ಹಾಲು ಮಾರುವ ಅಂಗಡಿಗೆ ನುಗ್ಗಿ ಕಳವು : ಕಳ್ಳನ ಕರಾಮತ್ತು ಸಿಸಿ ಕ್ಯಾಮರದಲ್ಲಿ ಸೆರೆ
ಹಾಲು ಮಾರುವ ಅಂಗಡಿಗೆ ನುಗ್ಗಿದ ಕಳ್ಳನ ಕರಾಮತ್ತು ಸಿಸಿ ಕ್ಯಾಮರದಲ್ಲಿ ದಾಖಲಾಗಿದೆ. ಉಡುಪಿ ಅಂಬಲಪಾಡಿ ಬೈಪಾಸ್ ನಲ್ಲಿರುವ ಹಾಲು ಮಾರಾಟದ ಅಂಗಡಿಗೆ ನುಗ್ಗಿದ ಕಳ್ಳನೋರ್ವ ನಗದು ದೋಚಿದ್ದಾನೆ. ಈತನ ಈ ಕುಕೃತ್ಯದ ದೃಶ್ಯಾವಳಿ ಸಿಸಿ ಕೆಮರಾದಲ್ಲಿ ಸ್ಪಷ್ಟವಾಗಿ ಕಂಡುಬರುತ್ತಿದೆ.
ಉಡುಪಿಯ ಬೈಪಾಸ್ ರಸ್ತೆಯ ಪೃಥ್ವಿ ಸೌಧದಲ್ಲಿರುವ ಅರುಣ್ ಶೆಟ್ಟಿ ಮಾಲಕತ್ವದ ಹಾಲು ಡಿಸ್ಟ್ರಿಬ್ಯೂಟರ್ ಸೆಂಟರ್ ನ ಬೀಗ ಮುರಿದು ರಾತ್ರಿ 11.30 ಕ್ಕೆ ನುಗ್ಗಿರುವ ಕಳ್ಳನೋರ್ವ 35 ಸಾವಿರ ಹಣವನ್ನು ಲಪಟಾಯಿಸಿದ್ದಾನೆ. ಒಂದು ಕಡೆಯ ಬೀಗ ಮುರಿದು ಕಳ್ಳತನ ನಡೆಸಿದ್ದು , ಸಿಸಿಟಿವಿಯಲ್ಲಿ ಕಳ್ಳತನದ ವಿಡಿಯೋ ರೆಕಾರ್ಡ್ ಆಗಿದೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೆÇಲೀಸರು ಕಳ್ಳನ ಹುಡುಕುತ್ತಿದ್ದಾರೆ.