ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಧ್ವಜಾರೋಹಣ ಹಾಗೂ ಮಹಾತ್ಮ ಗಾಂಧಿ ಅವರ 75ನೇ ಪುಣ್ಯಸ್ಮರಣೆ

ಅಖಿಲ ಭಾರತ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಆರಂಭಿಸಿದ ಭಾರತ್ ಜೋಡೋ ಯಾತ್ರೆ ಸೋಮವಾರ ಕಾಶ್ಮೀರದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡ ಹಿನ್ನೆಲೆಯಲ್ಲಿ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಧ್ವಜಾರೋಹಣ ಹಾಗೂ ಮಹಾತ್ಮ ಗಾಂಧಿ ಅವರ 75ನೇ ಪುಣ್ಯಸ್ಮರಣೆ ಜರಗಿತು.

ಧ್ವಜಾರೋಹಣ ನೆರವೇರಿಸಿ ಬಳಿಕ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಭಾರತ್ ಜೋಡೊ ಯಾತ್ರೆ 2ನೇ ಸ್ವಾತಂತ್ರ್ಯ ಸಂಗ್ರಾಮವಾಗಿದ್ದು, ಅಂದು ಮಹಾತ್ಮ ಗಾಂಧಿ ಅವರು ಬೇರೆ ಬೇರೆ ಪ್ರಾಂತ್ಯಗಳಾಗಿದ್ದ ದೇಶವನ್ನು ಒಟ್ಟುಗೂಡಿಸಿದರು. ಇಂದು ರಾಹುಲ್ ಗಾಂಧಿ ಅವರು ಭಾರತ್ ಜೋಡೊ ಯಾತ್ರೆಯ ಮುಖಾಂತರ ಭಾರತದ ಜನರ ಹೃದಯವನ್ನು ಬೆಸೆದರು. ಪರಸ್ಪರ ಪ್ರೀತಿ ಹಂಚಿದರು. ಈ ಎರಡು ಘಟನೆಗಳು ಐತಿಹಾಸಿಕವಾಗಿದೆ. ಇಂದು ಭಾರತ್ ಜೋಡೊ ಯಾತ್ರೆಯು ಅಭೂತಪೂರ್ವಕವಾಗಿ ಕಾಶ್ಮೀರದಲ್ಲಿ ಸಂಪನ್ನಗೊಂಡಿದೆ. ಭಾರತದ ಜನರ ಮನಸ್ಸುಗಳನ್ನು ಜೋಡಿಸುವ ಈ ಮಹತ್ಕಾರ್ಯದಲ್ಲಿ ನಾಡಿನ ಜನರು ಕೈಜೋಡಿಸಬೇಕು ಎಂದು ಕರೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಮಹಾತ್ಮ ಗಾಂಧಿ ಅವರು 1915ರಲ್ಲಿ ಭಾರತಕ್ಕೆ ಮರಳಿದ ಸಂದರ್ಭ ಭಾರತ ಒಂದಾಗಿರಲಿಲ್ಲ. ಬಳಿಕ ಅವರು ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರಾದ ಬಳಿಕ ಭಾರತವನ್ನು ಒಂದಾಗಿಸಿದ ಮಹಾನ್ ನಾಯಕ. ಬ್ರಿಟಿಷರು ಭಾರತವನ್ನು ಒಡೆದು ಆಡಳಿತ ನಡೆಸಲು ಪ್ರಯತ್ನಪಟ್ಟರು. ಈಗ ಬಿಜೆಪಿ ಕಾಂಗ್ರೆಸ್ ಅನ್ನು ಒಡೆಯಬೇಕೆಂದು ಮತ್ತೆ ಭಾರತವನ್ನು ಒಡೆಯಲು ಹೊರಟಿದ್ದು, ಭಾರತೀಯರ ಒಂದಾದ ಮನಸ್ಸುಗಳನ್ನು ಧರ್ಮ-ಜಾತಿಗಳ ಮಧ್ಯೆ ವಿಷಬೀಜವನ್ನು ಬಿತ್ತಿ ಆಡಳಿತ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಮತ್ತೊಮ್ಮೆ ಭಾರತವನ್ನು ಒಗ್ಗೂಡಿಸಲು ಪಕ್ಷಾತೀತವಾಗಿ ದೇಶದ ಜನರನ್ನು ಒಗ್ಗೂಡಿಸಿ ಯಶಸ್ವಿ ಯಾತ್ರೆ ನಡೆಸಿದ್ದಾರೆ ಎಂದು ಹೇಳಿದರು.

ಸಭೆಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕ ಜೆ.ಆರ್.ಲೋಬೊ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಮತ ಗಟ್ಟಿ ಮಾತನಾಡಿದರು. ಶಾಸಕ ಯು.ಟಿ ಖಾದರ್, ಕೆಪಿಸಿಸಿ ಸದಸ್ಯೆ ಎಸ್.ಅಪ್ಪಿ, ಮುಂಚೂಣಿ ಘಟಕದ ಜಿಲ್ಲಾಧ್ಯಕ್ಷರಾದ ಲುಕ್ಮಾನ್ ಬಂಟ್ವಾಳ್, ಶಾಲೆಟ್ ಪಿಂಟೊ, ವಿಶ್ವಾಸ್ ಕುಮಾರ್ ದಾಸ್, ಲಾರೆನ್ಸ್ ಡಿಸೋಜಾ, ಶಾಹುಲ್ ಹಮೀದ್, ಮ.ನ.ಪಾ ವಿಪಕ್ಷ ನಾಯಕ ನವೀನ್ ಡಿಸೋಜಾ, ಮಾಜಿ ಮೇಯರಾದ ಶಶಿಧರ್ ಹೆಗ್ಡೆ, ಕವಿತಾ ಸನಿಲ್, ಜೆಸಿಂತಾ ವಿಜಯ್ ಆಲ್ಫ್ರೆಡ್, ನಗರ ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಕಾರ್ಪೊರೇಟರ್ ಗಳಾದ ಅಬ್ದುಲ್ ರವೂಫ್,

ಎ.ಸಿ.ವಿನಯರಾಜ್, ಪ್ರವೀಣ್ ಚಂದ್ರ ಆಳ್ವ, ಸಂಶುದ್ದೀನ್ ಕುದ್ರೋಳಿ, ಕೆ.ಇ. ಅಶ್ರಫ್, ಝೀನತ್ ಶಂಸುದ್ದೀನ್ ಬಂದರ್, ಸಂತೋಷ್ ಕುಮಾರ್ ಶೆಟ್ಟಿ, ಪದ್ಮನಾಮ ಅಮೀನ್, ನೀರಜ್ ಚಂದ್ರಪಾಲ್, ಶುಭೋದಯ ಆಳ್ವ, ಎಂ.ಜಿ.ಹೆಗ್ಡೆ, ವಿಶ್ವನಾಥ ಪಕ್ಕಲಡ್ಕ, ಪ್ರಕಾಶ್ ಆಲ್ವಿನ್, ಗೀತಾ ಅತ್ತಾವರ, ಎಂ.ಜಿ. ಹೆಗ್ಡೆ, ಶಶಿಕಲಾ ಪದ್ಮನಾಭನ್, ಉದಯ ಆಚಾರ್ಯ, ಕವಿತಾ ಸನಿಲ್, ಪ್ರಭಾವತಿ, ನಾಗವೇಣಿ, ರೂಪ, ತನ್ವೀರ್ ಷಾ, ಸಿಂಥಿಯಾ, ಶಾಂತಲಾ ಗಟ್ಟಿ, ಚಂದ್ರಕಲಾ ಜೋಗಿ, ಚಂದ್ರಕಲಾ ಡಿರಾವ್, ಮಂಜುಳಾ ನಾಯ್ಕ್, ಶಬ್ಬೀರ್ ಎಸ್, ವಿವೇಕ್ ರಾಜ್ ಪೂಜಾರಿ, ಟಿ.ಕೆ.ಸುಧೀರ್, ಯೋಗಿಶ್ ಕುಮಾರ್, ಉದಯ ಕುಂದರ್, ಲಿಯಾಕತ್ ಶಾ, ರೂಪಚೇತನ್, ಸಿ.ಎಂ.ಮುಸ್ತಫಾ, ಸಲೀಂ ಪಾಂಡೇಶ್ವರ, ರಾಬಿನ್, ಚೇತನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.ದ.ಕ.ಜಿಲ್ಲಾ ಕಾಂಗ್ರೆಸ್ ಸೇವಾದಳ ಅಧ್ಯಕ್ಷ ಜೋಕ್ಕಿಂ ಡಿಸೋಜಾ ಧ್ವಜರಕ್ಷಕರಾಗಿ ಸಹಕರಿಸಿದರು.

Related Posts

Leave a Reply

Your email address will not be published.