ಏಪ್ರಿಲ್ 11ರಂದು ವಿಟ್ಲ ಅರಮನೆಯಲ್ಲಿ ತ್ರಿಕಾಲ ಪೂಜೆ : ಆಮಂತ್ರಣ ಪತ್ರಿಕೆ ಬಿಡುಗಡೆ

ವಿಟ್ಲ ತ್ರಿಕಾಲ ಪೂಜಾ ಸಮಿತಿ ವತಿಯಿಂದ ವಿಟ್ಲದ ಅರಮನೆಯಲ್ಲಿ ಏಪ್ರಿಲ್ 11 ರಂದು ನಡೆಯಲಿರುವ ತ್ರಿಕಾಲ ಪೂಜೆಯ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭ ವಿಟ್ಲ ಅರಮನೆಯಲ್ಲಿ ನಡೆಯಿತು. ವಿಟ್ಲ ಅರಮನೆಯ ಅರಸರಾದ ಬಂಗಾರು ಅರಸರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
ಏಪ್ರಿಲ್ 11 ರಂದು ವಿಟ್ಲ ಸೀಮೆಯ ಡೊಂಬ ಹೆಗ್ಗಡೆ ಮನೆತನದ ಅರಮನೆಯಲ್ಲಿ ಶ್ರೀದೇವಿಯ ಪ್ರೀತ್ಯರ್ಥವಾಗಿ ಸಮಸ್ತ ಸಮಾಜದ ಒಳಿತಿಗಾಗಿ ಅರಮನೆಯ ಮಠದಲ್ಲಿ ಶ್ರೀದೇವಿಗೆ ತ್ರಿಕಾಲ ಪೂಜೆ ನಡೆಯಲಿದೆ.
ಬೆಳಿಗ್ಗೆ 6 ಗಂಟೆಗೆ ರಾಜಪುರೋಹಿತರಾದ ವೇದಮೂರ್ತಿ ಶ್ರೀವತ್ಸ ಕೆದಿಲಾಯರಿಂದ ದೀಪಾರಾಧನೆ, 8 ಗಂಟೆಗೆ ಮಹಾಮಂಗಳಾರತಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಮಧ್ಯಾಹ್ನ ಪ್ರಸಾದ ಭೋಜನ, ಸಂಜೆ ಡಾ. ಪುಂಡಿಕಾಯಿ ಗಣಪಯ್ಯ ಭಟ್ ಮೂಡಬಿದ್ರೆ ಅವರಿಂದ ಉಪನ್ಯಾಸ ನಡೆಯಲಿದ್ದು, ರಾತ್ರಿ ಮಹಾಮಂಗಳಾರತಿ ನಡೆದು ಪ್ರಸಾದ ಭೋಜನ ನಡೆಯಲಿದೆ ಎಂದು ತ್ರಿಕಾಲ ಪೂಜಾ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭ ವಿಟ್ಲ ಅರಮನೆಯ ಸದಾಶಿವ, ಕೃಷ್ಣಯ್ಯ ಕೆ, ಜಯರಾಮ ಬಲ್ಲಾಳ್, ತ್ರಿಕಾಲ ಸಮಿತಿಯ ಸಂಚಾಲಕ ಬಾಬು ಕೆ.ವಿ, ಪ್ರಮುಖರಾದ ಸುಬ್ರಾಯ ಪೈ, ರಾಧಾಕೃಷ್ಣ ನಾಯಕ್, ಸುಭಾಶ್ಚಂದ್ರ ನಾಯಕ್, ಗುರುಪ್ರಸಾದ್ ಬಡೆಕ್ಕಿಲಾಯ, ಶೈಲೇಶ್ ಹೇರಳ, ರಾಮ್ದಾಸ್ ಶೆಣೈ, ನಟೇಶ್ ವಿಟ್ಲ, ಅನಂತಪ್ರಸಾದ್, ಚಂದ್ರಾಹಾಸ ಸುವರ್ಣ, ಕೇಶವ ವಿ.ಕೆ, ಸಂಜೀವ ಪೂಜಾರಿ ಉಕ್ಕುಡ, ಕೇಶವ ವಿ.ಆರ್, ಶೀನ ಕಾಶಿಮಠ, ವಿಶ್ವನಾಥ ಶೆಟ್ಟಿ ಕೊಪ್ಪಳ, ದಿವಾಕರ, ಲಕ್ಷ್ಮಣ ಆರ್ ಎಸ್, ಹರೀಶ್ ಪೂಜಾರಿ ಕಾಶಿಮಠ, ದಿವಾಕರ ಶೆಟ್ಟಿ ಕಲ್ಲಗದ್ದೆ, ಉಪಸ್ಥಿರಿದ್ದರು.
