ಮಂಜೇಶ್ವರದಲ್ಲಿ ತಿಮಿಂಗಲದ ಅಸ್ತಿಪಂಜರ ಪತ್ತೆ

ಮಂಜೇಶ್ವರದಲ್ಲಿ 16 ವರ್ಷ ಹಳೆಯದಾಗಿರುವ ತಿಮಿಂಗಿಲ ಮೀನಿನ ಅಸ್ತಿಪಂಜರವನ್ನು ಕಾಸರಗೋಡು ಡಿ ಎಫ್ ಒ ಪತ್ತೆ ಹಚ್ಚಿದೆ.

ಕುಂಜತ್ತೂರು ಸಮೀಪದ ಕಣ್ಣತೀರ್ಥ ಕಡಪ್ಪುರದಲ್ಲಿ ಕರ್ನಾಟಕ ನಿವಾಸಿಯ ಮಾಲಕತ್ವದಲ್ಲಿರುವ ಸುಮಾರು ಹದಿನೈದು ಎಕ್ರೆಯ ಸ್ಥಳದಲ್ಲಿರುವ ಶೆಡ್ಡೊಂದರಲ್ಲಿ ತಿಮಿಂಗಿಲದ ಅಸ್ತಿಪಂಜರ ಪತ್ತೆಯಾಗಿದೆ.

ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದ ಮಾಲಿಕರನ್ನು ಸಂಪರ್ಕಿಸಿದಾಗ 2007 ರಲ್ಲಿ ಕಣ್ಣತೀರ್ಥ ಕಡಪ್ಪುರದಲ್ಲಿ ತೀರಕ್ಕೆ ಬಂದ ಸತ್ತ ತಿಮಿಂಗಿಲವನ್ನು ಇರಿಸಿಕೊಳ್ಳಲು ಸ್ಥಳದಲ್ಲಿ 27 ಸಾವಿರ ರೂ. ಖರ್ಚು ಮಾಡಿ ಶೆಡ್ ನಿರ್ಮಿಸಿ ಅದನ್ನೊಂದು ಕಲಾಕೃತಿಯಾಗಿ ಸಂರಕ್ಷಿಸಿ ಇಟ್ಟಿರುವುದಾಗಿಯೂ ಪ್ರತಿಕ್ರಿಯಿಸಿದ್ದಾರೆ. ಜೊತೆಯಾಗಿ 23 ಎಲುಬಿನ ತುಂಡುಗಳನ್ನು ಕೂಡಾ ಪತ್ತೆ ಹಚ್ಚಲಾಗಿದೆ.

ಇದನ್ನು ಅಧಿಕಾರಿಗಳು ಡಿ ಎನ್ ಎ ಪರೀಕ್ಷೆಗೆ ಕಳುಹಿಸಲಿದ್ದಾರೆ. ಬಳಿಕ ಕಾನೂನಾತ್ಮಕ ರೀತಿಯಲ್ಲಿ ತನಿಖೆ ನಡೆಯಲಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Related Posts

Leave a Reply

Your email address will not be published.