ಮೂಡುಬಿದಿರೆ : ಇರುವೈಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೊರಿಮೇಲು ಎಂಬಲ್ಲಿ ಯುವಕನೋವ೯ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ.
ಪೊರಿಮೇಲು ಅಂಗನವಾಡಿ ಕೇಂದ್ರದ ಬಳಿಯ ನಾರಾಯಣ ಎಂಬವರ ಪುತ್ರ ದೀಪಕ್ (32) ಆತ್ಮಹತ್ಯೆ ಮಾಡಿಕೊಂಡ ಯುವಕ. ದೀಪಕ್ ಟೂರಿಸ್ಟ್ ವಾಹನಗಳಿಗೆ ಬದಲಿ ಚಾಲಕನಾಗಿ ದುಡಿಯುತ್ತಿದ್ದಾರೆನ್ನಲಾಗಿದೆ. ತಂದೆ- ತಾಯಿ ಕೂಲಿ ಕೆಲಸಕ್ಕೆ ಹೋಗಿದ್ದು ಈ ಸಂದಭ೯ದಲ್ಲಿ ಮನೆಯ ಹಿಂದುಗಡೆಯ ಬಾಗಿಲಿನ ಮೂಲಕ ಒಳಗೆ ಹೋಗಿ ಶೀಟ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ.
ನಾರಾಯಣ ಅವರಿಗೆ ದೀಪಕ್ ಓವ೯ನೇ ಪುತ್ರನಾಗಿದ್ದು ಇಬ್ಬರು ಪುತ್ರಿಯರಿದ್ದಾರೆ.ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೀಪಕ್ ಸ್ವಲ್ಪಮಟ್ಟಿನಲ್ಲಿ ಸಾಲ ಮಾಡಿಕೊಂಡಿದ್ದಾರೆನ್ನಲಾಗಿದೆ.

