ಬಿಜೆಪಿ ಅಭ್ಯರ್ಥಿ ಡಿ. ವೇದವ್ಯಾಸ್ ಕಾಮತ್ : ಮನೆ ಮನೆಗೆ ತೆರಳಿ ಮತಯಾಚನೆ
ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ. ವೇದವ್ಯಾಸ್ ಕಾಮತ್ ಅವರು ದೇರೆಬೈಲ್ ದಕ್ಷಿಣ ವಾರ್ಡಿನ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ನವಗಳಿಂದ ಮಂಗಳೂರು ನಗರ ದಕ್ಷಿಣದಲ್ಲಿ ಅಭಿವೃದ್ಧಿ, ಜನಪರ ಕಾರ್ಯಗಳು ಹಾಗೂ ನಿರಂತರವಾಗಿ ಕ್ಷೇತ್ರದ ಜನರೊಂದಿಗೆ ಬೆರೆತಿದ್ದೇನೆ ಎಂದು ಹೇಳಿದರು.
ರಾಜ್ಯ ಸರಕಾರದ ಜನಪರ ಯೋಜನೆಗಳನ್ನು, ನಗರದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಮಾಹಿತಿ ಮನೆ ಮನೆಗೆ ತಲುಪಿಸಲಾಗುತ್ತಿದೆ. ಕಳೆದ ಐದು ವರ್ಷಗಳ ರಿಪೋರ್ಟ್ ಕಾರ್ಡ್ ಮೂಲಕ ಈ ಬಾರಿಯ ಚುನಾವಣೆ ಎದುರಿಸಿ ಪ್ರಚಂಡ ಗೆಲುವು ಸಾಧಿಸಲಿದ್ದೇವೆ ಎಂದು ವೇದವ್ಯಾಸ್ ಕಾಮತ್ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಭಾಸ್ಕರ್ ಚಂದ್ರ ಶೆಟ್ಟಿ, ಸುಜನ್ ದಾಸ್ ಕುಡುಪು,ಗುರುದತ್ ಕೋಟ್ಯನ್, ಶ್ರೀನಿವಾಸ್ ಶೇಟ್, ವಿನಯ್ ನೇತ್ರಾ, ಸುಭೋದ್ ಶೆಟ್ಟಿ, ಚರಿತ್ ಪೂಜಾರಿ, ಸುನಂದಾ, ಮುರಳಿ ಚಿಲಿಂಬಿ, ರಾಕೇಶ್ ಕೊಟ್ಟಾರ ಕ್ರಾಸ್, ಪವನ್, ಪ್ರಜ್ವಲ್ ಚಿಲಿಂಬಿ, ಶ್ರೀಕಾಂತ್, ಸುರೇಶ್, ಪ್ರತಾಪ್, ಜೀವನ್, ಯತೀಶ್, ಸಬ್ರಹ್ಮಣ್ಯ ಅಂಗಡಿಗುಡ್ಡ, ಪ್ರವೀಣ್, ಪ್ರಸಾದ್, ಶ್ರೀನಿವಾಸ್ ಪೈ, ಅರುಣ್ ಕಾಪಿಕಾಡ್, ಲೀನಾ ಡಿಸೋಜ, ಚಂದ್ರಾವತಿ, ಪ್ರೇಮಾ, ವಿಜಯ ಲಕ್ಷ್ಮಿ, ನೇಹಾ, ಸೀಮಾ, ಸುರೇಖಾ,ಲೀಲಾ ಮುಂತಾದವರು ಉಪಸ್ಥಿತರಿದ್ದರು