ವಿಜಯ ಅಮೃತರಾಜ್, ಲಿಯಾಂಡರ್‌ರಿಗೆ ಸಾಧನೆಗೆ ಪುರಸ್ಕಾರ

ಭಾರತದ ಪ್ರಸಿದ್ಧ ಟೆನ್ನಿಸ್ ಆಟಗಾರರಾದ ವಿಜಯ ಅಮೃತರಾಜ್ ಮತ್ತು ಲಿಯಾಂಡರ್ ಪಯಸ್‌ರಿಗೆ ಅಂತರರಾಷ್ಟ್ರೀಯ ಟೆನ್ನಿಸ್ ಹಾಲ್ ಆಫ್ ಫೇಮ್ ಗೌರವ ಸಂದಿದೆ.
ಟೆನ್ನಿಸ್ ಆಟಗಾರರಾಗಿ ಲಿಯಾಂಡರ್ ಪಯಸ್ ಮತ್ತು ಟೆನ್ನಿಸ್‌ಗೆ ನೀಡಿರುವ ಕೊಡುಗೆಗಾಗಿ ವಿಜಯ ಅಮೃತ್‌ರಾಜ್ ಅವರುಗಳಿಗೆ ಈ ಗೌರವ ಸಲ್ಲುತ್ತಿದೆ. ಇಲ್ಲಿಗೆ ೨೮ ದೇಶಗಳ ೨೬೭ ಜನರು ಟೆನ್ನಿಸ್ ಹಾಲ್ ಆಫ್ ಫೇಮ್ ಗೌರವ ಪಡೆದಂತಾಯಿತು ಎಂದು ಇಂಟರ್ನ್ಯಾಶನಲ್ ಟೆನ್ನಿಸ್ ಹಾಲ್ ಆಫ್ ಫೇಮ್ ಒಕ್ಕೂಟವು ತಿಳಿಸಿದೆ.ಟೆನ್ನಿಸ್ ಹಾಲ್ ಆಫ್ ಫೇಮ್ ಗೌರವ ಪಡೆದ ಏಶಿಯಾದ ಮೊದಲಿಗರಾಗಿದ್ದಾರೆ ಲಿಯಾಂಡರ್ ಪಯಸ್ ಮತ್ತು ವಿಜಯ ಅಮೃತರಾಜ್.
