ನ್ಯಾಯವಾದಿ ಮೇಲೆ ಪೊಲೀಸ್ ದೌರ್ಜನ್ಯ ಆರೋಪ : ದ.ಕ ಜಿಲ್ಲಾ ವಕೀಲರ ಸಂಘದಿಂದ ಪ್ರತಿಭಟನೆ

ಮಂಗಳೂರಿನ ಯುವ ನ್ಯಾಯವಾದಿ ಮೇಲೆ ಪೊಲೀಸ್ ದೌರ್ಜನ್ಯ ಆರೋಪ ವನ್ನು ಖಂಡಿಸಿ ದ.ಕ ಜಿಲ್ಲಾ ವಕೀಲರ ಸಂಘದಿಂದ ಮಂಗಳೂರು ಕೋರ್ಟ್ ಎದುರು ನೂರಾರು ವಕೀಲರಿಂದ ಪ್ರತಿಭಟನೆ ನಡೆಯಿತು.

ಬಂಟ್ವಾಳದ ವಕೀಲ ಕುಲದೀಪ್ ಶೆಟ್ಟಿ ಮೇಲೆ ಪುಂಜಾಲಕಟ್ಟೆ ಪೊಲೀಸರ ದೌರ್ಜನ್ಯ ಆರೋಪದಲ್ಲಿ ಸಿವಿಲ್ ಕೇಸ್ ನಲ್ಲಿ ಎಫ್.ಐ.ಆರ್ ದಾಖಲಿಸಿ ರಾತ್ರೋರಾತ್ರಿ ಮನೆಗೆ ನುಗ್ಗಿ ಬಂಧನಗೊಳಿಸಿ, ಅರೆಬೆತ್ತಲಾಗಿ ನ್ಯಾಯವಾದಿಯನ್ನ ಜೀಪಿನಲ್ಲಿ ಎಳೆದುಕೊಂಡು ಹೋಗಿ ದೌರ್ಜನ್ಯ ಆರೋಪವೆಸಗಿ, ನ್ಯಾಯಾವಾದಿ ಜೊತೆ ಕೆಟ್ಟದಾಗಿ ನಡೆದುಕೊಂಡ ಪೊಲೀಸರ ವರ್ತನೆ, ಜಾಗದ ವಿಚಾರದಲ್ಲಿ ಎಫ್. ಐ.ಆರ್ ದಾಖಲಿಸಿ ದೌರ್ಜನ್ಯ ಆರೋಪವನ್ನು ಖಂಡಿಸಿ, ಪಿಎಸ್ಸೈ ಅಮಾನುಗೊಳಿಸಬೇಕೆಂದು, ಪುಂಜಾಲಕಟ್ಟೆ ಪಿಎಸ್ಸೈ ವಿರುದ್ದ ವಕೀಲರ ಸಂಘ ಆಕ್ರೋಶ ವ್ಯಕ್ತಪಡಿಸಿದರು.
