ಕಾಪು ತ್ಯಾಜ್ಯ ಘಟಕದಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ : ರೋಗ ಭೀತಿ ಆತಂಕದಲ್ಲಿ ಜನತೆ

ಕಾಪು ಪುರಸಭೆ ಘನತ್ಯಾಜ್ಯ ಘಟಕದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಪ್ಲಾಸ್ಟಿಕ್ ತ್ಯಾಜ್ಯ ದ ದುರ್ನಾತ ಪರಿಸರವೆಲ್ಲಾ ಪಸರಿಸಿದ್ದು ಜನ ರೋಗ ಭೀತಿಯ ಆತಂಕದಲ್ಲಿದ್ದಾರೆ.ಮೇಲ್ನೋಟಕ್ಕೆ ವಿದ್ಯುತ್ ಅವಘಢದಿಂದ ಬೆಂಕಿ ಹತ್ತಿಕೊಂಡಿರ ಬಹುದೆಂದು ಅಂದಾಜಿಸಲಾಗುತ್ತಿದೆ ಯಾದರೂ. ಮಾರಿಪೂಜೆಯ ಹಿನ್ನಲೆಯಲ್ಲಿ ಬಾರೀ ತ್ಯಾಜ್ಯಗಳು ಶೇಖರಣೆ ಗೊಳ್ಳುವ ಆತಂಕವಿದ್ದು, ಉದ್ದೇಶ ಪೂರ್ವಕವಾಗಿಯೇ ಯಾರೋ ಬೆಂಕಿ ಹಾಕಿದ್ದಾರೆಂಬ ಸಂಶಯ ಜನ ವ್ಯಕ್ತ ಪಡಿಸುತ್ತಿದ್ದಾರೆ.

ಬೆಂಕಿಯ ತೀವ್ರತೆ ಬಹುತೇಕ ತ್ಯಾಜ್ಯ ಕರಗಿ ಹೋಗಿದ್ದು ಪುರಸಭೆಯ ಪೌರ ಕಾರ್ಮಿಕರು ಬಹಳಷ್ಟು ಶ್ರಮವಹಿಸಿ ಬೆಂಕಿಯನ್ನು ನಿಯಂತ್ರಿಸಿದ್ದಾರೆ. ಅವರಿಗೆ ಕಾಪು ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ.
