HomeFresh Newsವೇದಂ ಆರೋಗ್ಯ ಆಯುರ್ವೇದ ಆಸ್ಪತ್ರೆ ಮತ್ತು ಔಷಧಾಲಯ: ಆಗಸ್ಟ್ 12ರಂದು ಆಟಿ ಅಮಾವಾಸ್ಯೆ ಪ್ರಯುಕ್ತ ಉಚಿತ...

ವೇದಂ ಆರೋಗ್ಯ ಆಯುರ್ವೇದ ಆಸ್ಪತ್ರೆ ಮತ್ತು ಔಷಧಾಲಯ: ಆಗಸ್ಟ್ 12ರಂದು ಆಟಿ ಅಮಾವಾಸ್ಯೆ ಪ್ರಯುಕ್ತ ಉಚಿತ ಕಷಾಯ ವಿತರಣೆ

ವೇದಂಆರೋಗ್ಯ ಆಯುರ್ವೇದ ಆಸ್ಪತ್ರೆಯ ವತಿಯಿಂದ ಆಟಿ ಅಮಾವಾಸ್ಯೆಯ ಪ್ರಯುಕ್ತ ಉಚಿತ ಹಾಲೆಮರದ ಕಷಾಯ ವಿತರಣಾ ಕಾರ್ಯಕ್ರಮ ಆಗಸ್ಟ್ 12ರಂದು ನಡೆಯಲಿದೆ.

ವೇದಂಆರೋಗ್ಯ ಆಯುರ್ವೇದ ಆಸ್ಪತ್ರೆ, ಮಂಗಳೂರು ಹಾಗೂ ಆರೋಗ್ಯ ಭಾರತಿ, ಮಂಗಳೂರು ಇವರ ಜಂಟಿ ಸಹಯೋಗದಲ್ಲಿ ಈ ಆರೋಗ್ಯವರ್ಧಕ ಕಾರ್ಯಕ್ರಮ ನಡೆಯಲಿದೆ.

ಕರಾವಳಿಯ ಸಾಂಪ್ರದಾಯಿಕ ಹಾಗೂ ಆಚರಣೆಯ ಮಹತ್ವ ಹೊಂದಿರುವ ಆಟಿ ಅಮಾವಾಸ್ಯೆಯ ಅಂಗವಾಗಿ ಸಾರ್ವಜನಿಕರ ಆರೋಗ್ಯ ರಕ್ಷಣೆಯ ಉದ್ದೇಶದಿಂದ ಉಚಿತವಾಗಿ ಹಾಲೆಮರದ ಕಷಾಯವನ್ನು ವಿತರಿಸಲಾಗುತ್ತಿದೆ. ಆಗಸ್ಟ್ 12ರ ಬುಧವಾರ ಬೆಳಿಗ್ಗೆ 6.30ರಿಂದ ಕಷಾಯ ವಿತರಣೆ ನಡೆಯಲಿದೆ.

ವೇದಂಆರೋಗ್ಯ ಆಯುರ್ವೇದ ಆಸ್ಪತ್ರೆ, ವೆಲೆನ್ಸಿಯಾ, ಮಂಗಳೂರು, ವೇದಂಆರೋಗ್ಯ ಆಯುರ್ವೇದ ಆಸ್ಪತ್ರೆ, ಕದ್ರಿ, ಮಂಗಳೂರು ಇಲ್ಲಿ ಕಷಾಯ ವಿತರಣೆ ನಡೆಯಲಿದೆ.

ಆಟಿ ತಿಂಗಳ ಈ ವಿಶೇಷ ದಿನದಂದು ನೀಡಲಾಗುವ ಔಷಧೀಯ ಗುಣಯುಕ್ತ ಹಾಲೆಮರದ ಕಷಾಯದ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕಾಗಿ ವೇದಂಆರೋಗ್ಯ ಆಯುರ್ವೇದ ಆಸ್ಪತ್ರೆಯ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments