Home Blog Full WidthPage 235

ಸಹಾಯಕ ಪ್ರಾಧ್ಯಾಪಕಿ ಗೀತಾ ಏ.ಜೆಗೆ ಪಿಎಚ್ ಡಿ ಪದವಿ

ಉಜಿರೆಯ ಎಸ್ ಡಿ ಎಂ ಕಾಲೇಜಿನ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಗೀತಾಏ.ಜೆ.ಇವರು ಮಂಡಿಸಿದ  “ಇನ್ಸ್ಟಿಟ್ಯೂಷನಲ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಆ್ಯಸ್ ಎ ಪಿಆರ್ ಟೂಲ್ ಇನ್ ಹೈಯರ್ಎಜುಕೇಷನಲ್ ಇನ್ಸ್ಟಿಟ್ಯೂಷನ್ಸ್: ಎ ಸ್ಟಡಿ ಆಫ್ ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಕುವೆಂಪುವಿಶ್ವವಿದ್ಯಾಲಯ ಡಾಕ್ಟರೇಟ್

 ಬಲಿಷ್ಠ ಸಮಾಜ ನಿರ್ಮಾಣದಲ್ಲಿ ಮಹಿಳಾ ಸಂಘಟನೆಗಳ ಪಾತ್ರಮುಖ್ಯ : ಶ್ರೀಮತಿ ಸೋನಿಯಾ ಯಶೋವರ್ಮ

ಉಜಿರೆ :ಬಲಿಷ್ಠ ಸಮಾಜದ ನಿರ್ಮಾಣದಲ್ಲಿ ಮಹಿಳಾ ಸಂಘಟನೆಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಉಜಿರೆ ಧೀಮತಿ ಜೈನ ಮಹಿಳಾ ಸಮಾಜದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ದಲ್ಲಿ ಧೀಮತಿ ಮಹಿಳಾಸಮಾಜದ ಗೌರವಾಧ್ಯಕ್ಷರಾದ ಸೋನಿಯಾ ಯಶೋವರ್ಮ ಅಭಿಪ್ರಾಯಪಟ್ಟರು. ಎಲ್ಲರೂ ಸಂಘದ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡರೆ ಸಮುದಾಯವನ್ನು ಬಲಗೊಳಿಸಬಹುದು ಎಂದು ಅಭಿಪ್ರಾಯಪಟ್ಟರು  ಸಂಘದ ನಿಕಟಪೂರ್ವ ಅಧ್ಯಕ್ಷರಾದ ರೇಖಾ .ಡಿ.ಚೌಟ ಸಂಘದ ಕಾರ್ಯಚಟುವಟಿಕೆಗಳಿಗೆ

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಇ-ಲಿಟ್ ಫೆಸ್ಟ್

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿರುವ ವಿಮರ್ಶಕರ ಪೈಕಿ ಹೆಚ್ಚಿನವರು ಇಂಗ್ಲಿಷ್ ಭಾಷೆಯಿಂದ ಬಂದವರು, ಇವರೆಲ್ಲಾ ಕನ್ನಡ ಸಾಹಿತ್ಯ ಲೋಕಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಎಂದು ಎಸ್. ಡಿ.ಎಂ. ಪದವಿ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾದ್ಯಾಪಕÀ ಡಾ. ರಾಜಶೇಖರ ಹಳೆಮನೆ ಅಭಿಪ್ರಾಯ ವ್ಯಕ್ತಪಡಿಸಿದರು. ಉಜಿರೆ ಶ್ರೀ. ಧ. ಮಂ. ಸ್ನಾತಕೊತ್ತರ ಕೇಂದ್ರದ ಇಂಗ್ಲಿಷ್ ವಿಭಾಗದಿಂದ ಆಯೋಜಿಸಿದ್ದ ಇ-ಲಿಟ್ ಫೆಸ್ಟ್‍ನ ಮುಖ್ಯ ಅತಿಥಿಗಳಾಗಿ ಅವರು

