HomeFresh Newsವಿಟ್ಲ : ಮನೆಯ ಮೇಲೆ ಬಿದ್ದ ಪಿಕಪ್ ವಾಹನ, ಮನೆಯೊಳಗೆ ಸಿಲುಕಿಕೊಂಡ ಮಹಿಳೆ

ವಿಟ್ಲ : ಮನೆಯ ಮೇಲೆ ಬಿದ್ದ ಪಿಕಪ್ ವಾಹನ, ಮನೆಯೊಳಗೆ ಸಿಲುಕಿಕೊಂಡ ಮಹಿಳೆ

ವಿಟ್ಲ: ಪರಿಯಲ್ತಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಪಿಕಪ್ ರಸ್ತೆಯಿಂದ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಳಗೆ ಮಹಿಳೆ ಸಿಲುಕಿ ಹಾಕಿಕೊಂಡಿದ್ದಾರೆ.

ಕೂರೇಲು ಮಧ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿದ್ದ ಮನೆಗೆ ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ಬಿದ್ದು ಮನೆ ಸಂಪೂರ್ಣ ಹಾನಿಯಾಗಿದೆ. ಮನೆಯ ಒಳಗೆ ಮಹಿಳೆ ಮಲಗಿದ್ದ ಸಂದರ್ಭ ಘಟನೆಯಾಗಿದ್ದು, ಗಂಭೀರ ಪರಿಸ್ಥಿಯಲಿದ್ದಾರೆ. ವಾಹನವನ್ನು ತೆರವು ಮಾಡದೆ ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಸ್ಥಳದಲ್ಲಿ ವಿಟ್ಲ ಪೆÇಲೀಸರು, ತುರ್ತು ಸೇವಾ ವಾಹನ ಬೀಡು ಬಿಟ್ಟಿದ್ದು, ಕ್ರೇನ್ ಬಳಸಿ ವಾಹನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments