ಉಡುಪಿ: ಪತ್ನಿ ಸಾವಿಗೀಡಾದ ಮರುದಿನವೇ ಪತಿ ನಿಧನ
ಪತ್ನಿ ಸಾವಿಗೀಡಾದ ಮರುದಿನವೇ ಪತಿ ಕೂಡ ನಿಧನರಾದ ಘಟನೆ ಉಡುಪಿ ಜಿಲ್ಲೆಯ ಉದ್ಯಾವರದಲ್ಲಿ ನಡೆದಿದೆ. ಸಾಮಾಜಿಕ ಮತ್ತು ಧಾರ್ಮಿಕವಾಗಿ ಸಕ್ರಿಯವಾಗಿದ್ದ ದಂಪತಿಗಳು ಈ ಮೂಲಕ ಒಂದೇ ಸಮಯದಲ್ಲಿ ಕೊನೆಯಸಿರೆಳೆದಿದ್ದಾರೆ.
ಉದ್ಯಾವರದ ಚರ್ಚ್ ಪಾಲನಾ ಮಂಡಳಿಯಲ್ಲಿ ಸಕ್ರಿಯರಾಗಿದ್ದ ಲಾರೆನ್ಸ್ ಡೇಸಾ ಮಣಿಪಾಲದ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಅವರ ಪತ್ನಿ ಶಿಕ್ಷಕಿ ಜೂಲಿಯಾನ ಹೆಲೆನ್ ರೆಬೆಲ್ಲೋ ಒಂದು ದಿನದ ಮುಂಚೆ ಸಾವನ್ನಪ್ಪಿದ್ದರು. ಈ ಆಘಾತದಿಂದ ಅನಾರೋಗ್ಯ ಬಾಧಿಸಿದ್ದು ಮರುದಿನವೇ ಮಣಿಪಾಲದ ಆಸ್ಪತ್ರೆಗೆ ಪತಿಯನ್ನು ಚಿಕಿತ್ಸೆಗೆ ದಾಖಲಿಸಲಾಗಿತ್ತು. ಈಗ ಅವರು ಕೂಡ ಮೃತರಾಗಿದ್ದಾರೆ. ಸಾವಿನ ಮುನ್ನ ದಿನದವರೆಗೂ ದಂಪತಿಗಳಿಬ್ಬರು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯ ರಾಗಿದ್ದರು. ಸಾವಿನಲ್ಲಿ ದಂಪತಿಗಳು ಈ ಮೂಲಕ ಒಂದಾಗಿದ್ದಾರೆ ಅನ್ನೋದು ಒಂದು ವಿಚಾರ. ಆದರೆ ಇಬ್ಬರೂ ಕೂಡ ಜ್ವರದಿಂದ ಬಳಲುತ್ತಿದ್ದು, ಇವರನ್ನು ಬಾಧಿಸುತ್ತಿದ್ದ ಜ್ವರ ಯಾವುದು? ಮತ್ತು ಸಾವಿಗೆ ಕಾರಣವಾಗುವಷ್ಟು ಜ್ವರ ಗಂಭೀರವಾಗಿತ್ತೇ ಎಂಬ ಬಗ್ಗೆ ವೈದ್ಯಕೀಯ ವರದಿಗಳು ತಿಳಿಸಬೇಕಾಗಿದೆ.