲಾಯಿಸುವ ಹಂತ ತಲುಪಿದ್ದಾರೆ.

ಇದರಿಂದ ಪ್ರಯಾಣಿಕರಿಗೂ ತೊಂದರೆ ಉಂಟಾಗಿದ್ದು ನಮಗೆ ತಡವಾಗುತ್ತದೆ. ನಿಮ್ಮ ಜಗಳ ಮತ್ತೆ ಮಾಡಿ ಎಂದು ಗದರಿಸಿದ ಪ್ರಸಂಗ ನಡೆಯಿತು.

ಬಳಿಕ ನಿರ್ವಾಹಕರು ತಮ್ಮ ಪಾಡಿಗೆ ತಾವು ಕರ್ತವ್ಯಕ್ಕೆ ಹಾಜರಾಗಿದ್ದು,ತಾರಕಕ್ಕೇರಿದ ಪ್ರಕರಣ ಸುಖಾಂತ್ಯ ಕಂಡಿತು.

Related Posts

Leave a Reply

Your email address will not be published.