ವಿಟ್ಲ: ಆಟೋ ರಿಕ್ಷಾಕ್ಕೆ ಢಿಕ್ಕಿಯಾದ ಕಾರು: ರಿಕ್ಷಾ ಚಾಲಕನಿಗೆ ಗಾಯ

ಆಟೋ ರಿಕ್ಷಾವೊಂದಕ್ಕೆ ಹಿಂದಿನಿಂದ ಬಂದ ಕಾರು ಢಿಕ್ಕಿಯಾದ ಘಟನೆ ವಿಟ್ಲದ ಸೂರಿಕುಮೇರು ಜಂಕ್ಷನ್‌ನಲ್ಲಿ ನಡೆದಿದೆ. ಆಟೋಲ ಚಾಲಕ ಸೂರಿಕುಮೇರ್ ನಿವಾಸಿ ಹನೀಪ್ ಎಂಬವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಟೋ ರಿಕ್ಷಾ ಸೂರಿಕುಮೇರ್‌ನಿಂದ ಮಾಣಿ ಕಡೆಗೆ ತೆರಳುತ್ತಿತ್ತು. ಮಂಗಳೂರು ಕಡೆಯಿಂದ ಪುತ್ತೂರಿಗೆ ಬರುತ್ತಿದ್ದ ಕಾರು ರಿಕ್ಷಾಕ್ಕೆ ಢಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ರಿಕ್ಷಾ ಮತ್ತು ಕಾರು ನಜ್ಜುಗುಜ್ಜಾಗಿದೆ.  

Related Posts

Leave a Reply

Your email address will not be published.