ಎಸ್.ಡಿ.ಎಂ ವಿಜ್ಞಾನ ವಿದ್ಯಾರ್ಥಿಗಳು ಐಡಿಇಎ ಪ್ರಯೋಗಾಲಯಕ್ಕೆ ಭೇಟಿ

ಉಜಿರೆ: ಶ್ರೀ ಧ.ಮಂ. ಕಾಲೇಜಿನ ವಿಜ್ಞಾನ ವಿಭಾಗದ ಇಪ್ಪತ್ತಾರು ವಿದ್ಯಾರ್ಥಿಗಳು ವಾಮಂಜೂರು ಸೈಂಟ್ ಜೋಸೆಫ್ ತಾಂತ್ರಿಕ ಕಾಲೇಜಿನ ಐಡಿಇಎ ಪ್ರಯೋಗಾಲಯಕ್ಕೆ ಇತ್ತೀಚಿಗೆ ಭೇಟಿನೀಡಿದರು. ವಿದ್ಯಾರ್ಥಿಗಳಿಗೆ 3ಡಿ ಪ್ರಿಂಟಿಂಗ್, ಲೇಝರ್ ಡಿಸೈನ್ ಪ್ರಿಂಟಿಂಗ್, ಪಿಸಿಬಿ ಪ್ರಿಂಟಿಂಗ್, ವುಡ್ ಡಿಸೈನ್ ಪ್ರಿಂಟಿಂಗ್ ಮುಂತಾದ ವಿಷಯಗಳ ಬಗ್ಗೆ ವಿವರಣೆ ನೀಡಲಾಯಿತು. ಸ್ವತಃ ವಿದ್ಯಾರ್ಥಿಗಳೇ ಪ್ರಯೋಗಗಳನ್ನು ಮಾಡುವ ಮೂಲಕ ವೃತ್ತಿ ಕೌಶಲ್ಯಗಳನ್ನು ಹೆಚ್ಚಿಸಿಕೊಂಡರು. ಇಂತಹ

‘ಸ್ವಯಂ ಅಧ್ಯಯನದಿಂದ ಜೀವನದಲ್ಲಿ ಯಶಸ್ಸು’

ಉಜಿರೆ: ವಿದ್ಯಾರ್ಥಿಗಳು ಗುರು ಕಲಿಸಿಕೊಟ್ಟದ್ದನಷ್ಟೇ ಕಲಿಯುವುದಕ್ಕೆ ಸೀಮಿತರಾಗದೆ, ಸ್ವಯಂ ಅಧ್ಯಯನವನ್ನು ನಡೆಸುವುದರಿಂದ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯ ಎಂದು ಎಸ್.ಕೆ.ಡಿ.ಆರ್.ಡಿ.ಪಿ.ಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ. ಎಲ್ ಹೆಚ್ ಮಂಜುನಾಥ್ ನುಡಿದರು.ಶ್ರೀ ಧ. ಮಂ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ಶ್ರೀ ಧ. ಮಂ. ಕಾಲೇಜಿನ ಬಿ.ವೊಕ್ ವಿಭಾಗವು ಆಯೋಜಿಸಿದ್ದ ಎರಡು ದಿನಗಳ ರಾಜ್ಯ ಮಟ್ಟದ ಎಜು ಕಲ್ಚರಲ್ ಫೆಸ್ಟ್ ಉದ್ಘಾಟಿಸಿ

ಜಲ್ಲಿಗುಡ್ಡೆ ಜಯನಗರದ ಹದಗೆಟ್ಟ ರಸ್ತೆಯ ಕೂಡಲೇ ಕಾಂಕ್ರಿಟೀಕರಣಕ್ಕೆ ಒತ್ತಾಯಿಸಿ ಮನವಿ

ಮಂಗಳೂರು ನಗರ ಹೊರವಲಯ ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಬಜಾಲ್ ವಾರ್ಡಿನ ಜಲ್ಲಿಗುಡ್ಡೆಯಿಂದ ಜಯನಗರ ಪ್ರದೇಶಕ್ಕೆ ಸಂಪರ್ಕಿಸುವ ಮುಖ್ಯರಸ್ತೆಯು ಸಂಪೂರ್ಣವಾಗಿ ಹದಗೆಟ್ಟು ಸ್ಥಳೀಯ ನಿವಾಸಿಗಳ ಸುಗಮ ಸಂಚಾರಕ್ಕೆ ಬಹಳ ಅಡಚಣೆಯುಂಟಾಗಿದೆ. ರಸ್ತೆಯುದ್ದಕ್ಕೂ ಇರುವ ಗುಂಡಿಗಳಿಗೆ ಮಣ್ಣು ಮತ್ತು ಜಲ್ಲಿ ಮಿಶ್ರಣ ಮಾಡಿದ ಪರಿಣಾಮ ರಸ್ತೆಯಲ್ಲೆಲ್ಲ ಕೆಸರುಮಯವಾಗಿದೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಉರುಳಿ ಬೀಳುವಂತಹ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದ್ದು

ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗದಿನಾಚರಣೆ

ವಿಟ್ಲ: ಜೀವ-ದೇವನ ಸಂಬಂಧ ಯೋಗದಲ್ಲಿದೆ. ಬದುಕನ್ನು ಹೇಗೆ ರೂಪಿಸಬೇಕು ಎನ್ನುವುದನ್ನು ನಾವು ತಿಳಿದುಕೊಳ್ಳುವುದುಅಗತ್ಯವಿದೆ. ಶಿಸ್ತು ಸ್ವಚ್ಛತೆ ಇದ್ದಲ್ಲಿ ಸದಾಚಾರ ಸಂಪನ್ನತೆಯಾಗುತ್ತದೆ. ಮನಸ್ಸಿನ ಸ್ವಾಸ್ಥ್ಯ ಕ್ಕೆ ಯೋಗ ಅಗತ್ಯ. ಬಾಲವಿಕಾಸ ವಿದ್ಯಾಸಂಸ್ಥೆ ವ್ಯಕ್ತಿ ವಿಕಾಸದ ಜೊತೆಗೆ ರಾಷ್ಟ್ರ ವಿಕಾಸಕ್ಕೆ ನಾಂದಿಯಾಗಲಿದೆ. ಸತ್ಪ್ರಜೆ ಎನ್ನುವ ನಾಣ್ಯ ಚಲಾವಣೆ ಯಾಗಲು ಪೋಷಕರು ಹಾಗೂ ಶಿಕ್ಷಕರು ಜೊತೆಗಿರಬೇಕು ಎಂದು ಒಡಿಯೂರು ಶ್ರೀಗುರುದೇವದತ್ತಸಂಸ್ಥಾನಜ

