ನೀಟ್ ಫಲಿತಾಂಶ, ರಾಜಸ್ತಾನ, ಗುಜರಾತ್, ತಮಿಳುನಾಡು ಉತ್ತಮ ಸಾಧನೆ

ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ವಲಯವಾರು ನೀಟ್ ಫಲಿತಾಂಶ ಪ್ರಕಟವಾಗಿದ್ದು ರಾಜಸ್ತಾನ, ಗುಜರಾತ್ ಮತ್ತು ತಮಿಳುನಾಡಿನ ಕೆಲವು ಪ್ರದೇಶಗಳು ಉತ್ತಮ ಸಾಧನೆ ಮಾಡಿವೆ.
ಹರಿಯಾಣದ 720ಕ್ಕೆ 720 ಪಡೆದಿದ್ದ ಒಬ್ಬರು ಕೂಡ ಮತ್ತೆ ಆ ಸಾಧನೆ ಪಡೆದಿಲ್ಲ. 700ಕ್ಕೆ ಮೇಲೆ ಅಂಕ ಗಳಿಸಿದವರಿಗೆ ಮರು ಪರೀಕ್ಷೆ ನಡೆಸಲಾಗಿತ್ತು. ನೀಟ್ ಫಲಿತಾಂಶದಂತೆ 2,250 ಮಂದಿ ಸೊನ್ನೆ ಅಂಕ ಪಡೆದಿದ್ದಾರೆ ಮತ್ತು 9,400 ವಿದ್ಯಾರ್ಥಿಗಳು ನಕಾರಾತ್ಮಕ ಅಂಕ ಪಡೆದಿದ್ದಾರೆ. ಪ್ರಶ್ನೆಪತ್ರಿಕೆ ಬಯಲು ಗುಲ್ಲಿನ ಜಾರ್ಖಂಡ್‌ನ ಹಜಾರಿಬಾಗ್ ಮತ್ತು ಬಿಹಾರದ ಕೆಲವೆಡೆ ಈ ಸೊನ್ನೆ ಮತ್ತು ನೆಗೆಟಿವ್ ಮಾರ್ಕ್ಸ್ ಬಹುವಾಗಿ ಕಂಡು ಬಂದಿದೆ.
ರಾಜಸ್ತಾನದಲ್ಲಿ 700ರ ಮೇಲೆ 149 ಮತ್ತು 600ರ ಮೇಲೆ 14,297 ವಿದ್ಯಾರ್ಥಿಗಳು ಫಲಿತಾಂಶ ಪಡೆದು 2024ರ ನೀಟ್ ಅತ್ಯುತ್ತಮ ಸಾಧಕರು ಎನಿಸಿದ್ದಾರೆ. ಗುಜರಾತಿನ ರಾಜ್‌ಕೋಟ್, ಅಹಮದಾಬಾದ್ ಹಾಗೂ ತಮಿಳುನಾಡಿನ ನಾಮಕ್ಕಲ್ ವಲಯದಲ್ಲಿ ಉತ್ತಮ ಫಲಿತಾಂಶ ಬಂದಿದೆ.ಮೇ 5ರಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ನೀಟ್ ಪರೀಕ್ಷೆ ನಡೆದಿದ್ದು 24 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಅತಿ ಅಂಕದ ಗುಲ್ಲಿಗೆ ಬಿದ್ದವರಿಗೆ ಮರು ಪರೀಕ್ಷೆ ನಡೆಸಲಾಗಿತ್ತು.ಈಗ ಉತ್ತಮ ಫಲಿತಾಂಶ ಪಡೆದ ರಾಜಸ್ತಾನದಲ್ಲಿ ಇತ್ತೀಚಿಗೆ 10, 12ನೇ ತರಗತಿ ಪರೀಕ್ಷೆಗಳ ಸಾಮೂಹಿಕ ನಕಲು ಬಯಲಾಗಿತ್ತು.ಸುಪ್ರೀಂ ಕೋರ್ಟ್ ಜುಲಾಯಿ 22ರಿಂದ ನೀಟ್ ಅಕ್ರಮದ ಬಗೆಗಿನ ವಿಚಾರಣೆ ಮುಂದುವರಿಸಲಿದೆ.
