Home Posts tagged #Karavali

ಬ್ರಹ್ಮಾವರದಲ್ಲಿ ಕಿಶೋರ ಯಕ್ಷಗಾನ ಸಂಭ್ರಮ-2023

ಬ್ರಹ್ಮಾವರ : ಯಕ್ಷ ಶಿಕ್ಷಣ ಟ್ರಸ್ಟ್ , ಪ್ರದರ್ಶನ ಸಂಘಟನಾ ಸಮಿತಿ ಬ್ರಹ್ಮಾವರ ವತಿಯಿಂದ 8 ದಿನಗಳ ಕಾಲ ನಡೆಯುವ ಕಿಶೋರ ಯಕ್ಷಗಾನ ಸಂಭ್ರಮ -2023 ಬ್ರಹ್ಮಾವರ ಬಂಟರ ಭವನದ ಬಳಿ ನಡೆಯಿತು. ನಾಡೋಜ ಡಾ.ಜಿ ಶಂಕರ್ ಉದ್ಘಾಟಿಸಿದರು. ಬ್ರಹ್ಮಾವರದಲ್ಲಿ 14 ಶಾಲೆಯಿಂದ ಗುರುಗಳಿಂದ ತರಬೇತಿ ಪಡೆದ 15 ಪ್ರಸಂಗ ಪ್ರದರ್ಶನ ನಡೆಯಲಿದೆ. ನಾನಾ ಪ್ರಸಾಧನ ಕಲೆಗಾರರಿಂದ ದೇವ,

ಕುಂದಾಪುರ: ಕಾರು-ಬೈಕ್ ನಡುವೆ ಅಪಘಾತ, ಬೈಕ್ ಸವಾರ ಮೃತ್ಯು

ಕುಂದಾಪುರ ತಾಲೂಕಿನ ಹೆಮ್ಮಾಡಿ ಹಾಲು ಡೈರಿ ಬಳಿ ಸಂಭವಿಸಿದ ಕಾರು ಮತ್ತು ಬೈಕ್ ನಡುವಿನ ಅಪಘಾತದಲ್ಲಿ ಜಯದುರ್ಗಾ ಬಸ್ ಚಾಲಕ ಮಾಬಲ ತೋಪ್ಲು ಅವರು ಸಾವನ್ನಪ್ಪಿದ್ದ ಘಟನೆ ನಡೆದಿದೆ. ಎಂದಿನಂತೆ ಬಸ್ ಡ್ರೈವರ್ ಕೆಲಸವನ್ನು ನಿರ್ವಹಿಸಿ ಬಸ್ ನ್ನು ನೂಜಾಡಿ ಸ್ಟಾಪ್ ನಲ್ಲಿ ನಿಲ್ಲಿಸಿ ಬೈಕ್ ನಿಂದ ಹೆಮ್ಮಾಡಿ ಯಿಂದ ತೋಪ್ಲುಗೆ ತೆರಳುತ್ತಿದ್ದ ಸಂದರ್ಭ ಹೆಮ್ಮಾಡಿ ಹಾಲು ಡೈರಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಯೂಟರ್ನ್ ತೆಗೆದು ಕೊಳ್ಳುತ್ತಿದ್ದ ಸಮಯದಲ್ಲಿ ಮುಳ್ಳಿಕಟ್ಟೆ

ಪಡುಬಿದ್ರಿ: ಆದ್ಯಾ ಫೌಂಡೇಷನ್ ವತಿಯಿಂದ ಉದ್ಯೋಗ ಮೇಳ

ನಿರಂತರ ಸಮಜೋಮುಖಿ ಕಾರ್ಯಗಳನ್ನೇ ತನ್ನ ಉಸಿರಾಗಿಸಿಕೊಂಡ ಪಡುಬಿದ್ರಿಯ ಆದ್ಯಾ ಫೌಂಡೇಷನ್ ವತಿಯಿಂದ ಎರಡು ದಿನಗಳ ಬೃಹತ್ ಉದ್ಯೋಗ ಮೇಳ ಪಡುಬಿದ್ರಿ ಪಾದೆಬೆಟ್ಟು ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಈ ಉದ್ಯೋಗ ಮೇಳದ ಉದ್ಘಾಟನೆಯನ್ನು ಸರಳ ಸಭಾ ಕಾರ್ಯಕ್ರಮದಲ್ಲಿ ಸ್ಥಳೀಯ ಪಾದೆಬೆಟ್ಟು ಸುಬ್ರಹ್ಮಣ್ಯ ದೇವಸ್ಥಾನ ಮುಕ್ತೇಸರರಾದ ಜೀತೇಂದ್ರ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ವಿವಿಧ ಉದ್ಯೋಗ ಆಕಾಂಕ್ಷೀ ಗಳಿಗಾಗಿ ರಾಕೇಶ್ ಅಜಿಲ ಸಾರಥ್ಯದ ಆದ್ಯಾ

ಕುಂದಾಪುರ: ಬಿಲ್ಲವ ಸಮುದಾಯದಲ್ಲಿ ಒಗ್ಗಟ್ಟಿಲ್ಲ: ರವಿಕುಮಾರ್ ಎಚ್. ಆರ್ ಕಳವಳ

ಕುಂದಾಪುರ: ಸಾಕಷ್ಟು ಬಲಿಷ್ಠವಾಗಿದ್ದ ಬಿಲ್ಲವ ಸಮಾಜ 26 ಉಪಪಂಗಡಗಳಾಗಿ ಹರಿದು ಹಂಚಿ ಹೋಗಿದೆ. ಎಲ್ಲರೂ ಒಗ್ಗೂಡಿದರೆ ನಾವು ಇಡೀ ರಾಜ್ಯವನ್ನೇ ಆಳಬಹುದು. ಆದರೆ ನಮ್ಮಲ್ಲಿ ಒಗ್ಗಟ್ಟಿಲ್ಲ ಎಂದು ಶ್ರೀ ಕ್ಷೇತ್ರ ಸಿಗಂಧೂರು ಚೌಡೇಶ್ವರಿ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎಚ್. ಆರ್ ಕಳವಳ ವ್ಯಕ್ತಪಡಿಸಿದರು. ನಗರದ ನಾರಾಯಣ ಗುರು ಸಭಾಭವನದಲ್ಲಿ ಜರುಗಿದ ಬಿಲ್ಲವ ಸಮಾಜ ಸೇವಾ ಸಂಘ (ರಿ) ಕುಂದಾಪುರ ಇದರ 31 ನೇ ವರ್ಷದ ವಿದ್ಯಾರ್ಥಿವೇತನ ವಿತರಣೆ ಮತ್ತು

ಕರಾವಳಿಯಲ್ಲಿ ಸಾಧಾರಣ ಮಳೆ

ದಕ್ಷಿಣ ಕನ್ನಡ ಮತ್ತು ಉಡುಪಿ ಭಾಗಗದ ಕೆಲವು ಕಡೆಗಳಲ್ಲಿ ಅಲಲ್ಲಿ ಸಾಧಾರಣ ಮಳೆಯಾಗಿದೆ. ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವಣವಿದ್ದು, ಮಾಧ್ಯಹ್ನಾದ ಸಮಯದಲ್ಲಿ ಮಳೆ ಸುರಿದಿದೆ. ಕರಾವಳಿಯಲ್ಲಿ ಹಿಂಗಾರು ಕ್ಷೀಣಿಸುತ್ತಿದ್ದು, ಮುಂದಿನ ಎರಡು ದಿನಗಳ ಕಾಲ ಜಿಲ್ಲೆಯ ಅಲಲ್ಲಿ ಮೋಡ ಮತ್ತು ಸಾಧಾರಣ ಮಳೆಯ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಸದ್ಯಕ್ಕೆ ಯಾವುದೇ ಅಲರ್ಟ್ ಘೋಷಿಸಿಲ್ಲ.

