ಉಡುಪಿ : ಮೈ ಡಿಯರ್ ಮೀನ ತುಳು ಆಲ್ಬಂ ಸಾಂಗ್ ಆಕ್ಷನ್ ಕ್ರಿಯೇಷನ್ ಯೂಟ್ಯೂಬ್ ಚಾನೆಲಿನಲ್ಲಿ ಬಿಡುಗಡೆ

ಮಣಿ ಶೆಣೈ ನಿರ್ದೇಶನದ ಮೈ ಡಿಯರ್ ಮೀನಾ ಕಾಮಿಡಿ ತುಳು ಆಲ್ಬಂ ಸಾಂಗ್ ಇತ್ತೀಚೆಗೆ ಶ್ರೀ ಕ್ಷೇತ್ರ ಪೇಟೆಬೆಟ್ಟು ಕಟಪಾಡಿಯಲ್ಲಿ ಅದ್ದೂರಿಯಾಗಿ ಆಕ್ಷನ್ ಕ್ರಿಯೇಷನ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಂಡಿತ್ತು.
ಈ ಹಾಡಿನಲ್ಲಿ ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ದೀಕ್ಷಾ ಎಸ್‌ಎಂ ಬ್ರಹ್ಮಾವರ ಇವರು ಕೇಂದ್ರ ಬಿಂದು ಆಗಿದ್ದು, ಎಏ ಪೇಟೆಬೆಟ್ಟು, ಕೀರ್ತಿ ಕುಮಾರ್ ಬೆಂಗ್ರೆ, ಕಿರಣ್ ಲೂಯಿಸ್, ಹಾಗೂ ಎಲ್ಲಾ ಆಕ್ಷನ್ ಕ್ರಿಯೇಷನ್ ತಂಡದ ಸದಸ್ಯರು ಅಭಿನಯಿಸಿದ್ದಾರೆ.
ಮೈ ಡಿಯರ್ ಮೀನ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಪೇಟೆಬೆಟ್ಟು ಸೇವಾ ಕಾರ್ಯಕರ್ತರಾದ ತುಕರಾಮ ಎಸ್. ಉರ್ವ, ಶ್ರೀ ಕ್ಷೇತ್ರ ಕಳಿಬೈಲು ಪಾಂಡೇಶ್ವರ ಪ್ರಧಾನ ಅರ್ಚಕರು ಹಾಗೂ ಸಂಚಾಲಕರಾದ ಅಭಿಜಿತ್ ಪಾಂಡೇಶ್ವರ, ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ಪ್ರಮೀಳಾ ಜತ್ತನ್ ಕೋಟೆ, ಎಲ್ ಐ ಸಿ ಉದ್ಯಮಿ ಹರೀಶ್ಚಂದ್ರ ಪಿಲಾರ್, ಶ್ರೀ ಕ್ಷೇತ್ರ ಪೇಟೆಬೆಟ್ಟು ಇದರ ಗುರಿಕಾರರು, ಉದ್ಯಮಿ ಅಭಿರಾಜ್ ಸುವರ್ಣ, ವಿಲ್ಪ್ರೇಡ್ ಲೂಯಿಸ್, ಸ್ಯಾಂಡಿ ಬಾಡಿ ಬಿಲ್ಡರ್‌ನ ಸಂದೇಶ್, ಕೃಷ್ಣ ಪಣಿಯೂರು ಮೆಸ್ಕಾಂ, ಡಿ ಓ ಪಿ ಎಡಿಟರ್ ಕಾರ್ತೀಕ್ ಮೂಲ್ಕಿ, ನಿರ್ದೇಶಕರಾದ ಮಣಿ ಶೆಣೈ ಹಾಗೂ ರಂಗ ಭೂಮಿ ಕಲಾವಿದರಾದ ಜ್ಞಾನೇಶ್ ಉದ್ಯಾವರ ಮತ್ತು ಮಂಜು ಕುಂಜೂರು ಉಪಸ್ಥಿತರಿದ್ದರು.
