ಉಳ್ಳಾಲ : ರೈಲು ಢಿಕ್ಕಿ ಹೊಡೆದು ಕಾರ್ಮಿಕ ಮೃತ್ಯು

ಉಳ್ಳಾಲ: ರೈಲು ಡಿಕ್ಕಿ ಹೊಡೆದ ಪರಿಣಾಮ ಹಳಿ ದಾಟುತ್ತಿದ್ದ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಒಳಪೇಟೆ ಬಳಿ ಶನಿವಾರ ರಾತ್ರಿ ನಡೆದಿದೆ ಮೃತ ಕಾರ್ಮಿಕ ನನ್ನು ಬಿಹಾರ ಮೂಲದ ಶ್ರವಣ್ ದಾಸ್ (40) ಎಂದು ಗುರುತಿಸಲಾಗಿದೆ.
ಅವರು ಕಲ್ಕಟ್ಟ ದಲ್ಲಿ ಕೆಲಸ ಮುಗಿಸಿ ತೊಕ್ಕೊಟ್ಟು ವಿನಲ್ಲಿರುವ ನಿವಾಸಕ್ಕೆ ಬಂದಿದ್ದರು.ಈ ವೇಳೆ ಸಾಂಬಾರ್ ತರಲೆಂದು ಹೊಟೇಲಿಗೆ ತೆರಳಿ ವಾಪಸ್ ರೈಲ್ವೇ ಹಳಿ ದಾಟಿ ಬರುವಾಗ ರೈಲು ಡಿಕ್ಕಿ ಹೊಡೆದಿದೆ.ಇದರಿಂದ ರಸ್ತೆ ಗೆಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರೈಲ್ವೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಕಿಸೆಯಲ್ಲಿ ದೊರೆತ ಆಧಾರ್ ಕಾರ್ಡ್ ಮೂಲಕ ಗುರುತು ಪತ್ತೆ ಹಚ್ಚಿದ್ದಾರೆ. ಅವರ ಪತ್ನಿ ಮಕ್ಕಳು ಬಿಹಾರ ದಲ್ಲಿದ್ದು, ಶ್ರವಣ್ ದಾಸ್ ಬಾಡಿಗೆ ಕೊಠಡಿಯಲ್ಲಿ ಒಂಟಿಯಾಗಿ ಇದ್ದರು ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.