ಮಟ್ಟು : ತಲೆ ತಿರುಗಿ ಮೂರ್ಚೆ ಹೋಗಿದ್ದ ಮಹಿಳೆ : ಮಾನವೀಯತೆ ಮೆರೆದ ವಿನಯ್‍ಕುಮಾರ್ ಸೊರಕೆ
ಮತಯಾಚನೆ ಸಂದರ್ಭದಲ್ಲಿ ಕಾಪು ಕ್ಷೇತ್ರ ಮಟ್ಟುವಿನಲ್ಲಿ ರಸ್ತೆ ಮಧ್ಯದಲ್ಲಿ ತಲೆ ತಿರುಗಿ ಬಿದ್ದಿದ್ದ ಮಹಿಳೆಯನ್ನು ಎತ್ತಿ ಉಪಚರಿಸಿ ಮಾನವೀಯತೆ ಮೆರೆದಿದ್ದಾರೆ ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್‍ಕುಮಾರ್ ಸೊರಕೆ.
ಮಾನವೀಯತೆ , ಮ್ರದುತ್ವ, ಉಪಚಾರ, ಸಂತೈಸುವಿಕೆ ಇವೆಲ್ಲವೂ ರಾಜಕೀಯ ರಂಗದಲ್ಲಿ ಕಾಣಿಸದ ಈ ದಿನಗಳಲ್ಲಿ ಕಾಪು ಕ್ಷೇತ್ರದ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಯವರು ರಾಜಕೀಯ ರಂಗಕ್ಕೆ ಮಾದರಿಯಾಗಿದ್ದಾರೆ.
ಕಾಪು ಕ್ಷೇತ್ರದ ಮಟ್ಟು ಮಹಾಂಕಾಳಿ ಮಂತ್ರದೇವತೆ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ರಸ್ತೆ ಬರ್ತಾ ಇರೋ ಮಟ್ಟುವಿನ ಮಹಿಳೆ ಮೋಹಿನಿಯವರು ಬಿಸಿಲ ಜಳಕ್ಕೆ ತಲೆತಿರುಗಿ ರಸ್ತೆ ಮಧ್ಯದಲ್ಲಿ ಮೂರ್ಚೆ ಹೋಗಿ ಬಿದ್ದಿದ್ದರು. ನಂತರ ಮೋಹಿನಿಯವರನ್ನು ಎತ್ತಿ ಉಪಚರಿಸಿದ ಸೊರಕೆಯವರು ನೀರನ್ನು ನೀಡಿ ಸಂತೈಸಿದರು.
ಕಾಂಗ್ರೆಸ್ ಮುಖಂಡರಾದ ಪ್ರಶಾಂತ್ ಜತ್ತನ್, ಪ್ರಮೀಳ ಜತ್ತನ್,ದಯಾನಂದ ಬಂಗೇರ, ಕಿಶೋರ್ ಅಂಬಾಡಿ, ಅಖಿಲೇಶ್, ಸುಶೀಲ್ ಬೋಳಾರ್, ವಿಕ್ರಂ ಕಾಪು ಮೊದಲದಾವರು ಸೊರಕೆಯವರಿಗೆ ಸಾಥ್ ನೀಡಿದರು.