ಉಳ್ಳಾಲ: ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ

ಉಳ್ಳಾಲ, ಸೆ.3; ಹಿಂದೂ ಯುವಸೇನೆಯ ಸಕ್ರಿಯ ಕಾರ್ಯಕರ್ತ ಕುಂಪಲ ಹನುಮಾನ್ ನಗರ ನಿವಾಸಿ ಜಯಂತ್ ಎಸ್. ಕುಂಪಲ(49) ಕೃಷ್ಣ ನಗರದ ಬಾಡಿಗೆ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಿಕ್ಷಾ ಚಾಲಕನಾಗಿದ್ದ ಅವರು ಕುಂಪಲ ಹನುಮಾನ್ ನಗರದಲ್ಲಿ ನೂತನ ಮನೆ ನಿರ್ಮಾಣದ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಈ ನಡುವೆ ಆತ್ಮಹತ್ಯೆಗೈದಿರುವುದು ಸಂಶಯಕ್ಕೆಡೆ ಮಾಡಿದೆ. ಕೂಳೂರಿನಲ್ಲಿ ನಿನ್ನೆ ನಡೆದ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಯಂತ್ , ತನ್ನ ಸ್ಮಾಟ್೯ ಫೋನನ್ನು ಕಳೆದುಕೊಂಡಿದ್ದರು. ಈ ವಿಚಾರದಲ್ಲಿ ಇಂದು ಮಧ್ಯಾಹ್ನದವರೆಗೂ ದು:ಖ ತೋಡಿಕೊಂಡಿದ್ದರು. ಸಂಜೆ ಪತ್ನಿ ಮನೆಗೆ ಬಂದಾಗ ಆತ್ಮಹತ್ಯೆ ಬೆಳಕಿಗೆ ಬಂದಿದೆ. ಕುಂಪಲ ಹನುಮಾನ್ ನಗರ ಶ್ರೀವೀರಾಂಜನೇಯ ವ್ಯಾಯಾಮ ಶಾಲೆ ಸಕ್ರಿಯ ಸದಸ್ಯರಾಗಿದ್ದ ಇವರು, ಹಿಂದೂ ಯುವಸೇನೆ ಆರಂಭ ಸಂದರ್ಭದಲ್ಲಿ ಮುಖಂಡರಾಗಿ ಸಂಘಟನೆಯಲ್ಲಿ ಕಾರ್ಯನಿರ್ವಹಿಸಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.