ಮಂಗಳೂರು: ಅಂಚೆ ಇಲಾಖೆ ಯಿಂದ ನೂತನವಾಗಿ ವಿವಿಧ ಸೇವಾ ಸೌಲಭ್ಯಗಳು ಗ್ರಾಹಕರಿಗೆ ಲಭ್ಯವಿರುತ್ತದೆ ಅದರ ಸದುಪಯೋಗ ವನ್ನು ಗ್ರಾಹಕರು ಪಡೆದುಕೊಳ್ಳುವಂತೆ ಭಾರತೀಯ ಅಂಚೆ ಇಲಾಖೆಯ ಪಾಂಡೇಶ್ವರ ಕೇಂದ್ರದ ಹಿರಿಯ ಅಧಿಕಾರಿ ಲೋಕನಾಥ್ ಕರೆ ನೀಡಿದ್ದಾರೆ.
ಅವರು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ ಕ್ಲಬ್, ಪತ್ರಿಕಾಭವನ ಟ್ರಸ್ಟ್ ಹಾಗೂ ಭಾರತೀಯ ಅಂಚೆ ಇಲಾಖೆಯ ಸಹಭಾಗಿತ್ವದಲ್ಲಿ ಪತ್ರಕರ್ತರ ಸಂಘದ ಸದಸ್ಯರಿಗೆ ಅಂಚೆ ವಿಮಾ ಯೋಜನೆಯ ನೋಂದಣಿ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡುತ್ತಾ,ಅಂಚೆ ಇಲಾಖೆಯ ಮೂಲಕ ಆಧಾರ್ ನೋಂದಣಿ, ತಿದ್ದುಪಡಿ, ವಿಮಾ ಯೋಜನೆಗಳು ವಿವಿಧ ಆರೋಗ್ಯ ವಿಮಾಯೋಜನೆಗಳು ಲಭ್ಯವಿರುತ್ತವೆ.ಕಡಿಮೆ ಮೊತ್ತದಲ್ಲಿ ಕನಿಷ್ಠ ದಾಖಲೆಗಳೊಂದಿಗೆ ಹೆಚ್ಚು ಸೌಲಭ್ಯಗಳನ್ನು ಪಡೆಯಲು ಸಾಧ್ಯವಾ ಗುತ್ತದೆ ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಸದಸ್ಯರಿಗೆ
10 ಲಕ್ಷ ರೂಪಾಯಿ ವರೆಗಿನ ಅಪಘಾತ ವಿಮಾ ಯೋಜನೆ ಉಪಯುಕ್ತ ಯೋಜನೆಯಾಗಿದೆ ಎಂದು ಅವರು ಮಾಹಿತಿ ನೀಡಿದರು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್ ವಹಿಸಿದ್ದರು,ಕರ್ನಾಟಕ ಕಾರ್ಯ ನಿರತ ಪತ್ರಕರ್ತ ರ ಸಂಘದ ರಾಜ್ಯ ಕಾರ್ಯ ಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ ವಂದಿಸಿದರು.ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಅನ್ನು ಮಂಗಳೂರು,ಜಿಲ್ಲಾ ಸಂಘದ ಪೂರ್ವಾಧ್ಯಕ್ಷ ಹರ್ಷ ,ಭಾರತೀಯ ಅಂಚೆ ಇಲಾಖೆಯ ಪಾಂಡೇಶ್ವರ ಕೇಂದ್ರದ ನಿರೀಕ್ಷಕ ಪ್ರದೀಪ್ ಭಂಡಾರಿವೇದಿಕೆಯಲ್ಲಿ ಉಪ
ಸ್ಥಿತರಿದ್ದರು.
ಅಂಚೆ ಇಲಾಖೆಯಿಂದ ವಿವಿಧ ಸೇವಾ ಸೌಲಭ್ಯಗಳು ಲಭ್ಯ-ಲೋಕನಾಥ್
RELATED ARTICLES