ಉಪ್ಪಿನಂಗಡಿ ವಿದ್ಯಾರ್ಥಿ ಚಲಾಯಿಸುತ್ತಿದ್ದ ಬೈಕ್ ಡಿಕ್ಕಿ- ಪಾದಚಾರಿ ಸಾವು.

ಉಪ್ಪಿನಂಗಡಿ : ಪುತ್ತೂರಿನ ಕಾಲೇಜೊಂದರ ವಿದ್ಯಾರ್ಥಿ ಚಲಾಯಿಸುತಿದ್ದ ಬೈಕ್ ಅಪಘಾತಗೊಂಡು ಪಾದಚಾರಿಯೋರ್ವರು ಮೃತಪಟ್ಟ ಘಟನೆ ಉಪ್ಪಿನಂಗಡಿಯಲ್ಲಿ ಜೂ.22 ರಂದು ನಡೆದಿದೆ. ಉಪ್ಪಿನಂಗಡಿ ಬೆಳ್ತಂಗಡಿ ರಸ್ತೆಯ ಎಚ್ಎಮ್ ಆಡಿಟೋರಿಯಂ ಸಮೀಪ ಅಪಘಾತ ಸಂಭವಿಸಿದೆ. ಪುತ್ತೂರಿನ ನೆಹರುನಗರ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಬೆಳ್ತಂಗಡಿಯ ಉಳಿ ಗ್ರಾಮದ ನಿತಿನ್ ಬೆಳಗ್ಗೆ ಕಾಲೇಜು ಬರುವಾಗ ಬೈಕ್ ಪಾದಚಾರಿ ಇಳಂತಿಲದ ಪೆರ್ನಾಂಡೀಸ್ (64 ವ.) ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ

Bengaluru : ಇಂದಿರಾ ಕ್ಯಾಂಟೀನ್‍ನಲ್ಲಿ `ನಂದಿನಿ’ ಉತ್ಪನ್ನಗಳ ಮಾರಾಟಕ್ಕೆ ಚಿಂತನೆ

ಬೆಂಗಳೂರು: ರಾಜ್ಯಾದ್ಯಾಂತ ಇರುವ ಇಂದಿರಾ ಕ್ಯಾಂಟೀನ್‍ಗಳಲ್ಲಿ ನಂದಿನಿ' ಉತ್ಪನ್ನಗಳನ್ನು ಮಾರಾಟ ಮಾಡಲು ರಾಜ್ಯ ಸರಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ನಂದಿನಿ ಉತ್ಪನ್ನಗಳ ಮಾರುಕಟ್ಟೆಯನ್ನು ವಿಸ್ತರಣೆ ಮಾಡಲು ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ ಯೋಜನೆ ರೂಪಿಸಿದ್ದು ಮುಂದಿನ ದಿನಗಳಲ್ಲಿ ಇಂದಿರಾ ಕ್ಯಾಂಟೀನ್‍ಗಳಲ್ಲಿನಂದಿನಿ’ ಉತ್ಪನ್ನಗಳು ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಕೆಎಂಎಫ್ ನೂತನ ಅಧ್ಯಕ್ಷ ಭೀಮಾ ನಾಯ್ಕ್

Kadaba :ಲಂಚ ಪಡೆಯುತ್ತಿದ್ದಾಗಲೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪಿಡಿಓ

ಕಡಬ : ಕಳೆದ ಆರು ವರ್ಷಗಳಿಂದ ಖಾತೆ ಬದಲಾವಣೆಗೆ ಅರ್ಜಿದಾರನ್ನು ಸತಾಯಿಸುತ್ತಿದ್ದ ಪಿಡಿಓ ಇಂದು ಲಂಚ ಪಡೆಯುತ್ತಿದ್ದಾಗ ಲೋಕಾಯಯಕ್ತ ಬಲೆಗೆ ಬಿದ್ದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮ ಪಂಚಾಯತ್ ಪಿಡಿಓ ಮಹೇಶ್ ಎಂಬಾತ ಅರ್ಜಿದಾರರಿಂದ ಖಾತೆ ಬದಲಾವಣೆಗೆ 20 ಸಾವಿರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಅರ್ಜಿದಾರರು ನೊಂದು ನೇರ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಲಂಚದ 20 ಸಾವಿರ ರೂಪಾಯಿ ಹಣ