Home Blog Full WidthPage 236

ಪಶ್ಚಿಮ ಘಟ್ಟ, ಮಾಳ ಪರಿಸರದಲ್ಲಿ ಅಧಿಕ ಮಳೆ – ನೀರಿನ ಹಾಹಾಕಾರಕ್ಕೆ ಸ್ವಲ್ಪ ಮಟ್ಟಿನ ಬ್ರೇಕ್

ಕಾರ್ಕಳ ತಾಲೂಕಿನಲ್ಲಿ ಕಳೆದೆರಡು ದಿನ ಸಂಜೆ ಸುಮಾರು ಒಂದು ತಾಸಿಗೂ ಅಧಿಕ ಹೊತ್ತು ಮಳೆಯಾಗಿದ್ದು ಪಶ್ಚಿಮ ಘಟ್ಟದ ತಪ್ಪಲಿನ ಮಾಳ ಪರಿಸರ ಸಹಿತ ಆಸುಪಾಸಿನಲ್ಲಿ ಅಧಿಕ ಮಳೆಯಾದ ಪರಿಣಾಮ ಮುಂಡ್ಲಿ ಜಲಾಶಯದಲ್ಲಿ ನೀರಿನ ಮಟ್ಟ ಸ್ವಲ್ಪ ಏರಿಕೆ ಕಂಡು ಬಂದಿದೆ. ನೀರಿನ ಒಳಹರಿವು ತುಸು ಹೆಚ್ಚಾಗಿದ್ದು ದೊಡ್ಡ ಪ್ರಮಾಣದಲ್ಲಿ ಮಳೆಯಾಗದ ಪರಿಣಾಮ ನಿರೀಕ್ಷಿತ ನೀರಿನ ಮಟ್ಟ

Karnataka : 65 ವರ್ಷ ಮೇಲ್ಪಟ್ಟ ಹಿರಿಯರಿಗೆ ನೇರ ದೇವರ ದರ್ಶನಕ್ಕೆ ಅವಕಾಶ

ರಾಜ್ಯದ ಎಲ್ಲ ಮುಜರಾಯಿ ಇಲಾಖೆಗೊಳಪಡುವ ದೇವಸ್ಥಾನಗಳಲ್ಲಿ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಯಾವುದೇ ಸರತಿ ಸಾಲಿನಲ್ಲಿ ನಿಲ್ಲಿಸದೇ ನೇರವಾಗಿ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

Kadaba: ಚಿನ್ನದಂಗಡಿ ಉದ್ಘಾಟನೆಯ ತಯಾರಿಯಲ್ಲಿದ್ದ ಯುವಕನ ಮೃತದೇಹ ಪತ್ತೆ

ಕಡಬ: ತನ್ನದೇ ಚಿನ್ನದ ಅಂಗಡಿ ಉದ್ಘಾಟನೆಯ ತಯಾರಿಯಲಿದ್ದ ಯುವಕನೋರ್ವನ ಮೃತದೇಹ ಅಪಘಾತದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಜೂ. 22ರ ಗುರುವಾರ ಕಂಡುಬಂದಿದೆ.ಕಡಬ ನಿವಾಸಿ ದಯಾನಂದ ಆಚಾರ್ಯ ಅವರ ಪುತ್ರ ನಾಗಪ್ರಸಾದ್ ಮೃತಪಟ್ಟ ಯುವಕ. ಮರ್ಧಾಳದ ಮಸೀದಿ ಬಿಲ್ಡಿಂಗ್ ನಲ್ಲಿ ಇಂದು (ಜೂನ್ 22) ಐಶ್ವರ್ಯ ಗೋಲ್ಡ್ ಹೆಸರಿನ ಚಿನ್ನದಂಗಡಿ ಶುಭಾರಂಭಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ತಯಾರಿ ನಡೆಸಿಕೊಂಡಿದ್ದರು. ಆದರೆ ಇಂದು ಬೆಳಿಗ್ಗೆ ಸಕಲೇಶಪುರ ಠಾಣಾ ವ್ಯಾಪ್ತಿಯ ಗುಂಡ್ಯ

ಬಿಲ್ಲವಾಸ್ ಕತಾರ್ ವತಿಯಿಂದ ಬಿಲ್ಲವೋತ್ಸವ -2023

ಬಿಲ್ಲವಾಸ್ ಕತಾರ್ ವತಿಯಿಂದ ಬಿಲ್ಲವೋತ್ಸವ -2023 ಸಮಾರಂಭವು ಅಧ್ಯಕ್ಷ ರಘುನಾಥ್ ಅಂಚನ್ ಸಾರಥ್ಯದಲ್ಲಿ ಡಿ.ಪಿ. ಎಸ್. ಅಲ್-ವಕ್ರ ಸಭಾಂಗಣದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಸರ್ವಾಲಂಕೃತ ಭೂಷಿತರಾದ ಮಂಗಳಾಂಗಿಯರಿಂದ ಆರತಿಯನ್ನೆತ್ತಿ ಸ್ವಾಗತ, ಸಮವಸ್ತ್ರಧಾರಿಗಳಾದ ಸದಸ್ಯರು, ಮಂಗಳ ವಾದ್ಯಗಳ ದನಿ, ಚೆಂಡೆ ತಾಳಗಳ ಅಬ್ಬರ, ಕೋಟಿ-ಚೆನ್ನಯ” ಪ್ರವೇಶದ್ವಾರ, ಅಣಿ, ಸಿರಿ, ತುಳಸಿಕಟ್ಟೆ ಮೊದಲಾದವುಗಳು ತುಳುನಾಡಿನ ಸಂಸ್ಕ್ರತಿಯನ್ನು ಪ್ರತಿಬಿಂಬಿಸುತ್ತಾ

ಗುರುಪುರ ಅಪಘಾತದಲ್ಲಿ ಸ್ಥಳದಲ್ಲೇ ವ್ಯಕ್ತಿ ಮೃತ್ಯು

ಕರಿಯಂಗಳ ನಿವಾಸಿ ಸಂತೋಷ್ ಇಂದು ಮುಂಜಾನೆ ವಾಮಂಜೂರು ಕಡೆ ಕೆಲಸಕ್ಕೆಂದು ತೆರಳುತ್ತಿದ್ದ ವೇಳೆ ಗುರುಪುರದ ಬಳಿ ಖಾಸಗಿ ಬಸ್ಸಿನ ಅತೀ ವೇಗದ ಚಾಲನೆಯಿಂದ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ

ರಂಗಸಂಗಾತಿ ಪ್ರತಿಷ್ಟಾನದ ಹದಿನೈದನೇ ವಾರ್ಷಿಕೋತ್ಸವ ಮತ್ತು ರಂಗಭಾಸ್ಕರ-2023 ಕಾರ್ಯಕ್ರಮ

ಮಂಗಳೂರು ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಹದಿನೈದನೇ ವಾರ್ಷಿಕೋತ್ಸವ, ರಂಗಭಾಸ್ಕರ-2023 ಪ್ರಶಸ್ತಿ ಪ್ರದಾನ ಹಾಗೂ ರಂಗ ಗೌರವ ಕಾರ್ಯಕ್ರಮವುಜೂನ್ 29 ಮತ್ತು 30 ರಂದು ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದ ಅಗರಿ ರಘುರಾಮ ವೇದಿಕೆಯಲ್ಲಿ ನಡೆಯಲಿದೆ. ಶ್ರೀ ಗುರುಲೀಲಾ ಮೋಟರ್ಸ್ ಡ್ರೈವಿಂಗ್ ಸ್ಕೂಲ್ ಮಂಗಳೂರು ಮತ್ತು ಶ್ರೀ ಶಾರದಾ ಸೇವಾ ಸಮಿತಿ ಸಹಯೋಗದೊಂದಿಗೆ ಎರಡು ದಿನದ ಕಾರ್ಯಕ್ರಮ ಆಯೋಜಿಸಲಾಗಿದೆ.ಜೂನ್ 29ರಂದು ಸಂಜೆ ಶ್ರೀ ಗುರುಲೀಲಾ ಮೋಟರ್ಸ್

ಜಲ್ಲಿಗುಡ್ಡೆ ಜಯನಗರದ ಹದಗೆಟ್ಟ ರಸ್ತೆ ಕಾಂಕ್ರಿಟೀಕರಣಕ್ಕೆ CPIM ಒತ್ತಾಯ

ಮಂಗಳೂರು ನಗರ ಹೊರವಲಯ ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಬಜಾಲ್ ವಾರ್ಡಿನ ಜಲ್ಲಿಗುಡ್ಡೆಯ ಮುಖ್ಯರಸ್ತೆಯಿಂದ ಹಿಡಿದು ಒಳರಸ್ತೆಗಳು ಸಂಪೂರ್ಣವಾಗಿ ಕೆಟ್ಟು ಸ್ಥಳೀಯ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷದ ಮೇಲು ಕೀಳಾಟದಲ್ಲಿ ಸ್ಥಳೀಯ ನಿವಾಸಿಗಳು ದಿನನಿತ್ಯ ಸಮಸ್ಯೆಯನ್ನು ಅನುಭವಿಸುವಂತಾಗಿದೆ . ಆದ್ದರಿಂದ ಪಾಲಿಕೆ ಆಡಳಿತ ಈ ಕೂಡಲೇ ಸಂಪೂರ್ಣವಾಗಿ ಹದಗೆಟ್ಟ ಜಲ್ಲಿಗುಡ್ಡೆ ಜಯನಗರದ ರಸ್ತೆಯನ್ನು

ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯ ಅಧ್ಯೆಕ್ಷೆಯಾಗಿ ಭವ್ಯಾ ಎ ಶೆಟ್ಟಿ ಆಯ್ಕೆ

ಸುರತ್ಕಲ್ :ಬಂಟರ ಸಂಘ ಸುರತ್ಕಲ್ ಮಹಿಳಾ ವೇದಿಕೆಯ ಅಧ್ಯೆಕ್ಷೆಯಾಗಿ ಭವ್ಯಾ ಎ ಶೆಟ್ಟಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಬಂಟರ ಭವನದಲ್ಲಿ ನಡೆದ ಮಹಿಳಾ ವೇದಿಕೆಯ ಸಭೆಯಲ್ಲಿ ನೂತನ ಪದಾಧಿಕಾರಿಗಳ ನೇಮಕ ನಡೆಯಿತು. ಅಧ್ಯಕ್ಷರಾಗಿ ಭವ್ಯಾ ಎ ಶೆಟ್ಟಿ, ಉಪಾಧ್ಯಕ್ಷರಾಗಿ ಸರೋಜ ಟಿ ಶೆಟ್ಟಿ, ಕಾರ್ಯದರ್ಶಿಯಾಗಿ ಸುಜಾತ ಶೆಟ್ಟಿ ಕೃಷ್ಣಾಪುರ, ಜೊತೆ ಕಾರ್ಯದರ್ಶಿಯಾಗಿ ವಜ್ರಾಕ್ಷಿ ಶೆಟ್ಟಿ, ಕೋಶಾಧಿಕಾರಿಯಾಗಿ ಜ್ಯೋತಿ ಪಿ ಶೆಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ನಾಗಲತಾ

ಡೆತ್ ನೋಟು ಬರೆದಿಟ್ಟು ಯುವಕ ನೇಣು ಬಿಗಿದು ಆತ್ಮಹತ್ಯೆ

ಉಳ್ಳಾಲ:ಯುವಕನೋರ್ವ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದು ಆತ್ಮ ಹತ್ಯೆಗೈದ ಘಟನೆ ತೊಕ್ಕೊಟ್ಟು ಸಮೀಪದ ಕಾಪಿಕಾಡು,ಸತ್ಯನಾರಾಯಣ ಕಂಪೌಂಡ್ ನಲ್ಲಿ ನಡೆದಿದೆ.ಕಾಪಿಕಾಡು,ಸತ್ಯನಾರಾಯಣ ಕಂಪೌಂಡ್ ನಿವಾಸಿ ನಿತಿನ್ ಪೂಜಾರಿ(36)ಆತ್ಮ‌ ಹತ್ಯೆಗೈದ ಯುವಕ.ನಿತಿನ್. ಮನೆಯ ಕೋಣೆಯೊಳಗೆ ಸೇರಿದ್ದನೆನ್ನಲಾಗಿದೆ.ನೆರೆಯ ಮನೆಯಲ್ಲಿ ಬೀಡಿ ಕಟ್ಟುತ್ತಿದ್ದ ಆತನ ತಾಯಿ ಬಂದು ಕೋಣೆಯ ಬಾಗಿಲು ಬಡಿದಿದ್ದು ಬಾಗಿಲ ಎಡೆಯಿಂದ ನೋಡಿದಾಗ ಮಗ ಫ್ಯಾನಿಗೆ ನೇಣು ಬಿಗಿದ ವಿಚಾರ ತಿಳಿದಿದೆ. ಮೃತ

ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರಿಂದ ವಿವಿಧ ಯೋಗಾಸನದ ಭಂಗಿಗಳು

ಉಡುಪಿ : 9 ವರ್ಷಗಳ ಹಿಂದೆ ಜೂನ್ 21 ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ್ದರು. ಇಂದು ದೇಶ ವಿದೇಶದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜನ ಆಚರಿಸುತ್ತಿದ್ದಾರೆ. ಉಡುಪಿ ಜಿಲ್ಲೆಯ ಪೇಜಾವರ ಮಠಾಧೀಶರಾದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರು ಸ್ವತಃ ಯೋಗ ಪಟು. ತನ್ನ ದೈನಂದಿನ ಚಟುವಟಿಕೆಗಳ ನಡುವೆ ಸಮಯ ಸಿಕ್ಕಷ್ಟು ಕಾಲ ಶ್ರೀಗಳು ಯೋಗಾಭ್ಯಾಸ ಮಾಡುತ್ತಾರೆ. ತಮಿಳುನಾಡಿನ ಚೆನ್ನೈ ಪ್ರವಾಸದಲ್ಲಿರುವ ಪೇಜಾವರ