ಮುಂಡ್ಕೂರು: ಮನೆಗೆ ನುಗ್ಗಿ ಬರಿಗೈಯಲ್ಲಿ ವಾಪಸ್ಸಾದ ಕಳ್ಳರು..!!

ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಜಾರಿಗೆಕಟ್ಟೆಯ ಅಲಂಗಾರು ಗುಡ್ಡೆ ಎಂಬಲ್ಲಿ ಮನೆಯ ಬಾಗಿಲ ಚಿಲಕ ಮುರಿದು ಒಳ ನುಗ್ಗಿದ ಕಳ್ಳರು ಬರಿಗೈಯಲ್ಲೇ ವಾಪಾಸ್ಸಾಗಿದ್ದರೆ. ಅಲಂಗಾರು ಗುಡ್ಡೆಯ ಹೆಲೆನ್ ಸೆರಾವೊ ಎಂಬುವವರು ಮನೆಯಲ್ಲಿ ಇಲ್ಲದ ವೇಳೆ ಈ ಘಟನೆ ನಡೆದಿದ್ದು, ಇಂದು ಬೆಳಿಗ್ಗೆ ಮನೆಗೆ ಬಂದು ನೋಡುವಾಗ ಬಾಗಿಲು ತೆರೆದಿದ್ದು, ಒಳ ರೂಮಿನಲ್ಲಿದ್ದ ಕಪಾಟುಗಳನ್ನು ಕಳ್ಳರು ಜಾಲಾಡಿಸಿ ಹೋಗಿದ್ದಾರೆ. ಆದರೆ ಮನೆಯಲ್ಲಿ ನಗ-ನಗದು ಇಲ್ಲದ ಕಾರಣ ಬರಿಗೈಯಲ್ಲೇ

ಕಾರ್ಕಳ: ಬೈಕ್‍ಗೆ ಕಾರು ಢಿಕ್ಕಿ, ಬೈಕ್ ಸವಾರರಿಗೆ ಗಂಭೀರ ಗಾಯ

ಬೈಕ್‍ಗೆ ಕಾರು ಡಿಕ್ಕಿಯಾಗಿ ಬೈಕ್ ಸವಾರರು ಗಂಭೀರ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಮುಂಡ್ಕೂರು ಸಂಕಲ ಕರಿಯ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದ ಟೈಲ್ಸ್ ಕೆಲಸ ಮಾಡುವ ಕಾರ್ಮಿಕರಾದ ತೌಶಿಪ್ ಮತ್ತು ತನ್ವೀರ್ ಗಂಭೀರ ಗಾಯಗೊಂಡಿದ್ದು, ಅವರನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಿನ್ನಿಗೋಳಿ ಕಡೆಯಿಂದ ಮುಂಡ್ಕೂರು ಕಡೆ ಸಾಗುತ್ತಿದ್ದ ಕಾರು ಮುಂಡ್ಕೂರಿನಿಂದ ಸುರತ್ಕಲ್ ಕಡೆ ಸಾಗುತ್ತಿದ್ದ ಬೈಕಿಗೆ ವಿರುದ್ಧ ದಿಕ್ಕಿನಲ್ಲಿ

ಉಡುಪಿ: ಪ್ರೇತ ಆಹ್ವಾನೆಗೆ ಬೆಚ್ಚಿ ಬಿದ್ದ ಕಾರ್ಮಿಕರು..!

ಕಾರ್ಮಿಕನ ಮೈಮೇಲೆ ಪ್ರೇತಾತ್ಮದ ಆವೇಶ ಬಂದು ದಾಳಿ ನಡೆಸಿದಾಗ ಸಹೋದ್ಯೋಗಿಗಳ ಎದ್ನೋ ಬಿದ್ನೋ ಎಂದು ಓಡಿದ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಉದ್ಯಾವರದ ಪಿತ್ರೋಡಿಯಲ್ಲಿ ನಡೆದಿದೆ. ಕಾರ್ಮಿಕರು ದಿಕ್ಕಾಪಾಲಾಗಿ ಓಡಿದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿತ್ತಿದೆ. ಮೀನು ಕಟ್ಟಿಂಗ್ ಶೆಡ್‍ನಲ್ಲಿ ಉತ್ತರ ಭಾರತದ 10 ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಎಲ್ಲರೂ ಒಂದೇ ರೂಮಿನಲ್ಲಿ ನೆಲೆಸಿದ್ದರು. ಆದರೆ, ತಡರಾತ್ರಿ

ಲೋಕಸಭಾ ಅಭ್ಯರ್ಥಿ ಯಾರೇ ಆದರೂ ನನ್ನ ಬೆಂಬಲವಿದೆ : ಸಂಸದ ನಳಿನ್ ಕುಮಾರ್ ಕಟೀಲ್

ಬಂಟ್ವಾಳ: ಬಿಜೆಪಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ವತಿಯಿಂದ ರಾಜ್ಯ ಬಿಜೆಪಿ ನಿಕಟಪೂರ್ವ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಅವರಿಗೆ ಅಭಿನಂದನೆ ಸಮಾರಂಭ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಿತು. ಅಭಿನಂದನೆ ಸ್ವೀಕರಿಸಿ ನಳಿನ್ ಕುಮಾರ್ ಕಟೀಲು ಮಾತನಾಡಿ ನಾನು ಸಾಧನೆ ಮಾಡಿದೆನೆಂದು ಹೇಳುವುದಿಲ್ಲ. ರಾಜಕೀಯಕ್ಕೆ ಇಚ್ಚೆಯಿಂದ ಬಂದವನಲ್ಲ. ಸಂಘದ ಹಿರಿಯ ಸೂಚನೆಯಂತೆ ಸಂಸದನಾಗಿ ಜನಸೇವೆ ಮಾಡಿದ್ದೇನೆ. ಸಂಘದ ವಿಚಾರಧಾರೆಯನ್ನು ಒಪ್ಪಿಕೊಂಡು ರಾಷ್ಟ್ರದ

ಮಂಜೇಶ್ವರ: ರಸ್ತೆ ದುರಸ್ತಿಗಾಗಿ ಹಣ ಸಂಗ್ರಹಿಸುವ ಮೂಲಕ ವಿನೂತನ ಪ್ರತಿಭಟನೆ

ಮಂಜೇಶ್ವರ : ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ 6 ಹಾಗೂ 8 ವಾರ್ಡುಗಳಲ್ಲಿರುವ ಮಂಜೇಶ್ವರ ರಾಗಂ ಜಂಕ್ಷನ್‍ನಿಂದ ಸಿರಾಜುಲ್ ಹುದಾ ಶಾಲೆಯಲ್ಲಿಂದ ರಸ್ತೆ ಸಂಪೂರ್ಣ ಹದಗೆಟ್ಟಿದು,್ದ ಕಳೆದ 15 ವರ್ಷಗಳಿಂದ ಜನಪ್ರತಿನಿಧಿಗಳಾಗಲೀ ಅಧಿಕಾರಿಗಳಾಗಲೀ ಇತ್ತ ಕಡೆ ತಿರುಗಿಯೂ ನೋಡದೆ ಇರುವುದು ಭಾರೀ ಪ್ರತಿಭಟನೆಗೆ ಕಾರಣವಾಗಿದೆ. ಮಳೆ ಸ್ವಲ್ಪ ಸುರಿದರೆ ಸಾಕು.. ರಸ್ತೆ ಕೆಸರು ಗದ್ದೆಯಾಗಿ ಮಾರ್ಪಡುತ್ತದೆ. ವಾಹನ ಸವಾರರ ಜೀವನಕ್ಕೂ ಸಂಚಾಕಾರವಾಗುತ್ತಿದೆ. ಈ